ಈ ವರ್ಷದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ (Pan india) ಅಲ್ಲು ಅರ್ಜುನ್ ನಟನೆಯ ಪುಷ್ಪ 2 (Pushpa 2) ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿದೆ. ಅಬ್ಬರದ ಪ್ರಚಾರದ ಜೊತೆಗೆ ಚಿತ್ರತಂಡ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಸೆನ್ಸಾರ್ ಮಂಡಳಿಯಿಂದ ಸಿನಿಮಾಗೆ ಯುಎ (U/A) ಸರ್ಟಿಫಿಕೇಟ್ ಸಿಕ್ಕಿದ್ದು, ಚಿತ್ರತಂಡ ಸಂಭ್ರಮ ವ್ಯಕ್ತಪಡಿಸಿದೆ.
ಆದ್ರೆ ಈ ಮಧ್ಯೆ ಪ್ರೇಕ್ಷಕರ ಆಚಾರ್ಯಕ್ಕೆ ಕಾರಣವಾಗಿರುವ ವಿಚಾರ ಅಂದ್ರೆ, ಈ ಸಿನಿಮಾದ ರನ್ ಟೈಂ. ಹೌದು ಪುಷ್ಪ 2 ರನ್ ಸಿನಿಮಾದ ಪೂರ್ಣ ಅವಧಿ ಬರೋಬ್ಬರಿ 3 ಗಂಟೆ, 21 ನಿಮಿಷ 22 ಸೆಕೆಂಡ್ ಇದ್ದು, ಇದೊಂದು ಲೆಂಥಿ ಸಿನಿಮಾ ಆಗಿರಲಿದೆ.
ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ ಹಾಗೂ ಬೆಂಗಾಲಿ ಸೇರಿ 6 ಭಾಷೆಯಲ್ಲಿ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದ್ದು, ಸಾಮಾನ್ಯ ಕಾರ್ಮಿಕ ಪುಷ್ಪರಾಜ್ ಶ್ರೀಮಂತನಾಗಿ ಬೆಳೆದ ರೀತಿಯನ್ನು ಹಾಡಿನಲ್ಲಿ ಕಟ್ಟಿಕೊಡಲಾಗಿದೆ. ಇನ್ನು ಸಿನಿಮಾದಲ್ಲಿ ಏನೇನೆಲ್ಲ ಇರಲಿದೆ ಎಂಬುದನ್ನು ಥಿಯೇಟರ್ ನಲ್ಲಿ ಕಣ್ತುಂಬಿಕೊಳ್ಳಬೇಕಿದೆ.