ಕಳೆದ ಒಂದು ತಿಂಗಳಿನಿಂದ ಗೋಕಾಕ ಜಾತ್ರೆಯ ನಿಮಿತ್ಯ ನಿರಂತರವಾಗಿ ಬಿಡುವಿಲ್ಲದೇ ಶ್ರಮಿಸುತ್ತಿರುವ ಗೋಕಾಕ ನಗರಸಭೆಯ ಪೌರಕಾರ್ಮಿಕರಿಗೆ ಡಾ. ಮಹಾಂತೇಶ ಅಣ್ಣಾ ಕಡಾಡಿಯವರು (Dr. Mahanthesh Anna Kadadi) ಸ್ವಂತ ದುಡ್ಡಿನಿಂದ ರೈನ್ ಕೋಟ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ ಕಡಾಡಿಯವರು ಗೋಕಾಕ ನಗರದ ಸ್ವಚ್ಛತೆಗೆ ಪೌರಕಾರ್ಮಿಕರ ಕೊಡುಗೆ ಅಪಾರವಾಗಿದೆ. ನಾನು ಕೂಡ ದಿನಂಪ್ರತಿ ನೋಡುತ್ತಿದ್ದೇನೆ. ಬೆಳಿಗ್ಗೆ ಸರಿಯಾಗಿ 5 ಘಂಟೆಗೆ ತಮ್ಮ ಕೆಲಸ ಪ್ರಾರಂಭಿಸುವ ಪೌರಕಾರ್ಮಿಕರು ರೋಗ-ರುಜಿನುಗಳು ಹರಡದಂತೆ ತಮ್ಮ ಆರೋಗ್ಯ ಲೆಕ್ಕಿಸದೇ ಸಾರ್ವಜನಿಕರ ಆರೋಗ್ಯ ಕಾಪಾಡಲು ವೈದ್ಯಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪೌರ ಕಾರ್ಮಿಕರು ಆರೋಗ್ಯವಾಗಿದ್ದರೆ ಮಾತ್ರ ಜನರು ಆರೋಗ್ಯದಿಂದ ಇರಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಗೋಕಾಕ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಾಕೀರ್ ನದಾಫ್, ಕಾಂಗ್ರೆಸ್ ಮುಖಂಡರಾದ ಸಂಜು ಮಾನಗಾಂವಿ, ಅನಿಲ ಮಿಲ್ಕೆ ಉಪಸ್ಥಿತರಿದ್ದರು.