ಸ್ಯಾಂಡಲ್ವುಡ್ ಕ್ಷೀನ್ ರಮ್ಯಾ ತಮ್ಮ ನಿರ್ಮಾಣ ಸಂಸ್ಥೆ ಆ್ಯಪಲ್ ಬಾಕ್ಸ್ ಸ್ಟುಡಿಯೋ ಮೂಲಕ ನಿರ್ಮಿಸುತ್ತಿರುವ ಚೊಚ್ಚಲ ಚಿತ್ರ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರಕ್ಕೆ ಇದೀಗ ಸಂಕಷ್ಟ ಎದುರಾಗಿದೆ.
ಹಿರಿಯ ನಿರ್ಮಾಪಕ, ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಟೈಟಲ್ ಬಳಸಕೂಡದು ಎಂದು ಆಗ್ರಹಿಸಿ ತಮ್ಮ ವಕೀಲರ ಮುಕೇನ ಚಲನಚಿತ್ರ ವಾನೀಜ್ಯ ಮಂಡಳಿಗೆ ನೋಟಿಸ್ ಜಾಡಿ ಮಾಡಿದ್ದಾರೆ.
ಎಸ್.ವಿ.ರಾಜೇಂದ್ರ ಸಿಂಗ್ ಬಾಬುರವರು ತಮ್ಮ ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಟೈಟಲ್ಅನ್ನು ಮೊದಲೇ ನೋಂದಣಿ ಮಾಡಿರುತ್ತಾರೆ. ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್, ಸುಹಾಸಿನಿ ಸೇರಿಂದತೆ ಅನೇಕರು ನಟಿಸಿದ್ದು ಚಿತ್ರದ ಶೇ.80ರಷ್ಟು ಚಿತ್ರೀಕರಣ ಮುಗಿದಿರುತ್ತದೆ. ಆದರೆ, ಅಂಬರೀಷ್ರವರ ಅಕಾಲಿಕ ನಿಧನದಿಂದಾಗಿ ಕಾರಣಾಂತರಗಳಿಂದ ಚಿತ್ರೀಕರಣ ಸ್ಥಗಿತವಾಗಿರುತ್ತದೆ.

ಪ್ರಸ್ತುತ ಈ ಶೀರ್ಷಿಕೆಯೂ ಅವರ ನಿರ್ದೇಶನದ ಬಣ್ಣದ ಗೆಜ್ಜೆ ಚಿತ್ರದ ಪ್ರಸಿದ್ದ ಹಾಡಿನ ಶೀರ್ಷಿಕೆಯಾಗಿರುತ್ತದೆ. ಈ ಶೀರ್ಷಿಕೆಯನ್ನು ಬಳಸಲು ಯಾರಿಗೂ ಯಾವುದೇ ವಿಧವಾದ ಹಕ್ಕು ಇರುವುದಿಲ್ಲ ಹೀಗೆ ಮಾಡಿದ್ದಲ್ಲಿ ಕೃತಿ ಚೌರ್ಯವಾಗುತ್ತದೆ ಮತ್ತು ಆ ಹೆಸರನ್ನು ಕೊಡಬಾರದು ಒಂದು ವೇಳೆ ಇದನ್ನು ಕಡೆಗಣಿಸಿ ನಿರ್ಮಾಪಕರಿಗೆ ನೀಡಿದ್ದಲ್ಲಿ ಕಠಿಣ ಕಾನೂನು ಕ್ರಮ ನಡೆಸಲಾಗುವುದು ಎಂದು ವಾಣೀಜ್ಯ ಮಂಡಳಿಗೆ ನೀಡಿರುವ ನೋಟಿಸ್ನಲ್ಲಿ ತಿಳಿಸಲಾಗಿದೆ.
ಚಿತ್ರಕ್ಕೆ ರಾಜ್.ಬಿ.ಶೆಟ್ಟಿ ಆಕ್ಷನ್ ಕಟ್ ಹೇಳಿದ್ದು ನಾಯಕನಾಗಿಯೂ ಸಹ ನಟಿಸಿದ್ದಾರೆ. ರಾಜ್ಗೆ ಜೋಡಿಯಾಗಿ ಸಿರಿ ರವಿಕುಮಾರ್ ನಟಿಸಿದ್ದು ಗರುಡ ಗಮನ ರಿಷಭ ವಾಹನ ಚಿತ್ರದಲ್ಲಿ ಕೆಲಸ ಮಾಡಿದ್ದ ತಾಂತ್ರಿಕ ಬಳಗವೇ ಈ ಚಿತ್ರಕ್ಕೂ ಸಹ ಕೆಲಸ ಅಮಡುತ್ತಿದೆ. ಚಿತ್ರಕ್ಕೆ ರಮ್ಯಾ ಜೆತ ಲೈಟರ್ ಬುದ್ದ ಫಿಲಂಸ್ ಬಂಡವಾಳ ಹೂಡಿದೆ.






