ಬೆಂಗಳೂರಿನ ರಾಮೇಶ್ವರಂ ಕೆಫೆ (Rameshwaram cafe) ಸ್ಪೋಟ ಪ್ರಕರಣದಲ್ಲಿ 5ನೇ ಆರೋಪಿಯನ್ನು ಎನ್‌ಐಎ (NIA) ಅಧಿಕಾರಿಗಳು ಬಂಧಿಸಿದ್ದಾರೆ. ಹುಬ್ಬಳ್ಳಿಯ (Hubli) ಶೋಯಿಬ್ ಅಹಮ್ಮದ್ ಮಿರ್ಜಾ (Shoaib ahemad mirja) ಅಲಿಯಾಸ್ ಚೋಟು ಅರೆಸ್ಟ್ ಆಗಿದ್ದಾನೆ. ಈತ ಎಲ್‌ಇಟಿ ಭಯೋತ್ಪಾದನೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿ ಹೊರಬಂದಿದ್ದ.

ಇದೇ ಶೋಯಿಬ್ ಅಹಮ್ಮದ್ ಮಿರ್ಜಾ ಇದೀಗ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣದಲ್ಲೂ ಭಾಗಿಯಾಗಿದ್ದಾನೆ. ಈ ಕುರಿತು ಎನ್‌ಐಎ ದಾಳಿ ನಡೆಸಿ ಶೋಯಿಬ್ ಅಲಿಯಾಸ್ ಬಂಧಿಸಿದೆ. ಬೆಂಗಳೂರಿನಲ್ಲಿ ಬಹಿರಂಗಗೊಂಡ ಎಲ್‌ಇಟಿ (LET) ಭಯೋತ್ಪಾದನೆ ಷಡ್ಯಂತ್ರ ಪ್ರಕರಣದಲ್ಲಿ ಇದೇ ಶೋಯಿಬ್ ಅಹಮ್ಮದ್ ಮಿರ್ಜಾ ಅಪರಾಧಿ ಎಂದು ಸಾಬೀತಾಗಿ ಶಿಕ್ಷೆ ಅನುಭವಿಸಿದ್ದ.

35 ವರ್ಷದ ಶೋಯಿಬ್ ಹುಬ್ಬಳ್ಳಿಯಲ್ಲಿ ನೆಲೆಸಿದ್ದು, ಇಲ್ಲಿಂದರೆ ಹಲವು ಉಗ್ರ ಕೃತ್ಯಗಳಿಗೆ ಸಂಚು ರೂಪಿಸಿದ್ದ. ಇಷ್ಟೇ ಅಲ್ಲದೇ ರಹಸ್ಯವಾಗಿ ನೆರವು ನೀಡಿದ್ದ ಅನ್ನೋದು ಎನ್‌ಐಎ ಬಂಧನದ ಬೆನ್ನಲ್ಲೇ ಬಹಿರಂಗವಾಗಿದೆ. ಶಿಕ್ಷೆ ಅನುಭವಿಸಿ ಬಂದರೂ ನಂತರ ಇಂಥದ್ದೇ ಕೃತ್ಯಗಳಲ್ಲಿ ಭಾಗಿಯಾಗಿರೋದು ಇಂಥ ಭಯೋತ್ಪಾಧಕರ ಮನಸ್ಥಿತಿಯನ್ನು ತೆರೆದಿಟ್ಟಿದೆ.