ರಾಜ್ಯಸಭೆಗೆ ಶೀಘ್ರದಲ್ಲೇ ಚುನಾವಣೆ ನಡೆಯಲಿದ್ದು, ಒಂದು ಸ್ಥಾನ ಪಡೆಯುವಷ್ಟು ಮತಗಳನ್ನು ಹೊಂದಿರುವ ರಾಜ್ಯ BJP-JDS ಜೊತೆಗೆ ಸೇರಿಕೊಂಡು ಎರಡನೇ ಸ್ಥಾನವನ್ನೂ ಪಡೆಯುವ ಯೋಜನೆ ಮಾಡಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಲಾಗಿದೆ. ಸಭೆ ಬಳಿಕ ಮಾತನಾಡಿದ ಮಾಜಿ ಮಿನಿಸ್ಟರ್ ಸಿಟಿ ರವಿ, ಎರಡೂ ಸ್ಥಾನಗಳನ್ನು ಗೆಲ್ಲುವುದಕ್ಕೆ ನಮಗೆ 92 ಮತಗಳ ಅಗತ್ಯವಿದೆ. ಬಿಜೆಪಿ – ಜೆಡಿಎಸ್ ಮೈತ್ರಿ ಶಾಸಕರ ಬಲ 85-86 ಆಗಿವೆ. 2ನೇ ಅಭ್ಯರ್ಥಿ ಗೆಲ್ಲಿಸಲು ನಮಗೆ ಇನ್ನೂ ಆರು ಮತಗಳ ಕೊರತೆ ಬೀಳುತ್ತವೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರದ ಜೊತೆ ಸಮಾಲೋಚನೆ ಮಾಡಿ, ಎರಡನೇ ಅಭ್ಯರ್ಥಿ ಹಾಕುವ ಬಗ್ಗೆ ನಿರ್ಧಾರ ಮಾಡ್ತೇವೆ ಎಂದಿದ್ದಾರೆ.
ಮೊದಲ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಏನು ಮಾಡಬೇಕು ಅನ್ನೋ ಬಗ್ಗೆ ನಿರ್ಧಾರ ಮಾಡ್ತೇವೆ. 2ನೇ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚಿಸಿ ನಿರ್ಣಯ ಮಾಡುವ ಅಧಿಕಾರವನ್ನು ರಾಜ್ಯಾಧ್ಯಕ್ಷರಿಗೆ ಕೊಟ್ಟಿದ್ದೇವೆ. ರಾಜ್ಯಸಭಾ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ತಕ್ಷಣಕ್ಕೆ ಯಾವುದೇ ಶಿಫಾರಸು ಮಾಡದೇ ಇರುವ ಬಗ್ಗೆ ಇಂದಿನ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದಿದ್ದಾರೆ ಮಾಜಿ ಸಚಿವ ಸಿ.ಟಿ. ರವಿ. ನಾಲ್ಕು ಸ್ಥಾನಗಳ ಪೈಕಿ ಒಂದು ಸ್ಥಾನ ಮಾತ್ರ ಬಿಜೆಪಿ ಗೆಲ್ಲಲು ಅವಕಾಶ ಇದೆ. ಹಾಲಿ ಸದಸ್ಯರಾಗಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರೇ ಮತ್ತೆ ಅಭ್ಯರ್ಥಿಯಾಗುವುದಾದರೆ ಇಲ್ಲಿ ಯಾವುದೇ ಚರ್ಚೆ ಬೇಡ. ಒಂದು ವೇಳೆ ಬೇರೆಯವರು ಅಭ್ಯರ್ಥಿಯಾಗುವುದು ಅಂತಾದರೆ ಮಾತ್ರ ಮತ್ತೊಮ್ಮೆ ಚರ್ಚೆ ಮಾಡೋಣ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ.

ಕಳೆದ ಬಾರಿ ರಾಜ್ಯ ಕೋರ್ ಕಮಿಟಿ ಶಿಫಾರಸು ಮಾಡಿದ್ದ ಹೆಸರುಗಳನ್ನು ಬದಿಗೊತ್ತಿದ್ದ ಬಿಜೆಪಿ ಹೈಕಮಾಂಡ್, ತಾನೇ ಆಯ್ಕೆ ಮಾಡಿದ್ದ ಹೆಸರುಗಳ ಪಟ್ಟಿಯನ್ನು ರವಾನೆ ಮಾಡಿತ್ತು. ಆ ಘಟನೆ ರಾಜ್ಯ ಘಟಕಕ್ಕೆ ಭಾರೀ ಮುಜುಗರ ತಂದಿಟ್ಟಿತ್ತು. ಇದೀಗ ಮತ್ತ ಅದೇ ರೀತಿಯ ಸನ್ನಿವೇಶ ಎದುರಾಗುವು ಬೇಡ ಅನ್ನೋ ಕಾರಣಕ್ಕೆ ರಾಜ್ಯ ಬಿಜೆಪಿ ಘಟನೆ ಎಚ್ಚರಿಕೆಯ ಹೆಜ್ಜೆ ಇಡುವ ನಿಲುವು ತಳೆದಿದೆ. ಕೇಂದ್ರದ ನಾಯಕರು ತನ್ನದೇ ಆದ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ ಎನ್ನುವುದಾದರೆ ಯಾವುದೇ ಚರ್ಚೆ ಮಾಡದೆ ಮೌನಕ್ಕೆ ಶರಣಾಗುವುದು. ಒಂದು ವೇಳೆ ಪಟ್ಟಿ ಕಳುಹಿಸಿ ಅಂದರೆ ಮಾತ್ರ ಸಭೆ ಮಾಡಿ ಚರ್ಚಿಸಿ ನಿರ್ಧಾರ ಮಾಡುವುದು.

ರಾಜ್ಯಸಭೆ ಸ್ಥಾನಕ್ಕೆ ರಾಜ್ಯ ಬಿಜೆಪಿಯೇ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಹೈಕಮಾಂಡ್ ನಾಯಕರು ಸೂಚಿಸಿದರೆ ತೇಜಸ್ವಿನಿ ಅನಂತ್ ಕುಮಾರ್ ಹೆಸರು ಸೂಚಿಸುವಂತೆ ಪ್ರಸ್ತಾಪ ಮಾಡಲಾಗಿದೆ. ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಸಾಕಷ್ಟು ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅನಂತ್ ಕುಮಾರ್ ನಿಧನದ ಬಳಿಕ ನಿರ್ಲಕ್ಷ್ಯ ಮಾಡಿದ ಆರೋಪವೂ ಇದೆ. ಇದೇ ಕಾರಣದಿಂದ ರಾಜೀವ್ ಚಂದ್ರಶೇಖರ್ ಹೆಸರಿನ ಜೊತೆಗೆ ತೇಜಸ್ವಿನಿ ಅನಂತ್ ಕುಮಾರ್ ಹೆಸರು ಶಿಫಾರಸು ಮಾಡಬೇಕು. ಅವಶ್ಯಕತೆ ಬೀಳುವ ಮತಗಳನ್ನು ಪಡೆಯುವುದು ಹೇಗೆ..? ಅನ್ನೋ ಬಗ್ಗೆಯೂ ಚರ್ಚೆ ಮಾಡಲಾಗಿದೆ. ಕಾಂಗ್ರೆಸ್ 2018ರಲ್ಲಿ ಮಾಡಿದ್ದ ತಂತ್ರಗಾರಿಕೆಯನ್ನೇ ಮಾಡುತ್ತಾ ಅನ್ನೋದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.
#BJP #JDS #CTRavi #BYVijayendra #BSY
ಕೃಷ್ಣಮಣಿ