75ನೇ ಸ್ವಾತಂತ್ರೋತ್ಸವ ಸಂಧರ್ಭದಲ್ಲಿ ಸಾವರ್ಕರ್ ಫ್ಲೆಕ್ಸ್ ಸಮರ ಇದೀಗ ಬೇರೆ ಬೇರೆ ಆಮಾಗಳು ಪಡೆದುಕೊಳ್ಳುತ್ತಿದೆ. ʻಗಣೇಶ ಪಕ್ಕದಲ್ಲಿ ಸಾವರ್ಕರ್ ಫೋಟೋ ಇಡುತ್ತೇವೆ ನಿಮಗೆ ತಾಕತ್ತು ಇದ್ದರೆ ತಡೀರಿ ಎಂದು ಮುತಾಲಿಕ್ ಸವಾಲ್ ಹಾಕಿದ್ದಾರೆ.

ಇಂದು ಬೆಂಗಳುರಿನಲ್ಲಿ ಮಾತನಾಡಿದ ಅವರು, ಸಾವರ್ಕರ್ ಅವಮಾನ ಮಾಡಿದ್ರೆ ಇಡೀ ರಾಷ್ಟ್ರಕ್ಕೆ ಅವಮಾನ ಮಾಡಿದಂತೆ. ಸಾರ್ವಜನಿಕ ಗಣೇಶೋತ್ಸವ ಮಂಟಪದಲ್ಲಿ ವೀರ ಸಾವರ್ಕರ್ ಫೋಟೋ ಇಡುತ್ತೇವೆ, ದೇಶ ಭಕ್ತಿಯನ್ನು ಸಾರುತ್ತೇವೆ. ನಿಮಗೆ ತಾಕತ್ ಇದ್ರೆ ತಡೀರಿ ನೋಡೋಣ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರವೋದ್ ಮುತಾಲಿಕ್ ಸವಾಲ್ ಹಾಕಿದ್ದಾರೆ.











