ಕಳೆದ ಕೆಲ ವರ್ಷಗಳಿಂದ ಯುವ ಜನತೆ ಮಾರಕ ಡ್ರಗ್ಸ್ಗೆ ಅಡಿಕ್ಟ್ ಆಗುತ್ತಿರುವುದು ಕಂಡು ಬರುತ್ತಿದೆ. ಇದರ ನಿರ್ಮೂಲನೆಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ ಮತ್ತು ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನ ಮಾಡುತ್ತಿದೆ.
ಇನ್ನು ಡ್ರಗ್ಸ್ ನಿರ್ಮೂಲನೆಗಾಗಿ ಕನ್ನಡದಲ್ಲಿ ಕ್ಷಿಟ್ ಎಂಬ ಆಲ್ಬಮ್ ಸಾಂಗ್ ಬಿಡುಗಡೆಯಾಗಿದ್ದು ಸಖತ್ ಸದ್ದು ಮಾಡುತ್ತಿದೆ.ರಕ್ಷಿತ್ ತೀರ್ಥಹಳ್ಳಿ ನಿರ್ದೇಶಿಸಿರುವ ಈ ಹಾಡಿಗೆ ಹೇಮಂತ್ ಜೋಯಿಸ್ ಸಂಗೀತ ನೀಡಿದ್ದು ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ.
ಹಾಡಿನಲ್ಲಿ ಅನಿವಾಸಿ ಭಾರತೀಯ ಆದರ್ಶ್ ಅಯ್ಯಂಗಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಆದರ್ಶ್ಗೆ ಜೋಡಿಯಾಗಿ ಧಮಯಂತಿ ಖ್ಯಾತಿಯ ನಿತ್ಯಾ ದಾಸ್ಗೌಡ ನಟಿಸಿದ್ದಾರೆ. ಈ ಹಿಂದೆ ಆದರ್ಶ್ ತಮ್ಮ ಸ್ವಂತ ನಿರ್ಮಾಣ ಸಂಸ್ಥೆ ಶ್ರೀಕೃಷ್ಣ ಪ್ರೊಡಕ್ಷನ್ಸ್ ಮೂಲಕ ಹಲವು ಸಮಾಜಮುಖಿ ಸಂದೇಶವಿರುವ ಆಲ್ಬಮ್ ಸಾಂಗ್ಗಳನ್ನ ನಿರ್ಮಾಣ ಮಾಡಿದ್ದಾರೆ.
