ಪಂಜಾಬಿ ಗಾಯಕ ದಲೇರ್ ಮೆಹಂದಿಗೆ 2003ರ ಅಕ್ರಮ ಮಾನವ ಸಾಕಾಣಿಕೆ ಪ್ರಕರಣದಲ್ಲಿ ಜಾಮೀನು ಮಂಜೂರಾಗಿದೆ.
ಗುರುವಾರ ಪಂಜಾಬ್ – ಹರಿಯಾಣ ಹೈಕೋರ್ಟ್ ದಲೇರ್ ಮೆಹಂದಿಗೆ ಜಾಮೀನು ಮಂಜೂರು ಮಾಡಿದೆ.
ಮಾನವ ಕಳ್ಳಸಾಕಾಣಿಕೆ ಪ್ರಕರಣದಲ್ಲಿ ಪಟಿಯಾಲಾ ಹೈಕೋರ್ಟ್ ಜುಲೈ 14ರಂದು 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.
ಯುರೋಪ್ ಸೇರಿದಂತೆ ವಿವಿಧ ದೇಶಗಳಲ್ಲಿ ಸಾಂಸ್ಕೃತಿ ಕಾರ್ಯಕ್ರಮ ನೀಡುವ ನೆಪದಲ್ಲಿ ದಲೇರ್ ಮಹೆಂದಿ ಮಾನವ ಕಳ್ಳಸಾಕಾಣಿಕೆ ಮಾಡುತ್ತಿದ್ದಾರೆ ಎಂಬ ಆರೋಪ ದೃಢಪಟ್ಟಿತ್ತು.