ಮುಸಲ್ಮಾನರ ಪ್ರಸಿದ್ದ ಹಬ್ಬವಾದ ಬಕ್ರೀದ್ಗೆ ಎಲ್ಲೆಡೆ ತಯಾರಿ ಜೋರಾಗಿ ನಡೆಯುತ್ತಿದ್ದು ಹಬ್ಬದ ಪ್ರಸಿದ್ದ ಆಕರ್ಷನೆ ಎಂದೇ ಹೇಳಬಹುದಾದ ಆಡುಗಳಿಗೆ ಉತ್ತಮ ಬೆಲೆ ದೊರೆಯುತ್ತಿವೆ.
ದೆಹಲಿಯ ಪ್ರಸಿದ್ದ ಮೀನಾ ಬಜಾರ್ ಸೇರಿದಂತೆ ದೇಶದ ಹಲವೆಡೆ ಕುರಿ ಹಾಗೂ ಮೇಕೆಗಳನ್ನು ಮಾರಾಟಕ್ಕೆ ಇಡಲಾಗಿದ್ದು ವಿಶೇಷ ತಳಿಗಳಿಗೆ ಬೇಡಿಕೆ ಹೆಚ್ಚಿದೆ.
ದೆಹಲಿಯ ಪ್ರಸಿದ್ದ ಮಾರುಕಟ್ಟೆ ಸ್ಥಳವಾದ ಮೀನಾ ಬಜಾರ್ನಲ್ಲಿ ಮೂರು ಮೇಕೆಗಳು ಅಧಿಕ ಮೊತ್ತಕ್ಕೆ ಮಾರಾಟವಾಗಿದ್ದು ಸಾರ್ವಕಾಲಿಕ ದಾಖಲೆಯಾಗಿದೆ. ಈ ಮೂರು ಮೇಕೆಗಳನ್ನು ಬಹಳ ಆಕರ್ಷನಿಯವಾಗಿ ಸಿಂಗಾರಗೊಂಡು ಗ್ರಾಹಕರ ಕಣ್ಮನ ಸೆಳೆದವು.
ಇದರಲ್ಲಿ ಒಂದು ವರ್ಷ ವಯಸ್ಸಿನ ಆಡು ಬರೋಬ್ಬರಿ 30 ಲಕ್ಷಕ್ಕೆ ಮಾರಾಟವಾದರೆ, ಇನ್ನೆರಡು ಆಡುಗಳು ತಲಾ 15 ಲಕ್ಷಕ್ಕೆ ಮಾರಾಟವಾಗಿವೆ. ಈ ಸುದ್ದಿ ಮಾರುಕಟ್ಟೆಯ ಸುತ್ತಮುತ್ತ ಪಸರಿಸುತ್ತಿದ್ದಂತೆಯೇ ಆಡುಗಳನ್ನು ನೋಡಲು ಜನರು ಮುಗಿಬಿದ್ದರು.

ಉತ್ತರಪ್ರದೇಶ ಮೂಲದ ಬುಲಂದರ್ ಶಹದ ಗುಡ್ಡು ಖಾನ್(35) ಆಡುಗಳ ಮಾಲೀಕ ಅವುಗಳು ಬೆಲೆ ಕಟ್ಟಲಾಗದ ವಸ್ತುಗಳು ಅವು ಅಪರೂಪದ ತಳಿಯ ಆಡುಗಳು. ಈ ಆಡುಗಳ ಮೇಲೆ ಮೊಹಮ್ಮದ್ ಹಾಗೂ ಅಲ್ಲಾ ಎಂದು ಬರೆಸಲಾಗಿದೆ ಆದ ಕಾರಣ ಹೆಚ್ಚಿನ ಬೆಲೆಗೆ ಮಾರಾಟವಾಗಿವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ನಾವು ಆಡುಗಳನ್ನ ಕಳೆದ ಒಂದು ವರ್ಷದಿಂದ ಪೌಷ್ಠಿಕ ಆಹಾರಗಳನ್ನು ಚೆನ್ನಾಗಿ ನೀಡಿದ್ದೇವೆ ನಮ್ಮಗೆ ನಂಬಿಕೆಯಿತ್ತು ನಮ್ಮ ತಳಿಗಳು ಉತ್ತಮ ಬೆಲೆಗೆ ಮಾರಾಟವಾಗುತ್ತಾವೆ ಎಂಬ ನಂಬಿಕೆಯಿತ್ತು ಎಂದಿದ್ದಾರೆ.
ಬೆಲೆಗಳನ್ನು ಹೇಗೆ ನಿರ್ಧರಿಸಲಾಗುತ್ತದೆ ಎಂದು ಕೇಳಿದಾಗ ಆಡುಗಳ ತೂಕ, ನೋಟ, ಎತ್ತರವನ್ನು ಗಮನಿಸಲಾಗುತ್ತದೆ. ನಕ್ಷತ್ರ ಅಥವಾ ಅರ್ಧ ಚಂದ್ರದ ಗುರುತು ಕಂಡು ಬಂದರೆ ಅವುಗಳ ಬೆಲೆ ಏಕಾಏಕಿ ಗಗನಕ್ಕೇರುತ್ತದೆ ಮತ್ತು ಅಂತಹ ಆಡುಗಳಿಗೆ ಬೇಡಿಕೆ ಹೆಚ್ಚಿರುತ್ತದೆ ಎಂದು ತಿಳಿಸಿದ್ದಾರೆ.
ಆದರೆ, 2019ರಲ್ಲಿ ಆದಷ್ಟು ವ್ಯಾಪಾರ ಈ ಭಾರೀ ಮಾರುಕಟ್ಟೆಯಲ್ಲಿ ಆಗಿಲ್ಲ ಶೇ.50ರಷ್ಟು ವ್ಯಾಪಾರ ವಹಿವಾಟು ಕುಸಿದಿದೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ತಲೆದೂರಿದ ಕಾರಣ ಇಲ್ಲಿ ನಮ್ಮಗೆ ಮಾರಾಟ ಮಾಡಲು ಅವಕಾಶ ನೀಡಿರಲಿಲ್ಲ ಎಂದು ಬೇಸರಿಸಿದ್ದಾರೆ.