ರಾಜಸ್ಥಾನದ ಉದಯಪುರ ದರ್ಜಿ ಕೊಲೆ ಪ್ರಕರನಕ್ಕೆ ಸಂಬಂಧಿಸಿದಂತೆ ಮೃತನ ಕುಟುಂಬಸ್ಥರನ್ನು ಭೇಟಿ ಮಾಡಿ ರಾಜಸ್ಥಾನ ಸಿಎಂ ಆಶೋಕ್ ಗೆಹ್ಲೋಟ್ ಸಾಂತ್ವಾನ ಹೇಳಿದ್ದಾರೆ.
ಈ ವೇಳೆ ಸರ್ಕಾರದ ವತಿಯಿಂದ 51 ಲಕ್ಷ ರೂಪಾಯಿ ಪರಿಹಾರ ಮೊತ್ತವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತ್ತು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಗೆಹ್ಲೋಟ್ ಇದು ಒಂದು ಹೀನಾಯ ಕೃತ್ಯ ಇಡೀ ದೇಶವೇ ಈ ಘಟನೆಯಿಂದಾಗಿ ಬೆಚ್ಚಿ ಬಿದ್ದಿದೆ ಆರೋಪಿಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ನಿಷೇಧಿತ ಸಂಘಟನೆಗಳ ಜೊತೆ ಸಂಪರ್ಕವಿರುವುದನ್ನು ಪತ್ತೆ ಹಚ್ಚಿದ ರಾಜಸ್ಥಾನ ಪೊಲೀಸರ ಕಾರ್ಯಪ್ರವೃತತ್ತೆಯನ್ನು ಶ್ಲಾಘಿಸಿದ್ದಾರೆ.
ಗೃಹ ಸಚಿವ ಅಮಿತ್ ಶಾರೊಂದಿಗೆ ಮಾತನಾಡಿ ತನಿಖೆಯನ್ನು ತಿಂಗಳೊಳಗೆ ಮುಗಿಸುವಂತೆ ಮನವಿ ಮಾಡಲಾಗುವುದು ಹಾಗೂ ಕುಟುಂಬಸ್ಥರಿಗೆ ಪೊಲೀಸ್ ಭದ್ರತೆಯನ್ನ ನೀಡಲಾಗುವುದು ಎಂದಿದ್ದಾರೆ.
ಈ ವೇಳೆ ಮಾತನಾಡಿದ ಕನ್ಹಯ್ಯಾ ಪುತ್ರ ಹಂತಕರನ್ನು ಗಲ್ಲಿಗೇರಿಸಬೇಕು ಅದಕ್ಕಿಂತ ಕಡಿಮೆ ಏನಿಲ್ಲ ಆರೋಪಿಗಳು 45 ದಿನಗಳ ಕಾಲ ಕರಾಚಿಯಲ್ಲಿ ವಾಸವಿದ್ದರು ಎಂದು ಕನ್ಹಯ್ಯಾ ಪುತ್ರ ಆರೋಪಿಸಿದ್ದಾರೆ.
ಈ ವೇಳೆ ಸಮುದಾಯದ ಮುಖಂಡರು ಮಾಧ್ಯಮದವರನ್ನು ಪ್ರಶ್ನೆ ಮಡದಂತೆ ತಡೆದರು ಮತ್ತು ಹುಡುಗನ ವಯಸ್ಸನಿನಲ್ಲಿ ಚಿಕ್ಕವನಾಗಿದ್ದು ಸಮುದಾಯದ ಮುಖಂಡರು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ ಎಂದು ತಿಳಿಸಿದ್ದಾರೆ.