ಲಡಾಖ್ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪಾಂಗೊಂಗ್ ಸರೋವರಕ್ಕೆ ತೆರಳಲು ಬೈಕ್ ರೈಡ್ ಮಾಡಿದ್ದಾರೆ.
ರಾಹುಲ್ ಗಾಂಧಿ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇದರ ಫೊಟೊಗಳನ್ನು ಹಂಚಿಕೊಂಡಿದ್ದಾರೆ.
ಕೆಟಿಎಂ 390 ಬೈಕ್ ಅನ್ನು ರಾಹುಲ್ ಗಾಂಧಿ ಚಲಾಯಿಸಿದ್ದಾರೆ. ಅವರೊಂದಿಗೆ ಇನ್ನೂ ಹಲವರು ಬೈಕ್ ರೈಡ್ ಮಾಡಿದ್ದಾರೆ.
“ಪಾಂಗೊಂಗ್ ಸರೋವರಕ್ಕೆ ಹೊರಟಿದ್ದೇವೆ, ಇದು ಜಗತ್ತಿನ ಅತಿ ಸುಂದರ ಪ್ರದೇಶಗಳಲ್ಲಿ ಒಂದು ಎಂದು ನನ್ನ ತಂದೆಯವರು ಯಾವಾಗಲೂ ಹೇಳುತ್ತಿದ್ದರು” ಎಂದು ರಾಹುಲ್ ಗಾಂಧಿ ಬರೆದುಕೊಂಡಿದ್ದಾರೆ.
ಕಾಂಗ್ರೆಸ್ ತನ್ನ ಎಕ್ಸ್ ಖಾತೆಯಲ್ಲಿ ರಾಹುಲ್ ಗಾಂಧಿ ಅವರ ಬೈಕ್ ರೈಡ್ ಫೊಟೊಗಳನ್ನು ಹಂಚಿಕೊಂಡಿದೆ.
ಈ ಸುದ್ದಿ ಓದಿದ್ದೀರಾ? ಅಮರನಾಥ ಯಾತ್ರೆ | 300 ಅಡಿ ಆಳಕ್ಕೆ ಬಿದ್ದು ಯಾತ್ರಾರ್ಥಿ ಸಾವು
“ನನ್ನ ಬಳಿ ಕೆಟಿಎಂ 390 ಬೈಕ್ ಇದೆ. ಆದರೆ ಅದನ್ನು ಓಡಿಸಲು ನನ್ನ ಭದ್ರತಾ ಸಿಬ್ಬಂದಿ ಅವಕಾಶ ಕೊಡುವುದಿಲ್ಲ” ಎಂದು ಈ ಹಿಂದೆ ರಾಹುಲ್ ಗಾಂಧಿ ಹೇಳಿದ್ದರು. ಜತೆಗೆ ಮೆಕ್ಯಾನಿಕ್ ಜೊತೆ ಬೈಕ್ ಬಗೆಗಿನ ಸೂಕ್ಷ್ಮ ಅಂಶಗಳನ್ನು ಕಲಿತ ಬಗ್ಗೆ ಯುಟ್ಯೂಬ್ ಚಾನಲ್‌ನಲ್ಲಿ ಹಂಚಿಕೊಂಡಿದ್ದರು.
370ನೇ ವಿಧಿ ರದ್ದತಿಯ ನಂತರ ಜಮ್ಮು ಮತ್ತು ಕಾಶ್ಮೀರವನ್ನು ಲಡಾಖ್ ಮತ್ತು ಜಮ್ಮುಕಾಶ್ಮೀರ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಗಿದ್ದು ಇದು ರಾಹುಲ್ ಗಾಂಧಿ ಅವರ ಮೊದಲ ಲಡಾಖ್ ಭೇಟಿಯಾಗಿದೆ. ಅಗಸ್ಟ್ 25ರವರೆಗೆ ಲಡಾಖ್‌ನಲ್ಲಿ ರಾಹುಲ್ ಇರಲಿದ್ದಾರೆ ಎಂದು ವರದಿ ಹೇಳಿದೆ.