ಕಾಲಿವುಡ್ನ ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯ ರಜನಿಕಾಂತ್, ಆಕ್ಷನ್ ಕಟ್ ಹೇಳುತ್ತಿರುವ ʻಲಾಲ್ ಸಲಾಂʼ ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ನಟ ರಜನಿಕಾಂತ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ರಜನಿ ಕಾಣಿಸಿಕೊಳ್ತಿರೋ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ತಲೈವಾ ಹೊಸ ಅವತಾರ ನೋಡಿ ಕೆಲ ಅಭಿಮಾನಿಗಳಿಗೆ ಕೊಂಚ ಬೇಸರವಾಗಿದೆ.

ಹೌದು.. ಮಗಳು ಐಶ್ವರ್ಯ ನಿರ್ದೇಶನದ ʻಲಾಲ್ ಸಲಾಂʼ ಚಿತ್ರದಲ್ಲಿ ರಜನಿಕಾಂತ್ ಮೊಹಿದ್ದೀನ್ ಭಾಯ್ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶೇರ್ವಾನಿ ಉಡುಪು ಧರಿಸಿ ಸನ್ಗ್ಲಾಸ್ ತೊಟ್ಟು ತಲೆಗೆ ಟೋಪಿ ಹಾಕಿ ಎಂಟ್ರಿಕೊಟ್ಟಿರುವ ಸೂಪರ್ ಸ್ಟಾರ್ ಗೆಟಪ್ ನೋಡಿ, ತಲೈವಾರ ಹೊಸ ಲುಕ್ಗಾಗಿ ಕಾದುಕುಳಿತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ತಂದೆಯ ಪಾತ್ರಕ್ಕೆ ಇನ್ನಷ್ಟು ಪ್ರಾಮುಖ್ಯತೆ ಕೊಡಬಹುದಿತ್ತು ಅಂತ ನೆಟ್ಟಿಗರು ಮಾತನಾಡಿಕೊಳ್ತಿದ್ದಾರೆ.

ಈ ಚಿತ್ರದಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದು, ಜೀವಿತಾ ರಾಜಶೇಖರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಎ. ಆರ್ ರೆಹಮಾನ್ ಸಂಗೀತ, ವಿಷ್ಣು ರಂಗಸ್ವಾಮಿ ಛಾಯಾಗ್ರಹಣ ಈ ಸಿನಿಮಾಗಿದೆ. ಲಾಲ್ ಸಲಾಂ’ ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ಆಗಿದ್ದು ಕ್ರಿಕೆಟ್ ಹಿನ್ನೆಲೆಯಲ್ಲಿ ಕಥೆ ಸಾಗಲಿದೆ. ಇಂಡಿಯನ್, ಕೈದಿ ನಂಬರ್-150, ದರ್ಬಾರ್, ಪೊನ್ನಿಯಿನ್ ಸೆಲ್ವನ್ ಸರಣಿ ಸಿನಿಮಾ ನಿರ್ಮಿಸಿರುವ ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ಹೌಸ್ ಲಾಲ್ ಸಲಾಂ ಚಿತ್ರ ನಿರ್ಮಾಣ ಮಾಡುತ್ತಿದೆ
