ಲೋಕಸಭೆ ಎಲೆಕ್ಷನ್ ಗೂ (Lokasabha election) ಮುನ್ನ ರಾಜಕೀಯ ಪಕ್ಷಗಳಿಗೆ ಸತ್ವ ಪರೀಕ್ಷೆಗೆ ಸಮಯ ನಿಗದಿಯಾಗಿದೆ.
ಕರ್ನಾಟಕ ಸೇರಿ 15 ರಾಜ್ಯಗಳ 56 ರಾಜ್ಯಸಭಾ ಸ್ಥಾನಗಳಿಗೆ ಫೆಬ್ರವರಿ 27 ರಂದು ಚುನಾವಣೆ ನಡೆಯಲಿದೆ. ರಾಜ್ಯದ ನಾಲ್ವರು ರಾಜ್ಯಸಭಾ ಸದಸ್ಯರಾದ (Rajyasabha Members) ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್ ನ ಡಾ. ಎಲ್. ಹನುಮಂತಯ್ಯ, ಜಿ.ಸಿ. ಚಂದ್ರಶೇಖರ್ ಮತ್ತು ಸೈಯದ್ ನಾಸಿರ್ ಹುಸೇನ್ ಅವರ ಅವಧಿ ಮುಕ್ತಾಯವಾಗುತ್ತಿದೆ.
13 ರಾಜ್ಯಗಳ 50 ರಾಜ್ಯಸಭಾ ಸದಸ್ಯರ ಅವಧಿ ಎಪ್ರಿಲ್ 2ರಂದು ಪೂರ್ಣಗೊಂಡರೆ ಎರಡು ರಾಜ್ಯಗಳ ಆರು ಸದಸ್ಯರು ಎಪ್ರಿಲ್ 3ರಂದು ನಿವೃತ್ತರಾಗಲಿದ್ದಾರೆ.

ಫೆಬ್ರವರಿ 8ರಂದು ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದೆ. ಫೆ. 15 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ, ಫೆ. 16ರಂದು ನಾಮಪತ್ರಗಳ ಪರಿಶೀಲನೆ, ಫೆಬ್ರವರಿ 20, ನಾಮಪತ್ರ ವಾಪಸಾತಿಗೆ ಅಂತಿಮ ದಿನವಾಗಿದೆ. ಫೆ. 27 ರಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಅಂದೇ ಸಂಜೆ 5ಗಂಟೆಗೆ ಮತ ಎಣಿಕೆ ನಡೆಯಲಿದೆ.

ಉತ್ತರ ಪ್ರದೇಶ(10), ಆಂಧ್ರಪ್ರದೇಶ(3), ಬಿಹಾರ (6), ಛತ್ತೀಸ್‌ಗಢ (1), ಗುಜರಾತ್ (4), ಹರಿಯಾಣ ( 1), ಹಿಮಾಚಲ ಪ್ರದೇಶ (1), ಕರ್ನಾಟಕ (4), ಮಧ್ಯಪ್ರದೇಶ (5), ಮಹಾರಾಷ್ಟ್ರ(6), ತೆಲಂಗಾಣ(3),ಉತ್ತರ ಪ್ರದೇಶ (10), ಉತ್ತರಾಖಂಡ (1), ಪಶ್ಚಿಮ ಬಂಗಾಳ( 5), ಒಡಿಶಾ( 3) ಮತ್ತು ರಾಜಸ್ಥಾನದ 3 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.