ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ರವರು, ಮಾಜಿ ಶಿಕ್ಷಣ ಸಚಿವರು, ಶಾಸಕರಾದ ಎಸ್.ಸುರೇಶ್ ಕುಮಾರ್ ರವರ ನೇತೃತ್ವದಲ್ಲಿ ಬೃಹತ್ ರೋಡ್ ಶೋ.
ಮಂಡಲ ಅಧ್ಯಕ್ಷರಾದ ಸುದರ್ಶನ್, ಕೇಂದ್ರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರರಾವ್, ಬಿಬಿಎಂಪಿ ಸದಸ್ಯರುಗಳಾದ ಎಮ್.ಮುನಿರಾಜು, ಶ್ರೀಮತಿ ಶಕೀಲ ಮುನಿರಾಜು, ದೀಪಾ ನಾಗೇಶ್ ರವರು ಭಾಗವಹಿಸಿದ್ದರು.
ದಯಾನಂದನಗರದಿಂದ ಆರಂಭವಾಗಿ , ಬಂಡಿರೆಡ್ಡಿ ಸರ್ಕಲ್ , ಪ್ರಕಾಶನಗರದ ಮೂಲಕ ರಾಜಾಜಿನಗರ, ಜೂಗನಹಳ್ಳಿ, ಶ್ರೀರಾಮಮಂದಿರದಲ್ಲಿ ಮುಕ್ತಾಯವಾಯಿತು.
ಕಾಂಗ್ರೆಸ್ ಸರ್ಕಾರ ಹಸ್ತದ ಚಿಹ್ನೆ ಬಿಟ್ಟು ಚೊಂಬಿನ ಗುರುತು ಇಟ್ಟಿಕೊಳ್ಳಿ , ಬೆಂಗಳೂರುನಗರ ನಾಗರಿಕರು ತೆರಿಗೆ ಹಣವನ್ನು ಬೆಂಗಳೂರಿಗೆ ಎಷ್ಟು ಖರ್ಚು ಮಾಡುತ್ತಿರ ಎಂದು ಕಾಂಗ್ರೆಸ್ ಪಕ್ಷ ಉತ್ತರ ನೀಡಬೇಕು.
ನೇಹಾ ಕೊಲೆ, ಮೈಸೂರಿನಲ್ಲಿ ಮೋದಿ ಕುರಿತು ಹಾಡು ಹೇಳಿದವನ ಮೇಲೆ ಹಲ್ಲೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಇದರ ವಿರುದ್ದ ನಾಳೆ ಪ್ರತಿಭಟನೆ ನಡೆಸಲಾಗುವುದು ಎಂದು ಶಾಸಕರಾದ ಎಸ್.ಸುರೇಶ್ ಕುಮಾರ್ ರವರು ಹೇಳಿದರು
ಬಿಜೆಪಿ ಮುಖಂಡರುಗಳಾದ ಬಿ.ಎನ್.ಶ್ರೀನಿವಾಸ್, ಸತೀಶ್ ಭಗವಾನ್, ಯಶಸ್ ನಾಯಕ್, ಕಿರಣ್,ಸಂಜಯ್ ಕುಮಾರ್, ಅಮಿತ್ ಜೈನ್, ಕೃಷ್ಣಮೂರ್ತಿ, ವೆಂಕಟೇಶ್ ಮತ್ತು ಸಾವಿರಾರು ಬಿಜೆಪಿ ಕಾರ್ಯಕರ್ತರುಗಳು ಪಾಲ್ಗೊಂಡಿದ್ದರು.