ದೇಶದಲ್ಲಿ ಕಲ್ಲಿದ್ದಲು ಸಮಸ್ಯೆ ಉದ್ಭವಿಸಿರುವ ಕುರಿತು ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ತಿರುಗೇಟು ನೀಡಿದ್ದು ಅವರು ಒಬ್ಬ ಸುಳ್ಳು ಜ್ಯೋತಿಷಿ ಎಂದು ಹೇಳಿದ್ದಾರೆ.
ಮುಂದುವರೆದು, ಇಂದು ನಾವು 818 ಮಿಲಿಯನ್ ಟನ್ ಕಲ್ಲಿದ್ದಲನ್ನು ಪೂರೈಸುತ್ತಿದ್ದೇವೆ. ಬೇಡಿಕೆ ಹೆಚ್ಚಾದಂತೆ ಕಲ್ಲಿದ್ದಲು, ವಿದ್ಯುತ್ ಹಾಗು ರೈಲ್ವೆ ಸಚಿವಾಲಯವು ಅದಕ್ಕೆ ಅನುಗುಣವಾಗಿ ಕೆಲಸ ಮಾಡಲಿದೆ. ಅವರು ಸತ್ಯವನ್ನು ತಿಳಿಯದೆ ಹಾಗೇ ಮಾತನಾಡುತ್ತಿದ್ದರೆ ಅವರನ್ನು ನಕಲಿ ಜ್ಯೋತಿಷಿ ಎಂದನ್ನದೆ ಬೇರೇನು ಹೇಳಬೇಕು ಎಂದು ವ್ಯಂಗ್ಯವಾಡಿದ್ದಾರೆ.
ದೇಶದಲ್ಲಿ ಇನ್ನು 10 ದಿನಕ್ಕಾಗುವಷ್ಟು 22 ಮಿಲಿಯನ್ ಟನ್ ಕಲ್ಲಿದ್ದಲು ದಾಸ್ತಾನಿನಲ್ಲಿ ಉಳಿದಿದೆ ಎಂದು ಹೇಳಿದ್ದಾರೆ.



