
ಬಿಹಾರ ಚುನಾವಣಾ ಪ್ರಚಾರದಲ್ಲಿರುವ (Bihar Election) ರಾಹುಲ್ ಗಾಂಧಿ (Rahul Gandhi) ಇಂದು ಬೇಗುಸರೈಯ ಹಳ್ಳಿಯ ಕೊಳದಲ್ಲಿ ಮೀನು (Fishing) ಹಿಡಿದು ಸುದ್ದಿಯಾಗಿದ್ದಾರೆ. ತಮ್ಮ ಭಾಷಣವನ್ನು ಮುಗಿಸಿದ ನಂತರ , ಬೇಗುಸರೈನ ಭರ್ರಾ ಗ್ರಾಮಕ್ಕೆ ತಲುಪಿದ ರಾಹುಲ್ ಬಲೆ ಬೀಸುತ್ತಿರುವ ಮೀನುಗಾರರನ್ನು ಭೇಟಿ ಮಾಡಲು ಸಣ್ಣ ದೋಣಿ ಹತ್ತುವ ಸಂದರ್ಭದಲ್ಲಿ ಕನ್ಹಯ್ಯ ಕುಮಾರ್ (Kannayya Kumar) ನೀರಿಗೆ ಹಾರಿದಾಗ ರಾಹುಲ್ ಹಾರಿದ್ದನ್ನು ಕಂಡು ಸೇರಿದ್ದ ಗ್ರಾಮಸ್ಥರು ಚಪ್ಪಾಳೆ ತಟ್ಟುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಾಯಕ ನೀರಿನಲ್ಲಿ ಮೀನುಗಾರರೊಂದಿಗೆ ನಗುತ್ತಾ ಮತ್ತು ಮಾತನಾಡುತ್ತಿದ್ದಾಗ ಎಸ್‌ಪಿಜಿ (SPG) ಸಿಬ್ಬಂದಿ ಕೂಡ ಅವರಿಗೆ ಭದ್ರತೆ ನೀಡಲು ನೀರಿಗೆ ಧುಮಿಕಿದರು. ಈ ಸಂದರ್ಭದಲ್ಲಿ ಮಾತನಾಡಿದ ಬೇಗುಸರೈ ಕಾಂಗ್ರೆಸ್ ಅಭ್ಯರ್ಥಿ ಅಮಿತಾ ಭೂಷಣ್ (Amitha Bhushan) ಇದು ಪೂರ್ವ ನಿಗದಿತ ಕಾರ್ಯಕ್ರಮ ಆಗಿರಲಿಲ್ಲ. ರಾಹುಲ್ ಅವರು ಮ್ಮ ಭಾಷಣ ಮುಗಿಸಿದ ನಂತರ ಹತ್ತಿರದ ಕೆಲವು ಮೀನುಗಾರರ ಬಗ್ಗೆ ತಿಳಿಯುವ ಕುತೂಹಲ ಇತ್ತು ಎಂದು ತಿಳಿಸಿದರು.

ಕೊಳದಲ್ಲಿ ರಾಹುಲ್ (Rahul Gandhi) ತಮ್ಮ ಈಜು ಕೌಶಲ್ಯವನ್ನು ಪ್ರದರ್ಶಿಸಿದ್ದಲ್ಲದೆ, ಸ್ಥಳೀಯರೊಂದಿಗೆ ಮೀನುಗಾರಿಕಾ ಬಲೆಗಳನ್ನು ಎಳೆಯಲು ಸಹ ಸಹಾಯ ಮಾಡಿದರು. ಈಜಾಡಿದ ಬಳಿಕ ರಾಹುಲ್ ಗಾಂಧಿ (Rahul Gandhi) ಹತ್ತಿರದಲ್ಲಿದ್ದ ಮಹಾದೇವ್ ಸಾಹ್ ಅವರ ಮನೆಗೆ ತೆರಳಿದರು.

