ಈ ಬಾರಿಯ ಬಿಗ್ ಬಾಸ್(Bigg Boss) ಕನ್ನಡದಲ್ಲಿ ಒಂದಾದ ಮೇಲೊಂದು ಮೆಗಾ ಟ್ವಿಸ್ಟ್‌ಗಳು ಇದ್ದೇ ಇದೆ. ಹಿಂದಿನ ಎಲ್ಲಾ ಸೀಸನ್‌ಗಳಿಗಿಂತ ಈ ಬಾರಿಯ ಸೀಸನ್ ಅತಿ ಹೆಚ್ಚು ವಿಭಿನ್ನವಾಗಿದೆ.

ಈ ಸೀಸನ್ ಆರಂಭವೇ ವಿಶೇಷವಾಗಿದ್ದು, ಒಂಟಿ ಜಂಟಿ ಪರಿಕಲ್ಪನೆಯೊಂದಿಗೆ ಒಂದಿಷ್ಟು ಜನ ಒಂಟಿಯಾಗಿ, ಒಂದಿಷ್ಟು ಜನ ಜಂಟಿಯಾಗಿ ಮನೆ ಪ್ರವೇಶಿಸಿದರು. ಇದರಿಂದ ಕೆಲ ಅರ್ಹತೆ ಇರುವ ಸ್ಪರ್ಧಿಗಳು ಬೇಗವೇ ಆಟ ಮುಗಿಸುವಂತಾಯಿತು. ಅಲ್ಲದೇ ಈ ಬಾರಿ ಮೂರನೇ ವಾರಕ್ಕೆ ಒಂದು ಗ್ರ್ಯಾಂಡ್ ಫಿನಾಲೆ ನಡೆದಿದ್ದು, ಮತ್ತೆ ಮೂವರು ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಪಡೆದರು.

ಕಥೆಯಲ್ಲಿ ಇನ್ನೂ ಹೊಸ ತಿರುವು ಎನ್ನುವಂತೆ 58 ದಿನ ಪೂರೈಸಿರುವ ಬಿಗ್ ಬಾಸ್ ಮನೆಗೆ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳಾದ ರಜತ್ (Rajath) ಹಾಗೂ ಚೈತ್ರಾ(Chaithra) ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಇದು ಪ್ರೇಕ್ಷಕರ ಅಸಮಾಧಾನಕ್ಕೂ ಕೂಡ ಕಾರಣವಾಗಿದೆ. ಅರ್ಧ ಸೀಸನ್ ಮುಗಿದ ಮೇಲೆ ಕಳೆದ ಸೀಸನ್ ಸ್ಪರ್ಧಿಗಳು ಬೇಕಿತ್ತಾ ಎಂದು ಪ್ರಶ್ನಿಸುತ್ತಿದ್ದಾರೆ.

ಆದರೆ ಇದೀಗ ಚೈತ್ರಾ ಹಾಗೂ ರಜತ್ ಬಿಗ್ ಬಾಸ್ ಆಟದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಇಂಟ್ರಸ್ಟಿಂಗ್ ವಿಚಾರವೊಂದು ಹರಿದಾಡುತ್ತಿದೆ. ಚೈತ್ರಾ ಹಾಗೂ ರಜತ್ ಈ ವಾರಾಂತ್ಯದೊಳಗೆ ಮನೆಯಿಂದ ಹೊರಗೆ ಬರುತ್ತಿದ್ದಾರೆ. ಈಗಿರುವ ಸ್ಪರ್ಧಿಗಳಿಗೆ ಚಮಕ್ ಕೊಡಲು ರಜತ್ ಹಾಗೂ ಚೈತ್ರಾ ಅವರನ್ನು ಒಂದು ವಾರ ಹೆಚ್ಚಾಗಿ ಮನೆಯಲ್ಲಿ ಉಳಿಸಲಾಗಿದೆ ಎನ್ನಲಾಗಿದೆ. ಹೀಗಾಗಿ ಈ ವಾರದ ನಾಮಿನೇಷನ್‌ನಲ್ಲಿ ಅವರಿಬ್ಬರ ಹೆಸರನ್ನು ತೆಗೆದುಕೊಂಡಿಲ್ಲ. ಜೊತೆಗೆ ಕ್ಯಾಪ್ಟನ್ಸಿ ಟಾಸ್ಕ್‌ಗೂ ಕೂಡ ಇವರಿಬ್ಬರೇ ಜೊತೆಯಾಗಿದ್ದಾರೆ. ಹೀಗಾಗಿ ರಜತ್ ಹಾಗೂ ಚೈತ್ರಾ ಈ ವಾರವೇ ಬಿಗ್ ಬಾಸ್ ಮನೆಯಿಂದ ಹೊರ ಹೋಗುತ್ತಾರೆ ಎನ್ನುವ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.











