
ನಟ ದರ್ಶನ್ (Actor darshan) ಅಭಿಮಾನಿಗಳ ವಿರುದ್ಧ ಸಮರ ಸಾರಿರುವ ನಟಿ ರಮ್ಯಾ (Actress ramya) ಅಶ್ಲೀಲವಾಗಿ ಸಂದೇಶ ಕಳುಹಿಸಿದ, ಕಮೆಂಟ್ಸ್ ಮಾಡಿದ ದರ್ಶನ್ ಅಭಿಮಾನಿಗಳ (Darshan fans) ವಿರುದ್ಧ ಕಾನೂನು ಹೋರಾಟ ಮಾಡಲು ಮುಂದಾಗಿದ್ದಾರೆ. ನಟ ದರ್ಶನ್ ಅಭಿಮಾನಿಗಳ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಲು ನಟಿ ರಮ್ಯಾ ನಿರ್ಧರಿಸಿದ್ದಾರೆ.

ಇಂದು (ಜು.28) ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನಟಿ ರಮ್ಯಾ ದೂರು ಸಲ್ಲಿಸಲು ಮುಂದಾಗಿದ್ದು, ರಮ್ಯಾ ಕೊಟ್ಟ ದೂರಿನ ಮೇಲೆ ಸೈಬರ್ ಪೊಲೀಸರು ತನಿಖೆ ನಡೆಸಲಿದ್ದಾರೆ. ಈ ದೂರಿನ ಜೊತೆ ಕಾಮೆಂಟ್‌ಗಳ ಸ್ತ್ರೀನ್ ಶಾಟ್ಸ್ ಕೂಡ ನಟಿ ರಮ್ಯಾ ನೀಡಲಿದ್ದು,ಈ ಆಧಾರದಲ್ಲಿ ಪೊಲೀಸರು ಕಾಮೆಂಟ್ ಮಾಡಿದ ವ್ಯಕ್ತಿಗಳ ವಿಚಾರಣೆ ನಡೆಸಲಿದ್ದಾರೆ.

ಈ ನಡುವೆ ನಟಿ ರಮ್ಯಾ ಹಾಗೂ ದರ್ಶನ್ ಫ್ಯಾನ್ಸ್ ನಡುವಿನ ವಾರ್ ಮಧ್ಯೆ ನಟಿ ರಕ್ಷಿತಾ ಕೂಡ ಎಂಟ್ರಿಯಾಗಿದ್ದಾರೆ.ನಟಿ ರಮ್ಯಾ ಹಾಗೂ ದರ್ಶನ್ ಫ್ಯಾನ್ಸ್ ವಾರ್ ವೈರಲ್ ಆಗ್ತಿದ್ದಂತೆ,ದರ್ಶನ್ ವಿಚಾರವಾಗಿ ರಕ್ಷಿತಾ ಪರೋಕ್ಷವಾಗಿ ಇನ್ಸ್‌ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ. ಆ ಮೂಲಕ ಮಾರ್ಮಿಕವಾಗಿ ರಮ್ಯಾ ಗೆ ಟಾಂಗ್ ಕೊಟ್ಟಂತಿದೆ.

ಜನರ ಮಾನಸಿಕ ಆರೋಗ್ಯವನ್ನ ನೀವು ನೋಡಲು ಸಾಧ್ಯವಿಲ್ಲ.ದಯವಿಟ್ಟು ಯಾವಾಗಲೂ ದಯೆಯಿಂದಿರಿ ಅಂತ ನಟಿ ರಕ್ಷಿತಾ ಪೋಸ್ಟ್ ಹಾಕಿದ್ದು,ರಮ್ಯಾ ಪೋಸ್ಟ್ ಗೆ ರಕ್ಷಿತಾ ಕೌಂಟರ್ ಕೊಟ್ರಾ ಎಂಬ ಚರ್ಚೆ ಜೋರಾಗಿದೆ.