ಲೋಕಸಭಾ ಚುನಾವಣೆಯಲ್ಲಿ (Loksabha election) ಅಕ್ರಮ ಮತದಾನ ನಡೆದಿದೆ ಎನ್ನಲಾದ ಆರೋಪ ಮಾಡಿರುವ ರಾಹುಲ್ ಗಾಂಧಿ (Rahul gandhi) ಇಂದು ಬೆಂಗಳೂರಿಗೆ (Bengaluru) ಆಗಮಿಸಿ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಬಿಜೆಪಿ ನಾಯಕರು ಕಿಡಿ ಕಾರಿದ್ದು, ವಿಪಕ್ಷ ನಾಯಕ ಆರ್.ಅಶೋಕ್ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಹುಲ್ ಗಾಂಧಿ ಪಾರ್ಟಿ ಮಾಡೋಕೆ ಬಂದವ್ರೋ..? ಬಿರಿಯಾನಿ ತಿನ್ನೋಕೆ ಬಂದವ್ರೋ..? ಸಿಎಂ ಡಿಸಿಎಂ ಜಗಳ ಬಿಡಿಸೋಕೆ ಬಂದವ್ರೋ ಗೊತ್ತಿಲ್ಲ..ರಾಹುಲ್ ಗಾಂಧಿ ಅಟಮ್ ಬಾಂಬ್ ಸಿಡಿಸ್ತಾರೆ ಅಂತಾರೆ, ಆದರೆ ಇದು ಅಟಮ್ ಬಾಂಬ್ ಅಲ್ಲ, ಟುಸ್ ಪಟಾಕಿ ಎಂದು ವ್ಯಂಗ್ಯವಾಡಿದ್ದಾರೆ.

ಪ್ರತಿ ಬೂತ್ ಲೆವಲ್ ಏಜೆಂಟ್ ಗೆ ಬಿಎಲ್ ಎ ಕಾಂಗ್ರೆಸ್ ಅವರೇ ಅಪಾಯಿಂಟ್ ಮಾಡಿದ್ದು.ಮೋದಿ ಬಂದು ಬೂತ್ ಲೇವಲ್ ಏಜೆಂಟ್ ಗೆ BLA ಅಪಾಯಿಂಟ್ ಮೆಂಟ್ ಕೊಟ್ಟಿಲ್ಲ.ಕಾಂಗ್ರೆಸ್ ಪಾರ್ಟಿ ಅವರೇ BLA ಅಪಾಯಿಂಟ್ ಮಾಡಿರ್ತಾರೆ.BLA ಕೆಲ್ಸ ಏನಂದರೆ, ಬೂತ್ ಲೆವಲ್ ನಲ್ಲಿ ಮತಗಳ ಬಗ್ಗೆ ಮಾಹಿತಿ ಇದ್ರೆ, ಮತದಾರರು ಇಲ್ಲ ಅಂದರೆ ಎಲ್ಲವೂ ಮಾಹಿತಿ ಕೊಡಬೇಕು ಎಂದಿದ್ದಾರೆ.
ಇಷ್ಟೆಲ್ಲಾ ಇದ್ದಾಗ ರಾಹುಲ್ ಗಾಂಧಿ ಈ ರೀತಿ ಮಾಡುವುದಾದರೆ.. ಹಾಗಾದರೆ ನೀವು ಬೂತ್ ಲೆವಲ್ ಗೆ ಆಯ್ಕೆ ಮಾಡಿದ ಏಜೆಂಟ್ ಹತ್ರ ಎಷ್ಟು ದುಡ್ಡು ತಗೊಂಡ್ರಿ..? ಎಂದು ಕಿಡಿಕಾರಿದ್ದಾರೆ.





