
ಕೋಲಾರ: ಕೋಲಾರ ಕಾಂಗ್ರೆಸ್ ಸಭೆಯಲ್ಲಿ ಮಾರಾಮಾರಿ ನಡೆಸಿದ ಪ್ರಕರಣದಲ್ಲಿ ನಾಲ್ವರು ಮುಖಂಡರು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಲಾಗಿದೆ. ಅಮಾನತುಗೊಳಿಸಿ ಜಿಲ್ಲಾಧ್ಯಕ್ಷ್ಯ ಲಕ್ಷ್ಮೀನಾರಾಯಣ ಆದೇಶ ಮಾಡಿದ್ದಾರೆ.
ಕಾಂಗ್ರೆಸ್‌ನಿಂದ ಕೋಲಾರ ಜಿಲ್ಲಾ ಗ್ಯಾರೆಂಟಿ ಸಮಿತಿ ಅಧ್ಯಕ್ಷ ವೈ ಶಿವಕುಮಾರ್, ನಗರಸಭೆ ಸದಸ್ಯ ಅಂಬರೀಶ್, ಮೈಲಾಂಡಹಳ್ಳಿ ಮುರಳಿ, ಚೌಡರೆಡ್ಡಿ ಅಮಾನತುಗೊಂಡ ಕಾಂಗ್ರೆಸ್ ನಾಯಕರು. ಅಮಾನತುಗೊಂಡ ನಾಲ್ವರು, ಕಾಂಗ್ರೆಸ್ MLC ಅನಿಲ್ ಕುಮಾರ್ ಬೆಂಬಲಿಗರು ಎನ್ನಲಾಗಿದೆ.
ಸೆಪ್ಟೆಂಬರ್ 28 ರಂದು ಕೋಲಾರದ ನಂದಿನಿ ಪ್ಯಾಲೇಸ್‌ನಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಜಿಲ್ಲಾಧ್ಯಕ್ಷ್ಯ ಲಕ್ಷ್ಮೀನಾರಾಯಣ, ನಗರಾಧ್ಯಕ್ಷ್ಯ ಪ್ರಸಾದ್ ಬಾಬುಗೆ ಥಳಿಸಿದ್ದರು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣದ MLC ಅನಿಲ್ ಕುಮಾರ್ ಹಾಗು ಶಾಸಕ ಕೊತ್ತೂರು ಮಂಜುನಾತ್‌ಗೆ ಈ ಅಮಾನತು ಮಾಡುವ ಮೂಲಕ ಶಾಕ್ ಕೊಟ್ಟಿದ್ದಾರೆ ಜಿಲ್ಲಾಧ್ಯಕ್ಷ್ಯ ಲಕ್ಷ್ಮೀನಾರಾಯಣ.