ಮೋಹಕ ತಾರೆ, ಸ್ಯಾಂಡಲ್ವುಡ್ ಕ್ಲೀನ್ ರಮ್ಯಾ ತಮ್ಮ 42ನೇ ಜನ್ಮದಿನವನ್ನು ಕೀನ್ಯಾದ ಮಸಾಯಿ ಮಾರದಲ್ಲಿ ಆಚರಿಸಿಕೊಂಡಿದ್ದು, ಈ ಮರೆಯಲಾಗದ ಕ್ಷಣಗಳನ್ನು ರಮ್ಯಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ರಮ್ಯಾ ತಮ್ಮ ಆಪ್ತ ಗೆಳೆಯರೊಂದಿಗೆ ಮಸಾಯಿಮಾರಗೆ ತೆರಳಿದ್ದು, ತಾವು ಸೆರೆ ಹಿಡಿದ ಪ್ರಾಣಿಗಳ ಫೋಟೊಗಳನ್ನು ರಮ್ಯಾ ಹಂಚಿಕೊಂಡಿದ್ದಾರೆ. ಆ ಬಳಿಕ ಮಸಾಯಿಮಾರದಲ್ಲೇ ಕೇಕ್ ಕತ್ತರಿಸಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಕಳೆದ ಹಲವು ತಿಂಗಳಿಂದ ರಮ್ಯಾ ಸಿಬೆಎಂ ರಂಗ ಹಾಗೂ ರಾಜಕಾರಣದಿಂದ ದೂರ ಉಳಿದಿದ್ದು, ವಾಪಸ್ ಬನ್ನಿ ರಮ್ಯಾ ಅಂತ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.