ಬೆಂಗಳೂರು-ಮೈಸೂರು (Mysuru Bangalore express highway) ರಸ್ತೆಯಲ್ಲಿ ದರೋಡೆ ಯತ್ನ (Robbery) ನಡೆದಿದೆ ಎಂಬ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿದಾಡುತ್ತಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಸದ್ಯ ವೈರಲ್ ಆಗಿರುವ ವೀಡಿಯೋ ಬಗ್ಗೆ ರಾಮನಗರ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಗಾರೆ ಕೆಲಸದವರು ಸಾರ್ವೆ ಮರ ಹಿಡಿದು ಹೆದ್ದಾರಿ ದಾಟಿದ್ದಾರೆ.ಇದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದರಿ ವ್ಯಕ್ತಿ ಯಾವುದೇ ಅಪರಾಧ ಮಾಡುವ ಉದ್ದೇಶ ಹೊಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಹಿನ್ನೆಲೆ ರಾಮನಗರ ಪೊಲೀಸರಿಂದ ಫ್ಯಾಕ್ಟ್ ಚೆಕ್ ನಡೆಸಲಾಗಿದೆ.

ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಒಳಗಾಗದೇ ಹೆದ್ದಾರಿಯಲ್ಲಿ ಪ್ರಯಾಣಿಸಬಹುದು ಎಂದು ಪ್ರಕಟಣೆ ಹೊರಡಿಸಲಾಗಿದೆ. ಎಕ್ಸ್‌ಪ್ರೆಸ್ ಹೈವೆಯಲ್ಲಿ ಮರ ಅಡ್ಡ ಇಟ್ಟು ದರೋಡೆಗೆ ಯತ್ನ ಮಾಡಲಾಗಿದೆ ಎಂದು ಎಕ್ಸ್ ನಲ್ಲಿ ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದರು.