ಸರ್ಕಾರ ಮಾಡಿರುವ ಪಠ್ಯ ಪರಿಷ್ಕರಣೆ ಒಂದು ಹೇಯ ಕೃತ್ಯ. ಇದು ಸಂವಿಧಾನವನ್ನು ನಿಷ್ಕ್ರಿಯಗೊಳಿಸುವದೇ ಇದರ ಮುಖ್ಯ ಉದ್ದೇಶ. ಪಠ್ಯ ಶಾಲಾ ಮಕ್ಕಳಿಗೆ ಮಾತ್ರ ಸಂಭಂದಿಸಿದ್ದಲ್ಲ. ಈ ಪರಿಷ್ಕರಣೆಗೆ ನಾವೆಲ್ಲರು ನೇರವಾಗಿ ಕನೆಕ್ಟ್ ಆಗಿದ್ದೇವೆ ಎಂದು ಚಿಂತಕ ರಾಜೇಂದ್ರ ಚನ್ನಿ ಅಭಿಪ್ರಾಯಪಟ್ಟಿದ್ದಾರೆ.
ಗಾಂಧಿನ ಭವನದಲ್ಲಿ ನಡೆಯುತ್ತಿರುವ ಪಠ್ಯ ಪರಿಷ್ಕರಣೆ – ಶಿಕ್ಷಣ ತಜ್ಞರ ಜೊತೆ ಸಮಾಲೋಚನಾ ಸಭೆಯಲ್ಲಿ ಮಾತಾಡಿದ ಅವರು, ಪಠ್ಯ ಎಂದರೆ ಜ್ಞಾನವನ್ನು ಟ್ರಾನ್ಸ್ಫರ್ ಮಾಡುವುದಲ್ಲ ಬದಲಿಗೆ ಜ್ಞಾನವನ್ನು ಅಭಿವೃದ್ಧಿಗೊಳಿಸುವುದು. ಇತಿಹಾಸ ಇದ್ದ ಹಾಗೆ ಮಕ್ಕಳಿಗೆ ಹೇಳಿಕೊಡ ಬೇಕು. ಆದರೆ ಸರ್ಕಾರ ನಡೆಸಿರುವ ಈ ಪರಿಷ್ಕರಣೆ ಈ ನೀತಿಗೆ ವಿರುದ್ಧವಾದದ್ದು ಎಂದು ಹೇಳಿದರು.
ಈ ಪರಿಷ್ಕರಣೆ ಮಾಡಿಯಾಗಿದೆ. ಹೀಗಾಗಿ ಮಕ್ಕಳ ಪೋಷಕರು ಮೇಲೆ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು. ಮಕ್ಕಳ ಮೇಲೆ ವಿಶೇಷವಾದ ನಿಗ ಇಟ್ಟುಕೊಳ್ಳಬೇಕು. ಪೋಷಕರು ಈ ಪರಿಷ್ಕರಣೆಯಾದ ಪಠ್ಯವನ್ನು ತಿರಸ್ಕರಿಸಿಬೇಕು. ಇದಕ್ಕೆ ಪೋಷಕರಿಗೆ ಸಂವಿಧಾನ ಕೊಟ್ಟ ಅಧಿಕಾರ. ಈ ಹಠಮಾರಿ ಸರ್ಕಾರ ಮರು ಪರಿಷ್ಕರಣೆ ನಡೆಸಿದೇ ಹೋದರು, ಮರು ಪರಿಷ್ಕರಣೆ ಮಾಡುವವರೆಗೆ ನಾವು ಬಿಡುವುದಿಲ್ಲ ಎನ್ನುವ ಶಪಥ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಒಂದ ತರಗತಿಯಲ್ಲಿ ಎಲ್ಲಾ ಜಾತಿ, ಧರ್ಮದ ಮಕ್ಕಳು ಬಂದು ಕೂರುತ್ತಾರೆ. ಅದೊಂದು ಸಮಾಜ. ಹೀಗಾಗಿ ತರಗತಿಗಳಿಗೆ ಗೋಡೆಗಳಿಲ್ಲ. ಮಕ್ಕಳಿಗೆ ಮೌಲ್ಯಾಧಾರಿತವಾದ ಶಿಕ್ಷಣದ ಅಗತ್ಯವಿದೆಯೇ ಹೊರತು, ಈ ರೀತಿಯ ದ್ವೇಷವಲ್ಲ ಎಂದು ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಇಂಗ್ಲೀಷ್ ಪ್ರೊಫೆಸರ್ ರಾಜೇಂದ್ರ ಚನ್ನಿ ಹೇಳಿದರು.