ಮೈಸೂರು ಮುಡಾ ಪ್ರಕರಣದ (Mysuru muda case) ತನಿಖೆಯನ್ನು ಸಿಬಿಐಗೆ ವಹಿಸುವಂತೆ ನಾವೇ ಹೋರಾಟ ಮಾಡಿದ್ದು ಅಂತಾ ವಿಪಕ್ಷ ನಾಯಕ ಆರ್.ಅಶೋಕ್ (R ashok) ಹೇಳಿದ್ದಾರೆ. ಈ ಬಗ್ಗೆ ಮೈಸೂರಲ್ಲಿ ಮಾತನಾಡಿದ ಅವರು ಲೋಕಾಯುಕ್ತ (Lokayukta) ತನಿಖೆ ಪಾರದರ್ಶಕದಿಂದ ಆಗಿಲ್ಲ ಎಂದು ಆರೋಪಿಸಿದ್ದಾರೆ.
ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಪರವಾಗಿ ಲೋಕಯುಕ್ತ ಅಧಿಕಾರಿಗಳು ರಿಪೋರ್ಟ್ ಕೊಡ್ತಾರೆ. ಅಧಿಕಾರಿಗಳಿಗೆ ಪ್ರಮೋಶನ್ ಬೇಕು.. ಟ್ರಾನ್ಸ್ಫರ್ ಬೇಕು. ಹೀಗಾಗಿ ವಿಚಾರಣೆಗೆ ಸಿಎಂ ಟೈಮ್ ಫಿಕ್ಸ್ ಮಾಡಿಕೊಂಡು ಬರ್ತಾರೆ. ಟೈಮ್ ಫಿಕ್ಸ್ ಮಾಡಿಕೊಂಡು ಹೋಗ್ತಾರೆ ಅಂದ್ರೆ ಅರ್ಥ ಏನು? ಎಂದು ಅಶೋಕ್ ಕಿಡಿ ಕಾರಿದ್ದಾರೆ.
ಇನ್ನು ಲೋಕಾಯುಕ್ತ ರಿಪೋರ್ಟ್ ಬಗ್ಗೆ ಭವಿಷ್ಯ ನುಡಿದ ಅವರು, ನಾನು ಈಗಲೇ ಹೇಳುತ್ತಿದ್ದೇನೆ ಸಿಎಂ ಸಿದ್ದರಾಮಯ್ಯ ಪರವಾಗಿ ಲೋಕಾಯುಕ್ತ ರಿಪೋರ್ಟ್ ಕೊಡ್ತಾರೆ ಬರೆದಿಟ್ಟುಕೊಳ್ಳಿ.. ನಮ್ಮ ಮುಡಾ ಹೋರಾಟ ಮುಂದುವರೆಯುತ್ತದೆ ಅಂತಾ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.