ಸ್ಯಾಂಡಲ್ ವುಡ್ ಕ್ರೇಜಿ ಕ್ವೀನ್ ನಟಿ ರಕ್ಷಿತಾ (Rakshitha) ಪ್ರೇಮ್ ಅವರ ಸಹೋದರ ರಾಣಾ ಅವರು ಸರಳವಾಗಿ ತಮ್ಮ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಜೋಗಿ ಪ್ರೇಮ್ (Jogi Prem) ನಿರ್ದೇಶನದ ಏಕ್ ಲವ್ ಯಾ ಸಿನಿಮಾದಲ್ಲಿ ನಾಯಕನಾಗಿ ಬಣ್ಣ ಹಚ್ಚಿದ್ದ ನಟ ರಾಣಾ ನಿಶ್ಚಿತಾರ್ಥದ ಫೋಟೋವನ್ನು ರಕ್ಷಿತಾ ಪ್ರೇಮ್ ಶೇರ್ ಮಾಡಿದ್ದಾರೆ.
ನಟಿ ರಕ್ಷಿತಾ ಪ್ರೇಮ್ ಈ ಹೊಸ ಜೋಡಿಯ ಫೋಟೋ ಹಂಚಿಕೊಂಡು ಶುಭಕೋರಿದ್ದಾರೆ. ಈ ನಿಶ್ಚಿತಾರ್ಥದ ನಂತರ ರಾಣಾ ತಮ್ಮ ಸಂಗಾತಿಯ ಜೊತೆ ತೆಗೆದುಕೊಂಡಿರುವ ಫೋಟೋಗಳೂ ಸದ್ಯ ವೈರಲ್ ಆಗಿವೆ.
ಜೋಗಿ ಪ್ರೇಮ್ ಭಾಮೈದುನ ರಾಣಾ, ‘ಏಕ್ ಲವ್ ಯಾ’ ಸಿನಿಮಾದ ಮೂಲಕ ಕನ್ನಡ ಸಿನಿ ಅಭಿಮಾನಿಗಳಿಗೆ ಪರಿಚಯವಾಗಿದ್ದರು. ಈ ಸಿನಿಮಾದ ಹಾಡುಗಳು ತುಂಬಾನೆ ಸೌಂಡ್ ಮಾಡಿತ್ತು ಮತ್ತು ಸಿನಿಮಾ ಕೂಡ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದಿತ್ತು.