ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಲಾಲ್‌ಬಾಗ್ ಪುಷ್ಪಮೇಳಕ್ಕೆ ಅತಿಥಿಯಾಗಿ ತೆರಳಿದ್ದ ವೇಳೆ ತಮ್ಮ ಕಾರು ಗುದ್ದಿದ ಸ್ವಚ್ಛತಾ ಕಾರ್ಮಿಕನ ಮನೆಗೆ ಮಂಗಳವಾರ (ಆಗಸ್ಟ್ 15) ತೆರಳಿ ನಟಿ ರಚಿತಾ ರಾಮ್ ಕ್ಷಮೆಯಾಚಿಸಿದ್ದಾರೆ.
ಬೆಂಗಳೂರಿನ ಲಾಲ್‌ಬಾಗ್‌ನ ಪುಷ್ಪಮೇಳದಲ್ಲಿ ಅತಿಥಿಯಾಗಿ ಪಾಲ್ಗೊಳ್ಳುವುದಕ್ಕಾಗಿ ನಟಿ ರಚಿತಾ ರಾಮ್ ಸೋಮವಾರ (ಆಗಸ್ಟ್ 14) ಲಾಲ್‌ಬಾಗ್‌ಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ರಚಿತಾ ಪ್ರಯಾಣಿಸುತ್ತಿದ್ದ ಕಾರು ಸ್ವಚ್ಛತಾ ಕಾರ್ಮಿಕನಿಗೆ ಗುದ್ದಿದೆ. ಆದರೆ ಕಾರ್ಮಿಕ ಸ್ವಲ್ಪದರಲ್ಲಿ ಅಪಾಯದಿಂದ ಪಾರಾಗಿದ್ದರು.
ಲಾಲ್‌ಬಾಗ್ ಸಿಬ್ಬಂದಿಯನ್ನು ಮಂಗಳವಾರ ತಮ್ಮ ಮನೆಗೆ ಆಹ್ವಾನಿಸಿ ನಟಿ ರಚಿತಾ ರಾಮ್ ಕ್ಷಮೆ ಕೋರಿದ್ದಾರೆ. “ನಾನು ಲಾಲ್‌ಬಾಗ್ ಕಾರ್ಯಕ್ರಮಕ್ಕೆಂದು ತೆರಳಿದ್ದ ವೇಳೆ ಆಕಸ್ಮಿಕವಾಗಿ ನನ್ನ ಕಾರು ಅಲ್ಲಿ ಕೆಲಸ ಮಾಡುತ್ತಿದ್ದ ಸ್ವಚ್ಛತಾ ಕಾರ್ಮಿಕರಿಗೆ ಡಿಕ್ಕಿ ಹೊಡೆದಿದೆ. ನನ್ನ ಹಾಗೂ ನನ್ನ ಕಾರು ಚಾಲಕನ ತಪ್ಪಿಗೆ ಕ್ಷಮೆ ಕೇಳುತ್ತಿದ್ದೇನೆ. ಇದು ನಿನ್ನೆ ನನ್ನ ಗಮನಕ್ಕೆ ಬಂದಿರಲಿಲ್ಲ. ನಿನ್ನೆಯೇ ನಾನು ಕ್ಷಮೆ ಕೇಳುತ್ತಿದ್ದೆ. ಈಗ ಸಿಬ್ಬಂದಿಯನ್ನು ಮನೆಗೆ ಕರೆದು ನಾನೇ ಅವರ ಬಳಿ ಕ್ಷಮೆ ಕೇಳಿದ್ದೇನೆ. ಯಾವುದೇ ಕಾರ್ಮಿಕರಿಗೆ ಈ ಘಟನೆಯಿಂದ ನೋವಾಗಿದ್ದಲ್ಲಿ ನನ್ನನ್ನು ಕ್ಷಮಿಸಿ ಬಿಡಿ. ನನ್ನ ಕಾರು ಸಿಬ್ಬಂದಿಗೆ ಡಿಕ್ಕಿ ಹೊಡೆದಿದ್ದು ನನ್ನ ಗಮನಕ್ಕೆ ಬಂದಿಲ್ಲ. ನನ್ನ ಇದು ಆಕಸ್ಮಿಕವಾಗಿ ನಡೆದ ಘಟನೆ ಆಗ ನನಗೆ ಗೊತ್ತಾಗಲಿಲ್ಲ” ಎಂದು ಹೇಳಿದ್ದಾರೆ. ಸಿಬ್ಬಂದಿ ಬಳಿ ಕ್ಷಮೆ ಕೇಳಿದ ವಿಡಿಯೊವನ್ನು ರಚಿತಾ ರಾಮ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಏನು ಘಟನೆ?

ಈ ಸುದ್ದಿ ಓದಿದ್ದೀರಾ? ಈ ಬಾರಿ ದುಬೈನಲ್ಲಿ ‘ಸೈಮಾ’ ಸಮಾರಂಭ
ಲಾಲ್‌ಬಾಗ್‌ನಲ್ಲಿ ಆಯೋಜಿಸಲಾಗಿರುವ ಪುಪಮೇಳದಲ್ಲಿ ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್ ಅತಿಥಿಯಾಗಿ ಆಗಮಿಸಿದ್ದರು. ಲಾಲ್‌ಬಾಗ್‌ಗೆ ಆಗಮಿಸುವ ವೇಳೆ ಸ್ವಚ್ಛತಾ ಕಾರ್ಮಿಕನಿಗೆ ರಚಿತಾ ಕಾರು ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಅಪಘಾತದಿಂದ ಸ್ವಚ್ಛತಾ ಕಾರ್ಮಿಕ ಪಾರಾಗಿದ್ದರು. ಈ ವಿಯೊ ವೈರಲ್ ಆಗುತ್ತಿದ್ದಂತೆ ನಟಿ ಹಾಗೂ ಕಾರ್ ಚಾಲಕನ ವಿರುದ್ಧವಾಗಿ ಆಕ್ರೋಶ ವ್ಯಕ್ತವಾಗಿತ್ತು.