ಡಿಸಿಎಂ ಡಿಕೆ ಶಿವಕುಮಾರ್ (Dcm Dk Shivakumar) ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ (R Ashok) ಹೇಳಿಕೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಡಿಕೆ ಶಿವಕುಮಾರ್ ಅವರ ಹೇಳಿಕೆಯನ್ನು ಲೇವಡಿ ಮಾಡಿಯುವ ಆರ್ ಅಶೋಕ್,ಯಪ್ಪಾ ಡಿಕೆ ಶಿವಕುಮಾರ ನೀನು 60% ಕಮಿಷನ್ ಹೊಡೆತಾ ಇದ್ಯಲ್ಲ, ಅದರಲ್ಲಿ ನಿಮ್ಮ ಕಾರ್ಯಕರ್ತರಿಗೆ 10% ಕೊಡು ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಸರ್ಕಾರದ ಹಣ ನಿಮ್ಮ ಕಾರ್ಯಕರ್ತರಿಗೆ ಕೊಡಬೇಡಿ.ಕಾಂಗ್ರೆಸ್ ಚೇಲಾಗಳಿಗೆ ನೀವು ತೆರಿಗೆ ಹಣ ನೀಡಬೇಡಿ.ಅವರಿಗೆ ಸಾಂವಿಧಾನಿಕವಾಗಿ ಏನು ಜವಬ್ದಾರಿ ಇದೆ..?ನಾವು ಶಾಸಕರು ಸಂವಿಧಾನದ ಪ್ರಕರಾ ಗೆದ್ದು ಬಂದವರು ಎಂದು ವಾಗ್ದಾಳಿ ನಡೆಸಿದ್ದಾರೆ.

ನಾನು ಕಾಂಗ್ರೆಸ್ ಕಾರ್ಯಕರ್ತರ ಋಣ ತೀರಿಸಬೇಕು ಅಂತಾರೆ ಡಿಕೆಶಿ.ಅದಕ್ಕೆ ವಿಧಾನಸೌಧ ಕಾಂಗ್ರೆಸ್ ಕಾರ್ಯಾಲಾಯ ಆಗಿದೆ. ಸರ್ಕಾರದ ಕೆಲಸ ಕಾಂಗ್ರೆಸ್ ಆಫೀಸ್ ಕೆಲಸ ಆಗಿದೆ.ಕಳ್ಳರು ರಾತ್ರಿ ದರೋಡೆ ಮಾಡುತ್ತಾರೆ ಆದ್ರೆ ಇವರು ಹಗಲಲ್ಲಿ ಆಫಿಶಿಯಲ್ ಆಗಿ ದರೋಡೆ ಮಾಡುತ್ತಾರೆ ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.