ಕನ್ನಡ ರಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಪರಸ್ಪರ ಪ್ರೀತಿಸಿ 2020ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಾಲ್ಕು ವರ್ಷಗಳ ವೈವಾಹಿಕ ಜೀವನದ ಬಳಿಕ, 2024ರಲ್ಲಿ ಇಬ್ಬರೂ ವಿಚ್ಛೇದನ ಪಡೆದು ಬೇರ್ಪಟ್ಟಿದ್ದರು.ಇದೀಗ ಚಂದನ್ ಶೆಟ್ಟಿ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಎರಡನೇ ಮದುವೆ ಕುರಿತು ಕೇಳಿಬರುತ್ತಿದ್ದ ಮಾತುಗಳಿಗೆ ಸ್ಪಷ್ಟನೆ ನೀಡಿರುವ ಅವರು, ಇದು ಗಾಸಿಪ್ ಅಲ್ಲವೆಂದು ಸ್ವತಃ ಹೇಳಿದ್ದಾರೆ.

ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ ಅವರು, ವಿಚ್ಛೇದನದ ಸಮಯದಲ್ಲಿ ತೀವ್ರ ಮನೋವ್ಯಥೆ ಅನುಭವಿಸಿದ್ದಾಗಿ ಹಾಗೂ ಅದರ ಪರಿಣಾಮ ತಮ್ಮ ಕೆಲಸದ ಮೇಲೂ ಬಿದ್ದಿತೆಂದು ತಿಳಿಸಿದ್ದಾರೆ.“ಡಿವೋರ್ಸ್ ಆಗಿ ಎರಡು ವರ್ಷಗಳಾದರೂ ಮದುವೆ ಬಗ್ಗೆ ನಂಬಿಕೆ ಕಳೆದುಕೊಂಡಿಲ್ಲ. ಮುಂದಿನ ವರ್ಷ ಮತ್ತೆ ಮದುವೆ ಆಗುವ ನಿರ್ಧಾರ ಮಾಡಿದ್ದೇನೆ,” ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.

ಮೊದಲ ಮದುವೆಯಲ್ಲಿ ನಡೆದ ತಪ್ಪುಗಳನ್ನು ಮತ್ತೆ ಮಾಡದೆ, ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡೇ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.ಹಾಗೆಯೇ, “ಅಪ್ಪ-ಅಮ್ಮ ಒಪ್ಪಿಗೆ ಪಡೆದ ನಂತರವೇ ಮದುವೆ ಆಗುತ್ತೇನೆ. ಈಗಾಗಲೇ ಒಂದೆರಡು ಹುಡುಗಿಯರನ್ನು ನೋಡಿದ್ದೇನೆ,” ಎಂದು ತಮ್ಮ ಮುಂದಿನ ಜೀವನದ ಬಗ್ಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ.






