ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress government) ಅಧಿಕಾರಕ್ಕೆ ಬಂದ ನಂತರ ಓಲೈಕೆ ರಾಜಕಾರಣ ಪರಮಾವಧಿಯನ್ನು ತಲುಪಿದೆ. ಸಿಎಂ ಸಿದ್ದರಾಮಯ್ಯನಿಗೆ (Cm siddaramaiah) ಟಿಪ್ಪು ಸುಲ್ತಾನನಂತವರು (Tippu sultan) ಮಾದರಿ,ಹೀಗಾಗಿ ಮುಸ್ಲಿಮರನ್ನು ಓಲೈಸಲು ವಕ್ಫ್ ಮಂಡಳಿ (Waqf board) ಹೆಸರಿನಲ್ಲಿ ಕಾಂಗ್ರೆಸ್ ಲೂಟಿ ಹೊಡೆಯಲು ಮುಂದಾಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.
ಈಗ ಸದ್ಯ ರಾಜ್ಯದಲ್ಲಿ ವಕ್ಫ್ ಬೋರ್ಡ್ ನ ಅಟ್ಟಹಾಸ, ಸಚಿವರ ವರ್ತನೆ, ಸರ್ಕಾರದ ನಡವಳಿಕೆಗಳನ್ನು ಗಮನಿಸುತ್ತಿದ್ದರೆ,ಅತಿಯಾದ ಓಲೈಕೆಯ ಮೂಲಕ ಸಿಎಂ ಸಿದ್ದರಾಮಯ್ಯ ಮುಸ್ಲಿಮರ ಸಾಮ್ರಾಟನಾಗಲು ಯತ್ನಿಸುತ್ತಿದ್ದಾರೆ ಎಂದು ಆರ್.ಅಶೋಕ್ (R Ashok) ಆರೋಪಿಸಿದ್ದಾರೆ.
ಈಗ ರಾಜ್ಯದಲ್ಲಿ ವಕ್ಫ್ ಬೋರ್ಡ್ ನ ಭೂ ಕಬಳಿಕೆ ದಾಹದ ಕ್ಯಾನ್ಸರ್ (Cancer)ವ್ಯಾಪಕವಾಗಿ ಹರಡುತ್ತಿದ್ದು, ಒಂದುವೇಳೆ ಇದನ್ನು ತಡೆಗಟ್ಟದಿದ್ದರೆ ರೈತರು, ದಲಿತರ ಜಮೀನು ಯಾವುದೇ ಕಾರಣಕ್ಕೂ ಉಳಿಯುವುದಿಲ್ಲ. ಹೀಗಾಗಿ ಸ್ವಾತಂತ್ರ್ಯ ಚಳವಳಿ ಮಾಡಿದಂತೆಯೇ ಈಗ ನಾವು ಹೋರಾಟ ಮಾಡಿ ವಕ್ಫ್ ಬೋರ್ಡ್ ರದ್ದು ಮಾಡಬೇಕಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿಯುದ್ಧ ಹರಿಹಾಯ್ದಿದ್ದಾರೆ.