ಹನಿಟ್ರ್ಯಾಪ್ ವಿಚಾರವಾಗಿ ಗೃಹ ಸಚಿವ ಪರಮೇಶ್ವರ್ಗೆ ಅಧಿಕೃತವಾಗಿ ದೂರು ನೀಡಿದ್ದಾರೆ ಸಚಿವ ಕೆ.ಎನ್.ರಾಜಣ್ಣ. ಸರ್ಕಾರಿ ನಿವಾಸದಲ್ಲಿ ಭೇಟಿಯಾಗಿ ಲಿಖಿತ ದೂರು ಸಲ್ಲಿಸಿದ್ದಾರೆ. ನಿನ್ನೆ ಸಂಜೆ ಭೇಟಿ ಮಾಡಿದ್ದ ಸಚಿವ ರಾಜಣ್ಣ, ಘಟನೆ ಬಗ್ಗೆ ಸವಿವರವಾದ ಮನವಿ ಪತ್ರವೊಂದನ್ನು ನೀಡಿದ್ದಾರೆ. ಈ ಬಗ್ಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪರಮೇಶ್ವರ್, ಸಹಕಾರಿ ಸಚಿವ ರಾಜಣ್ಣ ದೂರು ನೀಡಿದ್ದಾರೆ, ಸದನದಲ್ಲಿ ಹನಿಟ್ರ್ಯಾಪ್ ವಿಚಾರ ಚರ್ಚೆಗೆ ಬಂದಿತ್ತು. ನನ್ನ ಮೇಲೂ ಈ ಪ್ರಯತ್ನ ಆಗಿದೆ ಎಂದಿದ್ದರು. ತನಿಖೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ನಾನು ಸರ್ಕಾರದ ಪರವಾಗಿ ಉತ್ತರ ಕೊಟ್ಟಿದ್ದೆ. ಮುಂದಿನ ಕ್ರಮದ ಬಗ್ಗೆ ಸಿಎಂ ಜೊತೆ ಚರ್ಚಿಸ್ತೇವೆ ಎಂದಿದ್ದಾರೆ. ಇನ್ನು ನಾನು ದೂರು ಸ್ವೀಕರಿಸೋಕೆ ಸಾಧ್ಯವಿಲ್ಲ, ದೂರನ್ನ ಠಾಣೆಯಲ್ಲೇ ಕೊಡಬೇಕು. ಕಾನೂನು ತಜ್ಙರ ಜೊತೆ ಚರ್ಚಿಸಿ, ಮುಂದೆ ಏನು ಅನ್ನೋ ನಿರ್ಧಾರ ಮಾಡ್ತೇವೆ ಎಂದಿದ್ದಾರೆ.
ಕೆ ಎನ್ ರಾಜಣ್ಣ ಮಾತನಾಡಿ, ನನಗೆ ಏನು ಅನುಭವ ಆಗಿದೆ ಅದನ್ನ ಮಾತ್ರಾ ಮನವಿಯನ್ನು ಕೊಟ್ಟಿದ್ದೇನೆ. ಬೇರೆ ಯಾರ ಕುರಿತು ನಾನು ಮನವಿಯನ್ನು ಕೊಟ್ಟಿಲ್ಲ. ಇದು ಮೊದಲ ಬಾರಿ ಗೆ ನಡಿದಿಲ್ಲ. ಎಷ್ಟು ಜನ ನ್ಯಾಯಾಲಯದಿಂದ ಸ್ಟೇ ತಂದಿಲ್ವಾ..? ಅದಕ್ಕೆ ನಾನು ಇದರಲ್ಲಿ ಆ ರೀತಿ ಪರಿಸ್ಥಿತಿ ಇದೆ. ಅದಕ್ಕೆ ನಾನು ಬೇರೆ ಅವರು ಇದ್ದಾರೆ ಎಂದು ಹೇಳಿದ್ದೇನೆ. ವಿಧಾನಸಭೆಯಲ್ಲಿ ಏನು ಚರ್ಚೆ ನಡೆದಿದೆ, ಅದರ ಪೂರಕವಾಗಿ ನಾನು ಮನವಿ ಕೊಟ್ಟಿದ್ದೇನೆ ಎಂದಿದ್ದಾರೆ.

ಸಚಿವ ಕೆ.ಎನ್ ರಾಜಣ್ಣ ಅಂಡ್ ಸನ್ ವಿರುದ್ದ ಹನಿಟ್ರ್ಯಾಪ್ ಯತ್ನ ಪ್ರಕರಣದ ಬಗ್ಗೆ ಸಿಎಂ ಸಿದ್ದರಾಮಯ್ಯ ಭೇಟಿಯಾದ ಗೃಹ ಸಚಿವ ಡಾ.ಜಿ ಪರಮೇಶ್ವರ್, ತನಿಖೆ ಸಂಬಂಧ ಸಿಎಂ ಜೊತೆ ಚರ್ಚೆ ಮಾಡಿದ್ದಾರೆ. ವಿಧಾನಸಭೆಯಲ್ಲಿ ನಡೆದ ಚರ್ಚೆ ಆಧಾರದ ಮೇಲೆ ತನಿಖೆಗೆ ಸಚಿವ ರಾಜಣ್ಣ ಮನವಿ ಮಾಡಿದ್ದಾರೆ. ಈ ಬಗ್ಗೆ ಸಿಎಂ ಜೊತೆಗೆ ಹೋಂ ಮಿನಿಸ್ಟರ್ ಚರ್ಚೆ ಮಾಡಿದ್ದಾರೆ.
ಮಂಡಿ ನೋವಿನಿಂದ ಬಳಲುತ್ತಿರುವ ಸಿಎಂ ಸಿದ್ದರಾಮಯ್ಯ ರೊಟಿನ್ ಚೆಕಪ್ ಮಾಡಿಸಲು ಆಸ್ಪತ್ರೆಗೆ ತೆರಳಿದ್ದರು. ಮಆಪ್ತ ಸಚಿವ ಜಮೀರ್ ಅಹಮದ್ ಜೊತೆ ಆಸ್ಪತ್ರೆಗೆ ತೆರಳಿದ್ರಿಂದ ಸಿಎಂಗಾಗಿ ಕಾದು ಕುಳಿತಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಆಸ್ಪತ್ರೆಯಿಂದ ವಾಪಸ್ ಆದ ಬಳಿಕ ಭೇಟಿಯಾಗಿ ಚರ್ಚೆ ಮಾಡಿದ್ದಾರೆ.

ಹನಿಟ್ರ್ಯಾಪ್ ಬಗ್ಗೆ ಸಚಿವ ರಾಜಣ್ಣ ಹೇಳಿಕೆ ವಿಚಾರವಾಗಿ ಸಚಿವ ಬೋಸರಾಜು ಮಾತನಾಡಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿ ಒಟ್ಟು 48 ಮಂದಿ ಮೇಲೆ ಹನಿಟ್ರ್ಯಾಪ್ ಆಗಿದೆ ಎಂದು ಹೇಳಿದ್ದಾರೆ. ಯಾರೋ ಒಬ್ಬರನ್ನು ಗುರಿಯಾಗಿಸಿ ಹೇಳಿದಲ್ಲ, ಅದರ ಬಗ್ಗೆ ನನ್ನ ಬಳಿ ಯಾವುದೇ ಆಧಾರ ಇಲ್ಲ ಎಂದು ಈಗ ಹೇಳುತ್ತಿದ್ದಾರೆ. ಅದರ ಬಗ್ಗೆ ತನಿಖೆ ಆದರೆ ಯಾರು ತಪ್ಪಿತಸ್ಥರು ಎಂಬುದು ಗೊತ್ತಾಗಲಿದೆ ಎಂದಿದ್ದಾರೆ. ಇನ್ನು ಆ ಬಗ್ಗೆ ತನಿಖೆ ನಡೆಸುವುದಾಗಿ ಸಿಎಂ ಹೇಳಿದ್ದಾರೆ, ತನಿಖೆ ಆಗುತ್ತದೆ ಎಂದಿದ್ದಾರೆ.
ಹನಿಟ್ರ್ಯಾಪ್ ಯಾರು ಮಾಡಲು ಆಗುವುದಿಲ್ಲ, ಮಾಡಿಸಲು ಆಗುವುದಿಲ್ಲ ಎಂದು ಸಚಿವ ಮಂಕಾಳ ವೈದ್ಯ ಹೇಳಿದ್ದಾರೆ. ಕಾರವಾರದಲ್ಲಿ ಮಾತನಾಡಿದ ವೈದ್ಯ, ನಾವು ಮಾಡುವ ತಪ್ಪಿಗೆ ನಾವೇ ಜವಾಬ್ದಾರರು ಹೊರತು ಯಾರೋ ಮಾಡಿಸಿದ್ದಾರೆ ಎನ್ನುವುದು ತಪ್ಪು ಎಂದಿದ್ದಾರೆ ಮೀನುಗಾರಿಕೆ ಹಾಗು ಬಂದರು ಖಾತೆ ಸಚಿವ ಮಂಕಾಳ ವೈದ್ಯ. ಯಾರನ್ನಾದರು ಕರೆದುಕೊಂಡು ಹೋಗಿ ಟ್ರ್ಯಾಪ್ ಮಾಡಲು ಸಾದ್ಯವೇ..? ನಮ್ಮ ತಪ್ಪನ್ನ ನಾವು ಒಪ್ಪಿಕೊಳ್ಳಬೇಕಲ್ಲ. ಸದನದಲ್ಲಿ ಮಾತನಾಡುವ ಮೊದಲು ಯೋಚನೆ ಮಾಡಿ ಮಾತನಾಡಬೇಕಿತ್ತು. ಹನಿಟ್ರ್ಯಾಪ್ ಆಗಿದೆ ಅಂತಾ ಆದರೆ ಯಾರು ಆಗಿದ್ದಾರೋ ಅವರಷ್ಟು ತಪ್ಪು ಯಾರು ಮಾಡಿಲ್ಲ ಏಂದಾಗುತ್ತದೆ ಎಂದಿದ್ದಾರೆ.