• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಿಂಹಾಸನ ಏರಿದ ರೆಬೆಲ್‌ಸ್ಟಾರ್‌, ಪ್ರಭಾಸ್ ಜನ್ಮದಿನದಂದು ‘ದಿ ರಾಜಾ ಸಾಬ್’ ಮೋಷನ್ ಪೋಸ್ಟರ್ ಅನಾವರಣ

ಪ್ರತಿಧ್ವನಿ by ಪ್ರತಿಧ್ವನಿ
October 24, 2024
in Top Story, ಇತರೆ / Others, ಕರ್ನಾಟಕ
0
ಸಿಂಹಾಸನ ಏರಿದ ರೆಬೆಲ್‌ಸ್ಟಾರ್‌, ಪ್ರಭಾಸ್ ಜನ್ಮದಿನದಂದು ‘ದಿ ರಾಜಾ ಸಾಬ್’ ಮೋಷನ್ ಪೋಸ್ಟರ್ ಅನಾವರಣ
Share on WhatsAppShare on FacebookShare on Telegram

ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ‘ದಿ ರಾಜಾ ಸಾಬ್’ ಇದೀಗ ಕುತೂಹಲಕ್ಕೆ ಮತ್ತಷ್ಟು ಕಿಚ್ಚು ಹಚ್ಚಿದೆ. ಏಕೆಂದರೆ ಈ ಸಿನಿಮಾ ಮೇಕರ್ಸ್‌ ಇದೀಗ, ಪ್ರಭಾಸ್‌ ಅವರ ಬರ್ತ್‌ಡೇ ಪ್ರಯುಕ್ತ ವಿಶೇಷ ಮೋಷನ್ ಪೋಸ್ಟರ್ ಅನ್ನು ಹೊರತಂದಿದ್ದಾರೆ. ಹಾರರ್‌ ಥ್ರಿಲ್ಲರ್‌ ಜಾನರ್‌ನ ಈ ಸಿನಿಮಾದಲ್ಲಿ ಅಷ್ಟೇ ವಿಶೇಷ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಪ್ರಭಾಸ್‌.

ADVERTISEMENT

2 ನಿಮಿಷಗಳ ಮೋಷನ್ ಪೋಸ್ಟರ್ ಕಾಡಿನ ಮಧ್ಯದಲ್ಲಿ ಪಿಯಾನೋದಲ್ಲಿ ಕಾಡುವ “ಹ್ಯಾಪಿ ಬರ್ತ್‌ಡೇ” ಟ್ಯೂನ್‌ನೊಂದಿಗೆ ಶುರುವಾಗುತ್ತದೆ. ವೀಕ್ಷಕರನ್ನು ವಿಂಟೇಜ್ ಅರಮನೆಗೆ ಸಾಗಿಸುವ ಮೊದಲು ಕಾಡಿನಲ್ಲಿ ಸಂಚರಿಸುತ್ತಿರುವ ನಿಗೂಢ ವ್ಯಕ್ತಿಯೂ ಅಲ್ಲಿ ಕಾಣಿಸುತ್ತಾನೆ.ಒಮ್ಮಿಂದೊಮ್ಮೆ ಆ ಮನೆಯ ಬಾಗಿಲು ತೆರೆಯುತ್ತದೆ. ಅದರೊಳಗಿಂದ ಸೂಪರ್‌ಸ್ಟಾರ್‌ ಪ್ರಭಾಸ್‌ ಅವರ ದಿ ರಾಜಾಸಾಬ್‌ ಲುಕ್‌ ಅನಾವರಣಗೊಳ್ಳುತ್ತದೆ.

ವಿಂಟೇಜ್ ಅರಮನೆಯ ಭವ್ಯವಾದ ಹಿನ್ನೆಲೆಯಲ್ಲಿ ಕಪ್ಪು ಉಡುಪಿನಲ್ಲಿ ಸಿಂಹಾಸನದ ಮೇಲೆ ಪ್ರಭಾಸ್ ಕುಳಿತ ಭಂಗಿಯಲ್ಲಿ ಕಂಡಿದ್ದಾರೆ. ರಾಜನ ಲುಕ್‌ನಲ್ಲಿ ಕೈಯಲ್ಲಿ ಸಿಗಾರ್ ಹಿಡಿದು ರಗಡ್‌ ಅವತಾರದಲ್ಲಿ ಎದುರಾಗಿದ್ದಾರೆ.ಈ ಮೋಷನ್‌ ಪೋಸ್ಟರ್‌ನಲ್ಲಿ “ಹಾರರ್ ಈಸ್ ದಿ ನ್ಯೂ ಹ್ಯೂಮರ್” ಎಂಬ ಅಡಿಬರಹವಿದೆ.ನಂತರ “ಹ್ಯಾಪಿ ಬರ್ತ್‌ಡೇ, ರೆಬೆಲ್ ಸಾಬ್” ಎಂದು ಚಿತ್ರತಂಡ ಪ್ರಭಾಸ್‌ಗೆ ಶುಭಕೋರಿದೆ.

ಈ ಮೋಷನ್‌ ಪೋಸ್ಟರ್ ಅನ್ನು ಪ್ರಭಾಸ್‌ ತಮ್ಮ Instagramನಲ್ಲಿ ಹಂಚಿಕೊಂಡಿದ್ದಾರೆ. “ಇದು ಚಳಿ ಮತ್ತು ರೋಮಾಂಚನಗಳ ಸಮಯ. ಏಪ್ರಿಲ್ 10, 2025 ರಂದು ಚಿತ್ರಮಂದಿರಗಳಲ್ಲಿ ನಿಮ್ಮನ್ನು ನೋಡೋಣ” ಎಂದು ಬರೆದಿದ್ದಾರೆ. ಇತ್ತ ಸೋಷಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಶುರುವಾಗಿದೆ. #RajaSaabBirthdayCelebrations ಎಂಬ ಹ್ಯಾಶ್‌ಟ್ಯಾಗ್ ಜಾಗತಿಕವಾಗಿ ಟ್ರೆಂಡಿಂಗ್ ಆಗಿದೆ.

ಆಕ್ಷನ್- ಪ್ಯಾಕ್ಡ್ ಶೈಲಿಯ ಈ ಸಿನಿಮಾದಲ್ಲಿ ಪ್ರಭಾಸ್‌ ಹೊಸ ಆಯಾಮದೊಂದಿಗೆ ಆಗಮಿಸಲು ಸಿದ್ಧರಾಗಿದ್ದಾರೆ.ಮೊದಲ ಸಲ ಹಾರರ್-ಕಾಮಿಡಿ ಪ್ರಕಾರವನ್ನು ಅಳವಡಿಸಿಕೊಂಡಿದ್ದಾರೆ. ಅಭಿಮಾನಿಗಳು ನಟನ ಈ ಹೊಸತನದ ಮೇಲೆ ಅಷ್ಟೇ ಕೌತುಕದಲ್ಲಿದ್ದಾರೆ.

ಮಾರುತಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ವಿಶ್ವ ಪ್ರಸಾದ್ ಈ ಸಿನಿಮಾ ನಿರ್ಮಿಸುತ್ತಿದ್ದಾರೆ.ತಮನ್ ಎಸ್ ಅವರ ಸಂಗೀತ ಈ ಚಿತ್ರಕ್ಕಿದೆ.2025ರ ಏಪ್ರಿಲ್ 10 ರಂದು ಈ ಸಿನಿಮಾ ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್ ಮತ್ತು ರಿದ್ಧಿ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Tags: # sandalwood #sandalwoodcinema #kannadafilmindustry #kicchasudeep #fans #socialmedia #goodnews #newupdate #pratidhvani #pratidhvanidigital #pratidhvaninews'2025 in Teluguchillsdirected by Maruthi.Vishwa Prasad.HindiNidhi Aggarwal and Riddhi Kumar.PrabhasPrabhas' Birthday.Raja Saab' Motion Poster UnveiledRebel Starrelease in theaters on April 10tamilthrills
Previous Post

ಸಿ.ಟಿ.ರವಿ ಅವರ ಸಹಕಾರ ಯೋಗೇಶ್ವರ್ ಪರವಾಗಿದೆ:ಡಿ. ಕೆ.ಸುರೇಶ್

Next Post

ಸಂದರ್ಶನವನ್ನು ತೆಗೆಸಿದ ಅಪ್ಪ ಮತ್ತು ಮಲತಾಯಿ

Related Posts

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು
ಕರ್ನಾಟಕ

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

by ಪ್ರತಿಧ್ವನಿ
April 28, 2026
0

ಕಲಬುರಗಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕುರಿತ ಚರ್ಚೆಗಳು ರಾಜಕೀಯ ವಲಯದಲ್ಲಿ ಗರಿಗೆದರಿರುವ ನಡುವೆಯೇ, ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು,...

Read moreDetails
ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

April 28, 2026
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಪ್ರಕರಣದ ಸಂಪೂರ್ಣ ಚಿತ್ರಣ ಇಲ್ಲಿದೆ

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಪ್ರಕರಣದ ಸಂಪೂರ್ಣ ಚಿತ್ರಣ ಇಲ್ಲಿದೆ

April 27, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
AI ಚಾಟ್‌ಬಾಟ್ ‘Grok’ ಆಯ್ಕೆ ಮಾಡಿದ ಪ್ರಧಾನಿ ಯಾರು?

AI ಚಾಟ್‌ಬಾಟ್ ‘Grok’ ಆಯ್ಕೆ ಮಾಡಿದ ಪ್ರಧಾನಿ ಯಾರು?

April 27, 2026
Next Post

ಸಂದರ್ಶನವನ್ನು ತೆಗೆಸಿದ ಅಪ್ಪ ಮತ್ತು ಮಲತಾಯಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada