
INDIA ಮೈತ್ರಿಕೂಟದ ನಾಯಕರ ಜೊತೆ ನಾಳೆ ಸಭೆಯಿದೆ. ನಾವು ಸರ್ಕಾರ ಮಾಡುತ್ತೇವೆಯೋ ಇಲ್ವೋ ನಾಳೆ ಹೇಳ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಲೋಕಸಭಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಇಂಡಿಯಾ ಮೈತ್ರಿಕೂಟದ ನಾಯಕರ ಜೊತೆ ನಾಳೆ ಸಭೆಯಿದೆ. ನಾವು ಸರ್ಕಾರ ಮಾಡುತ್ತೇವೆಯೋ ಇಲ್ವೋ ನಾಳೆ ಹೇಳ್ತೇವೆ. ಇಂಡಿಯಾ ಒಕ್ಕೂಟದ ಸಹಪಾಠಿಗಳನ್ನು ಕೇಳದೆಯೇ ಹೇಳಲ್ಲ. ನಾವು ಈಗಲೇ ಯಾವುದನ್ನೂ ನಿರ್ಧಾರ ಮಾಡುವುದಿಲ್ಲ. ನಾಳೆ INDIA ಮೈತ್ರಿಕೂಟ ಎಲ್ಲವನ್ನೂ ನಿರ್ಧಾರ ಮಾಡಲಿದೆ.ಸರ್ಕಾರ ರಚನೆಗೆ ಬಹಳ ಫೈನ್ಲೈನ್ ಇದೆ. ಎಲ್ಲವನ್ನೂ ನಾಳೆಯ ಸಭೆಯಲ್ಲಿ ನಿರ್ಧಾರ ಮಾಡುತ್ತೇವೆ ಎಂದರು