ನ್ಯಾಷನಲ್ ಕ್ರಶ್ ,ನಟಿ ರಶ್ಮಿಕಾ ಮಂದಣ್ಣ (Rashmika mandanna) ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದಿಯಲ್ಲಿ ಇರ್ತಾರೆ. ಸಿನಿಮಾ, ನಟನೆ, ಕಾಂಟ್ರವರ್ಸಿ, ಲವ್ ಸ್ಟೋರಿ ಹೀಗೆ ಯಾವುದಾದ್ರೂ ಒಂದು ವಿಚಾರಕ್ಕೆ ಸುದ್ದಿಯಲ್ಲಿರ್ತಾರೆ. ಇದೀಗ ನಟಿ ರಶ್ಮಿಕಾ ಮಂದಣ್ಣ ಫೋಟೋಸ್ ಮತ್ತೆ ವೈರಲ್ ಆಗಿದೆ.

ಹೌದು, ತೆಲುಗು ನಟ ವಿಜಯ್ ದೇವರಕೊಂಡ (Vijay devarakonda) ಮತ್ತು ರಶ್ಮಿಕಾ ಜೊತೆಯಾಗಿ ಮತ್ತೊಮ್ಮೆ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ.ಈ ಜೋಡಿ ಜೊತೆಯಾಗಿ ರೆಸ್ಟೋರೆಂಟ್‌ನಲ್ಲಿ ಒಟ್ಟಿಗೆ ಕುಳಿತಿರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ (Social media) ವೈರಲ್ ಆಗಿದೆ.

ಕಳೆದ ಹಲವು ತಿಂಗಳುಗಳಿಂದಲೂ ಕೂಡ ಈ ಸ್ಟಾರ್ ಜೋಡಿ, ಡೇಟಿಂಗ್ ನಡೆಸುತ್ತಿದ್ದಾರೆ, ರಿಲೇಷನ್ಶಿಪ್ನಲ್ಲಿದ್ದಾರೆ ಎಂಬ ವದಂತಿಗಳು ಆಗಾಗ್ಗೆ ಕೇಳಿಬರ್ತಾನೆ ಇರುತ್ತೆ. ಈ ಮಧ್ಯೆ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ವಿಜಯ್ ತಾನು ಸಿಂಗಲ್ ಅಲ್ಲ, ಹೀರೋಯಿನ್ ಜೊತೆ ಡೇಟಿಂಗ್ ಮಾಡುತ್ತಿದ್ದೇನೆ ಅಂತ ಕೂಡ ಹೇಳಿದ್ದರು. ಇದೀಗ ಈ ಫೋಟೋ ನೋಡಿದ ನೆಟ್ಟಿಗರು ಈ ಜೋಡಿ ಲವ್ ನಲ್ಲಿರೋದು ಕನ್ಫರ್ಮ್ ಬಿಡಿ ಅಂದಿದ್ದಾರೆ.










