ಸೆಲೆಬ್ರೆಟಿಗಳು ಒಬ್ಬರು ಮತ್ತೊಬ್ಬರ ಹುಟ್ಟುಹಬ್ಬ, ದಿನಾಚರಣೆಗಳು, ಹಬ್ಬ ಹೀಗೆ ಎಲ್ಲದಕ್ಕೂ ವಿಶ್ ಮಾಡುವುದು ವಾಡಿಕೆ. ಅದರಲ್ಲೂ ಅಪ್ಪ-ಅಮ್ಮನನ್ನು ಆಗಾಗ ನೆನಪಿಸಿಕೊಳ್ಳುವುದು, ಅವರಿಗೆ ಶುಭ ಕೋರುವುದು ಸಹಜ. ಆದರೆ ನಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹೆತ್ತವರ ಮದುವೆ ವಾರ್ಷಿಕೋತ್ಸವ ದಿನಾಂಕವನ್ನೇ ಮರೆತು ಟ್ರೋಲ್ ಗೆ ಒಳಗಾಗಿದ್ದಾರೆ.
ಹೌದು, ರಶ್ಮಿಕಾ ಮಂದಣ್ಣ ಈ ಹಿಂದೆ ಹಲವು ನಟರ ಹುಟ್ಟು ಹಬ್ಬವನ್ನು ಮರೆತು ಟ್ರೋಲ್ ಆಗಿದ್ದನ್ನು ನೋಡಿದ್ದೀರಿ. ಅದರಲ್ಲೂ ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವು ಟಾಪ್ ನಟರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರದೇ ಅಭಿಮಾನಿಗಳಿಂದ ಹಿಡಿ ಶಾಪ ಹಾಕಿಸಿಕೊಂಡಿದ್ದಾರೆ. ಆದರೆ, ಈ ಬಾರಿ ಹೆತ್ತವರ ಮದುವೆ ದಿನವನ್ನೇ ಮರೆತು, ತಡವಾಗಿ ವಿಶ್ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾರೆ.
ಇನ್ ಸ್ಟಾಗ್ರಾಂನಲ್ಲಿ ಅಪ್ಪ ಅಮ್ಮನ ವಿವಾಹ ವಾರ್ಷಿಕೋತ್ಸವವನ್ನು ತಡವಾಗಿ ನೆನಪಿಸಿಕೊಂಡು ಭಾವನಾತ್ಮಕವಾಗಿ ಪೋಸ್ಟ್ ಮಾಡಿರುವ ರಶ್ಮಿಕಾ, ಈ ಜಗತ್ತಿಗೆ ನನ್ನನ್ನು ಕೊಡುಗೆಯಾಗಿ ನೀಡಿದ್ದಕ್ಕೆ ಮತ್ತು ಜನ್ಮ ಕೊಟ್ಟಿದ್ದಕ್ಕೆ ಧನ್ಯವಾದಗಳು. ಇವತ್ತು ನಾನು ಈ ಮಟ್ಟದಲ್ಲಿ ಇದ್ದೇನೆ ಅಂದರೆ, ಅದಕ್ಕೆ ನೀವೇ ಕಾರಣ. ಸದಾ ನಾನು ನಿಮಗೆ ಋಣಿಯಾಗಿರುವೆ’ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ, ತಡವಾಗಿ ಶುಭ ಕೋರುತ್ತಿರುವುದಾಗಿಯೂ ಹೇಳಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಭಿಮಾನಿಗಳು, ಪುಣ್ಯಕ್ಕೆ ತಡವಾದರೂ ವಿಶ್ ಮಾಡಿದ್ದೀರಲ್ಲ ಗ್ರೇಟ್ ಎಂದು ಹೇಳಿದಾರೆ. ಇನ್ನೂ ಕೆಲವರು ಮರೆತಿದ್ದರೆ ಇನ್ನೂ ಅನಾಹುತ ಆಗಿರುವುದು ಎಂದು ಎಚ್ಚರಿಸಿದ್ದಾರೆ. ತಂದೆ ತಾಯಿಯನ್ನೇ ಮರೆತಿರುವುದರಿಂದ ಈ ಹಿಂದಿನ ಎಲ್ಲಾ ಆವಾಂತರಗಳನ್ನು ಕ್ಷಮಿಸಲಾಗುವುದು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.