
ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇದೀಗ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು ಮರಗಳು ಧರೆಗುರುಳಿವೆ. ಮೈಸೂರಿನಲ್ಲಿ ಬಿಸಿಲಿನ ತಾಪಕ್ಕೆ ಮಳೆರಾಯ ತಂಪೆರೆದಿದ್ದಾನೆ.
ಮೈಸೂರಿನಲ್ಲಿ ಹಲವೆಡೆ ಗುಡುಗ, ಬಿರುಗಾಳಿ ಸಹಿತ ಮಳೆಯಾಗಿದ್ದು ಬಿರುಗಾಳಿ ರಭಸಕ್ಕೆ ಮರ,ರಂಬೆ ಕೊಂಬೆಗಳು ದರೆಗುರುಳಿವೆ. ನಗರದ ಕಾಳಿದಾಸ ರಸ್ತೆಯಲ್ಲಿ ಕಾರುಗಳ ಮೇಲೆ ಮರದ ರಂಬೆಗಳು ಬಿದ್ದು ಹತ್ತಾರು ಕಾರುಗಳು ಜಖಂ ಆಗಿವೆ. ಭಾರಿ ಮಳೆ ಬಿರುಗಾಳಿಯಿಂದಾಗಿ ನಗರದ ಹಲವೆಡೆ ನೂರಾರು ಮರಗಳು ಧರೆಗುರುಳಿರುವ ಶಂಕೆ ವ್ಯಕ್ತವಾಗಿದೆ.ಹಲವು ದಿನಗಳಿಂದ ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಮೈಸೂರಿಗರು ಇದೀಗ ಮಳೆರಾಯನ ಆಗಮನಕ್ಕೆ ಸಂತಸಗೊಂಡಿದ್ದಾರೆ. ಮಳೆಯಾದ ಹಿನ್ನೆಲೆಯಲ್ಲಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ತಂಪೆರೆದ ವರುಣ
ಬೇಸಿಗೆಯ ಬಿಸಿಲಿಗೆ ತತ್ತರಿಸಿದ್ದ ಮೈಸೂರಿಗರಿಗೆ ಮಳೆ ತಂಪೆರೆದಿದೆ.
ಮೈಸೂರಲ್ಲಿ ಮಳೆ ಅವಾಂತರ ಸಾಕಷ್ಟು ಆಗಿದೆ. ಶುಕ್ರವಾರ ಸಂಜೆ 5 ಗಂಟೆಯಿಂದ ಸತತ 1 ಗಂಟೆ ಕಾಲ ಸುರಿದ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಯ್ತು. ಸಾಕಷ್ಟು ಬಡಾವಣೆಗಳಲ್ಲಿ ಮರಗಳು ಧರೆಗುರುಳಿತು. ಹಲವೆಡೆ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ವು. ರಸ್ತೆಗಳೆಲ್ಲಾ ನದಿಯಂತಾಯ್ತು.. ನಗರದ ಬಹುತೇಕ ಕಡೆ ಕರೆಂಟ್ ಕಟ್ ಆಗಿ ಜನಗಳು ಪರದಡುವಂತಾಗಿದೆ.