
ಹೊಸದಿಲ್ಲಿ:ಲೋಕಸಭೆಯ ವಿಪಕ್ಷ ನಾಯಕ, ಕಾಂಗ್ರೆಸ್ (Congress) ಮುಖಂಡ ರಾಹುಲ್ ಗಾಂಧಿ (Rahul Gandhi) ಅವರು ಸರಳತೆ ಮೆರೆಯುವ ಮೂಲಕ ಮತ್ತೊಮ್ಮೆ ನೆಟ್ಟಿಗರ ಮನ ಗೆದ್ದಿದ್ದಾರೆ. ದೀಪಾವಳಿ ಪ್ರಯುಕ್ತ ತಮ್ಮ ಬಂಗಲೆಗೆ ಬಣ್ಣ ಬಳಿಯುವ ಪೈಂಟ್ ಕೆಲಸಗಾರರು ಮತ್ತು ಸಾಂಪ್ರದಾಯಿಕ ಮಣ್ಣಿನ ಮಡಕೆ ತಯಾರಿಸುವ ಕುಂಬಾರರೊಂದಿಗೆ ಬೆರೆತು ಮಾತುಕತೆ ನಡೆಸಿದ್ದಾರೆ.

ಮಾತ್ರವಲ್ಲ ಗೋಡೆಗೆ ತಾವೇ ಪೈಂಟ್ ಬಳಿಯುವ ಜತೆಗೆ ಮಡಕೆಯನ್ನೂ ತಯಾರಿಸಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ (Viral Video). ಕಾಂಗ್ರೆಸ್ ನಾಯಕನ ಸರಳತೆಗೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ.
एक दिवाली उनके साथ, जिनकी मेहनत से रौशन है भारत! pic.twitter.com/bfmmrjZD2S
— Rahul Gandhi (@RahulGandhi) November 1, 2024
ದೀಪಾವಳಿಗೆ ಮುಂಚಿತವಾಗಿ ತಮ್ಮ ಬಂಗಲೆಯಲ್ಲಿ ನಡೆಯುತ್ತಿದ್ದ ಪೈಂಟ್ ಕಾಮಗಾರಿಯನ್ನು ವೀಕ್ಷಿಸಿದ ಅವರು ಕಾರ್ಮಿಕರನ್ನು ಕೆಲಹೊತ್ತು ಮಾತನಾಡಿಸಿದರು. ಜತೆಗೆ ಕುಂಬಾರರ ಬಳಿಗೂ ತೆರಳಿ ಅವರೊಂದಿಗೆ ಸಂವಾದ ನಡೆಸಿದರು. ಯೂಟ್ಯೂಬ್‌ನಲ್ಲಿ ಈ ವಿಡಿಯೊವನ್ನು ಹಂಚಿಕೊಂಡ ಅವರು ಪ್ರತಿಯೊಬ್ಬರ ಕೊಡುಗೆಯನ್ನು ಗೌರವಿಸಬೇಕು ಎಂದು ಕರೆ ನೀಡಿದರು.





