ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಬಾರತ ಜೋಡೋ ಪಾದಯಾತ್ರೆಯೂ ಮಧ್ಯಪ್ರದೇಶದ ರಾಜಧಾನಿ ಇಂದೋರ್ ತಲುಪಿದ್ದು ಈ ವಾರಾಂತ್ಯದಲ್ಲಿ ರಾಜಸ್ಥಾನ ಪ್ರವೇಶಿಸಲಿದೆ.
ಇನ್ನು ಯಾತ್ರೆಯ ಬಿಡುವಿನ ವೇಳೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಹುಲ್ ಗಾಂಧಿಗೆ ಪತ್ರಕರ್ತರಿಂದ ರಾಜಸ್ಥಾನ ಸಿಎಂ ಆಶೋಕ್ ಗೆಹ್ಲೋಟ್, ಮಾಜಿ ಡಿಸಿಎಂ ಸಚಿನ್ ಪೈಲಟ್ ನಡುವಿನ ಗುದ್ದಾಟದ ಕುರಿತು ಸಾಲು ಸಾಲು ಪ್ರಶ್ನೆಗಳು ಎದುರಾದವು.
ಸ್ವಪಕ್ಷೀಯ ನಾಯಕರ ನಡುವಿನ ಗುದ್ದಾಟದ ಕುರಿತು ಮೌನ ಮುರಿದ ರಾಹುಲ್ ನಾನು ಪ್ರತಿ ಭಾರಿ ಒಂದೊಂದು ರಾಜ್ಯ ಪ್ರವೇಶಿಸಿದ್ದಾಗಲೂ ಅಲ್ಲಿನ ನಾಯಕರ ನಡುವೆ ಸಮಸ್ಯೆ ಇದೆ ಎಂದು ನೀವು ಹೇಳುತ್ತೀರಿ. ಈಗ ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಸಮಸ್ಯೆ ಇದೆ ಎಂದು ಹೇಳುತ್ತಿದ್ದೀರಿ ಅವರಿಬ್ಬರೂ ಕಾಂಗ್ರೆಸ್‌ನ ಆಸ್ತಿ ಎಂದು ತಮ್ಮ ನಾಯಕರ ನಡುವಿನ ಗುದ್ದಾಟದ ಕುರಿತು ಪ್ರತಿಕ್ರಿಯಿಸಿದ್ದಾರೆ.

ಇನ್ನು ರಾಷ್ಟ್ರೀಯ ಸುದ್ದಿ ಸಂಸ್ಥೆ NDTVಗೆ ನೀಡಿದ ಸಂದರ್ಶನದಲ್ಲಿ ಮಾತನಾಡುವ ವೇಳೆ ಗೆಹ್ಲೋಟ್ ಸಚಿನ್ ಪೈಲಟ್‌ರನ್ನು ದ್ರೋಹಿ ಎಂದು ಕರೆದಿದ್ದು ಈಗ ಕಾಂಗ್ರೆಸ್ ಪಕ್ಷದ ಆಂತರಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದು ಶಿಸ್ತುಕ್ರಮ ಜರುಗಿಸುವ ಬಗ್ಗೆ ಮಾತುಕತೆ ನಡೆದಿದೆ ಎಂದು ಹೇಳಲಾಗಿದೆ.
ಇನ್ನು ಯಾತ್ರೆ ರಾಜಸ್ಥಾನ ಪ್ರವೇಶಿಸುವ ಮುನ್ನ ಅಲ್ಲಿನ ರಾಜಕೀಯ ಬಿಕ್ಟ್ಟನ್ನು ಶಮನಗೊಳಿಸುವಂತೆ ಪಕ್ಷದ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ಗೆ ಹೈಕಮಾಂಡ್ ಸೂಚನೆ ನೀಡಿದ್ದು ಬಿಕ್ಕಟ್ಟು ಸಮನಗೊಳಿಸುವ ಯತ್ನದಲ್ಲಿ ಕೆಸಿವಿ ನಿರತರಾಗಿದ್ದಾರೆ.