KRS ಜಲಾಶಯಕ್ಕೆ ಟಿಪ್ಪು ಸುಲ್ತಾನ್ (Tippu sultan) ಸಾಗರ ಎಂದು ಮರುನಾಮಕರಣ ಮಾಡಲು ಕಾಂಗ್ರೆಸ್ (Congress) ಸರ್ಕಾರ ಹುನ್ನಾರ ನಡೆಸಿದೆ ಎಂದು ಮಂಡ್ಯದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ (R Ashok) ಹೇಳಿದ್ದಾರೆ. ಈ ಕುರಿತು ಮಹದೇವಪ್ಪ (HC Mahadevappa) ಈಗಾಗಲೇ ಪೀಠಿಕೆ ಹಾಕಿದ್ದಾರೆ.ಟಿಪ್ಪು ಬಗ್ಗೆ ಪ್ರೀತಿ ಇದ್ದರೆ ಕಾಂಗ್ರೆಸ್ ಬದಲು ಟಿಪ್ಪು ಸುಲ್ತಾನ್ ಪಾರ್ಟಿ ಎಂದು ಹೆಸರು ಇಟ್ಟುಕೊಳ್ಳಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಟಿಪ್ಪು ಸುಲ್ತಾನ್ ಓರ್ವ ನಾಡದ್ರೋಹಿ, ಆತ ಕನ್ನಡದವನಲ್ಲ, ಬದಲಾಗಿ ಪರ್ಶಿಯಾದವನು.ಟಿಪ್ಪು 1799ರಲ್ಲಿ ಸಾವನ್ನಪ್ಪಿದ್ದಾನೆ.KRS ಜಲಾಶಯ ಕಟ್ಟಲು ಆರಂಭಿಸಿದ್ದು 1911ರಲ್ಲಿ. ಟಿಪ್ಪು ಮೃತಪಟ್ಟು 112 ವರ್ಷದ ಬಳಿಕ ಡ್ಯಾಂ ಕಟ್ಟುವ ಕಾರ್ಯ ಶುರುವಾಗಿದೆ.ಗೋಕುಲಾಷ್ಠಮಿಗೂ ಇಮಾಮ್ ಸಾಬಿಗೂ ಏನ್ ಸಂಬಂಧ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇವರು ಹೇಳುವ ಶಿಲಾಶಾಸನ ಕನ್ನಡಲ್ಲಿದೆ. 1799ರಲ್ಲಿ ಕನ್ನಡ ಇತ್ತಾ? ಆಗ ಇದ್ದದ್ದು ಹಳೇಗನ್ನಡ.ಡ್ಯಾಂ ಬಳಿ ಹಾಕಲಾದ ಪರ್ಶಿಯನ್ ಭಾಷೆಯ ಶಿಲಾಫಲಕವನ್ನ ಅನುವಾದಿಸಿ ನೋಡಿ.ಅರಮನೆಯ ಒಡವೆಗಳನ್ನ ಮಾರಾಟಮಾಡಿ KRS ಅಣೆಕಟ್ಟು ಪೂರ್ಣಗೊಳಿಸಿದ್ರು.ಕಾಮಗಾರಿ ಪ್ರಾರಂಭವಾದಾಗಿನಿಂದ ಮುಗಿಯುವವರೆಗೂ ದಾಖಲೆ ಇದೆ ಎಂದಿದ್ದಾರೆ.

ಒಂದುವೇಳೆ ಟಿಪ್ಪು ಸುಲ್ತಾನ್ ಶಂಕುಸ್ಥಾಪನೆ ಮಾಡಿದ್ರೆ ಅವರ ಹೆಸರೇ ಇಡಬೇಕಿತ್ತಲ್ವ?ಮಿರ್ಜಾ ಇಸ್ಮಾಯಿಲ್ ದಿವಾನರಾಗಿದ್ದರಲ್ಲ ಆಗ ಟಿಪ್ಪು ಹೆಸರು ಇಡಬಹುದಿತ್ತಲ್ವ? ಪದೇ ಪದೇ ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಅಪಮಾನ ಮಾಡುವ ಪ್ರಯತ್ನ ನಡೆಯುತ್ತಿದೆ. ಒಡೆಯರ್ ಆಡಳಿತದಲ್ಲಿ ಹಳೇ ಮೈಸೂರು ಸಾಕಷ್ಟು ಅಭಿವೃದ್ಧಿ ಕಂಡಿದೆ.
ನಾಲ್ವಡಿಯವರಿಗೆ ಮೈಸೂರಿನ ಮಹಾಶಿಲ್ಪಿ ಅಂತ ಕರೆಯುತ್ತಾರೆ ಎಂದು ಹೇಳಿದ್ದಾರೆ.ಟಿಪ್ಪು ಸುಲ್ತಾನ್ ಓರ್ವ ಮತಾಂಧ, ಸಾವಿರಾರು ಹಿಂದೂಗಳನ್ನ ಹತ್ಯೆ ಮಾಡಿ, ನೂರಾರು ದೇವಾಲಯ ಕೆಡವಿದವನು. ಆದ್ರೆ ಮುಸ್ಲಿಮರ ಓಟಿಗಾಗಿ ಕೃಷ್ಣರಾಜ ಒಡೆಯರ್ ಅವರನ್ನ ಕಾಂಗ್ರೆಸ್ಸಿಗರು ಬಿಡದೆ ಕಾಡ್ತಿದ್ದಾರೆ.ಟಿಪ್ಪು ಹಿಂದೆ ಹೋದವರಲ್ಲೆ ಸರ್ವನಾಶ ಆಗಿದ್ದಾರೆ.ಟಿಪ್ಪು ಕತ್ತಿ ಪಡೆದ ವಿಜಯ ಮಲ್ಯ ದೇಶಬಿಟ್ಟ.ಅದೇ ರೀತಿ ಕಾಂಗ್ರೆಸ್ಸಿನವರು ಸರ್ವನಾಶ ಆಗ್ತಾರೆ ಎಂದು ಆರ್.ಅಶೋಕ್ ಗುಡುಗಿದ್ದಾರೆ.