ಜಲ ಜೀವನ್ ಮಿಷನ್ ಯೋಜನೆಯಡಿ ನಬಾರ್ಡ್ ಮೂಲಭೂತ ಅಭಿವೃದ್ಧಿ ನೆರವು ಸಂಸ್ಥೆಯ ಸಹಯೋಗದೊಂದಿಗೆ ಕೈಗೆತ್ತಿಕೊಂಡಿರುವ ರಾಯಚೂರು ಜಿಲ್ಲೆಯ ಗ್ರಾಮೀಣ ಜನವಸತಿಗಳಿಗೆ ಹಾಗೂ ರಾಯಚೂರು ಜಿಲ್ಲೆಯ ಏಳು ಸ್ಥಳಿಯ ನಗರ ಸಂಸ್ಥೆಗಳಾದ ಮಾನ್ವಿ, ಮಸ್ಕಿ, ಕವಿತಾಳ, ತುರ್ವಿಹಾಳ, ಬಾಳಗವಾರ, ಸಿರವಾರ ಹಾಗೂ ಹಟ್ಟಿ ಪಟ್ಟಣಗಳಿಗೆ ಅನುಕೂಲವಾಗುವಂತೆ ನಾರಾಯಣಪುರ ಜಲಾಶಯದಿಂದ ಕುಡಿಯುವ ನೀರು ಸರಬರಾಜು ಮಾಡುವ ಬೃಹತ್ ಕಾಮಗಾರಿಗೆ 297800 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಯೋಜನೆಯಡಿ 1406 ಜನವಸತಿಗಳು ಅನುಕೂಲ ಪಡೆಯಲಿದ್ದು ಇವುಗಳಲ್ಲಿ 1007 ಗ್ರಾಮಗಳು ಸೇರಿವೆ. ಈ ಬೃಹತ್ ಯೋಜನೆಯಲ್ಲಿ 342534 ಮನೆಗಳು ಕುಡಿಯುವ ನೀರಿನ ಸೌಲಭ್ಯ ಹೊಂದಲಿವೆ. ಈ ಯೋಜನೆಯನ್ನು ಮುಂದಿನ 30 ವರ್ಷಗಳನ್ನು ದೃಷ್ಟಿಯಲ್ಲಿರಿಸಿಕೊಂಡು ರೂಪಿಸಲಾಗಿದ್ದು, ನಗರದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿ ದಿನವೊಂದಕ್ಕೆ 135 ಲೀಟರ್ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿ ದಿನವೊಂದಕ್ಕೆ 55 ಲೀಟರ್ ನೀರನ್ನು ಪಡೆಯಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ರಾಯಚೂರು ಜಿಲ್ಲೆಗೆ ಅನುಕೂಲವಾಗುಂತೆ ಕಾರ್ಯಗತಗೊಳ್ಳಲಿರುವ ಜಲ ಜೀವನ್ ಮಿಷನ್́ ಯೋಜನೆ 04 ಹಂತಗಳಲ್ಲಿದ್ದು, ಈ ಯೋಜನೆಯಲ್ಲಿ ಮನೆ ಮನೆಗೆ ಕಾರ್ಯತ್ಮಕ ನಳ ಸಂಪರ್ಕ ಕಲ್ಪಿಸುವುದು ಮುಖ್ಯ ಉದ್ದೇಶವಾಗಿರುತ್ತದೆ. ಯೋಜನೆಯಡಿ ರಾಯಚೂರು ಜಿಲ್ಲೆಯ 1220 ಗ್ರಾಮಗಳಲ್ಲಿ ಮನೆ ಮನೆಗೆ ಕಾರ್ಯತ್ಮಕ ನಳ ಸಂಪರ್ಕ ನೀಡುವ ಕಾಮಗಾರಿಗಳನ್ನು ಅನುಷ್ಠಾನ ಮಾಡಸಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಯೋಜನೆಯ ಪೂರ್ಣ ವಿವರಗಳನ್ನು ಸಚಿವ ಪ್ರಿಯಾಂಕ್ ಖರ್ಗೆ ಪ್ರಕಟಿಸಿದ್ದು, ಅವುಗಳ ವಿವರ ಹೀಗಿದೆ:
ಜೆ.ಜೆ.ಎಂ. ಯೋಜನೆ ಮೊದಲ ಹಂತದಲ್ಲಿ 301 ಕಾಮಗಾರಿಗಳನ್ನು ತೆಗೆದುಕೊಳಲಾಗಿದ್ದು, ಈ ಪೈಕಿ 276 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ, ಉಳಿದ 25 ಕಾಮಗಾರಿಗಳು ಪ್ರಗತಿಯ ಹಂತದಲ್ಲಿವೆ. ಈ ಕಾಮಗಾರಿಗಳ ಅಂದಾಜು ವೆಚ್ಚ.178.72 ಕೋಟಿ ರೂ.ಗಳಾಗಿದ್ದು, ಈಗಾಗಲೆ 106.03 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಜೆ.ಜೆ.ಎಂ. ಯೋಜನೆಯಡಿ 2ನೆ ಹಂತದಲ್ಲಿ 251 ಕಾಮಗಾರಿಗಳನ್ನು ತೆಗೆದುಕೊಳಲಾಗಿದ್ದು ಈ ಪೈಕಿ 174 ಕಾಮಗಾರಿಗಳನ್ನು ಪೂರ್ಣಗೊಂಡಿವೆ ಹಾಗೂ ಉಳಿದ 77 ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ಈ ಕಾಮಗಾರಿಗಳ ಅಂದಾಜು ವೆಚ್ಚ 115.75 ಕೋಟಿ ರೂ. ಆಗಿದ್ದು, ಈಗಾಗಲೆ 64 ಕೋಟಿ ರೂ. ವೆಚ್ಚವಾಗಿರುತ್ತದೆ.
ಜೆ.ಜೆ.ಎಂ. ಯೋಜನೆಯಡಿ 3ನೆ ಹಂತದಲ್ಲಿ 659 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದ್ದು, 99 ಕಾಮಗಾರಿಗಳು ಪೂರ್ಣಗೊಂಡಿವೆ ಹಾಗೂ 462 ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ, ಉಳಿಕೆ 98 ಕಾಮಗಾರಿಗಳು ಪ್ರಾರಂಭವಾಗಬೇಕಿವೆ. ಈ ಕಾಮಗಾರಿಗಳ ಅಂದಾಜು ವೆಚ್ಚ 376.83 ಕೋಟಿ ರೂ, ಆಗಿದ್ದು, ಈಗಾಗಲೆ 66.02 ಕೋಟಿ ರೂ, ವೆಚ್ಚವಾಗಿರುತ್ತದೆ.
ಜೆ.ಜೆ.ಎಂ. ಯೋಜನೆಯಡಿ 4ನೆ ಹಂತದಲ್ಲಿ 9 ಕಾಮಗಾರಿಗಳಿದ್ದು, ಇವುಗಳಲ್ಲಿ ಒಂದು ಕಾಮಗಾರಿ ಪೂರ್ಣಗೊಂಡಿದೆ. 05 ಕಾಮಗಾರಿಗಳು ಪ್ರಗತಿಯಲ್ಲಿದ್ದು 03 ಕಾಮಗಾರಿಗಳು ಪ್ರಾರಂಭವಾಬೇಕಾಗಿರುತ್ತದೆ ಈ ಕಾಮಗಾರಿಗಳ ಅಂದಾಜು ವೆಚ್ಚ ರೂ.5.13 ಕೋಟಿ ರೂ ಆಗಿದ್ದು ಈಗಾಘಲೆ 0.22 ಕೋಟಿ ರೂ. ವೆಚ್ಚವಾಗಿರುತ್ತದೆ.

ಸಿಂಧನೂರು ತಾಲ್ಲೂಕಿಗೆ ಸಂಬಂಧಿಸಿದಂತೆ ಜಲ ಜೀವನ್ ಮಿಷನ್ ಯೋಜನೆಯನ್ನು ನಾಲ್ಕು ಹಂತಗಳಲ್ಲಿ ಪ್ರಾರಂಭಿಸಿದ್ದು, ಯೋಜನೆಯಡಿ ಮನೆ ಮನೆಗೆ ಕಾರ್ಯತ್ಮಕ ನಳ ಸಂಪರ್ಕ ಕಲ್ಪಿಸುವುದು ಮುಖ್ಯ ಉದ್ದೇಶವಾಗಿರುತ್ತದೆ, ಸಿಂಧನೂರು ತಾಲ್ಲೂಕಿನ 212 ಗ್ರಾಮಗಳಿಗೆ ಮನೆ ಮನೆಗೆ ಕಾರ್ಯತ್ಮಕ ನಳ ಸಂಪರ್ಕ ನೀಡುವ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಸಿಂಧನೂರು ತಾಲೂಕಿನಲ್ಲಿ ಒಂದನೆ ಹಂತದಲ್ಲಿ 41, ಎರಡನೆ ಹಂತದಲ್ಲಿ 42, ಮೂರನೆ ಹಂತದಲ್ಲಿ 128 ಕಾಮಗಾರಿಗಳನ್ನು ತೆಗೆದುಕೊಳಲಾಗಿದ್ದು ಈ ಪೈಕಿ 103 ಕಾಮಗಾರಿಗಳು ಪೂರ್ಣಗೊಂಡಿವೆ. ಮೂರು ಹಂತದ ಕಾಮಗಾರಿಗಳಿಗೆ 110.80 ಲಕ್ಷ ರೂ. ವೆಚ್ಚ 42.35 ಲಕ್ಷ ರೂ. ವೆಚ್ಚ ಮಾಡಲಾಗಿದೆ.
ಈ ಯೋಜನೆ ಸಂಪೂರ್ಣವಾಗಿ ಅನುಷ್ಠಾನಗೊಂಡ ನಂತರ ರಾಯಚೂರು ಜಿಲ್ಲೆಯ ಬಹಪಾಲು ಹಳ್ಳಿಗಳು ಹಾಗೂ ಪಟ್ಟಣಗಳಿಗೆ ಕುಡಿಯುವ ನೀರು ಶಾಶ್ವತವಾಗಿ ಲಭಿಸಿದಂತಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.