ಇಂದು ಚಂಡೀಗಢದಲ್ಲಿ ನಡೆದ ಪಂಜಾಬ್ (Punjab kings) ಮತ್ತು ಕೋಲ್ಕತಾ (KKR) ನಡುವಿನ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ತಂಡ ಕೆಕೆಆರ್ ವಿರುದ್ಧ ರೋಚಕ ಗೆಲುವು ಸಾಧಿಸಿದೆ.

ಇಂದು ಮೊದಲು ಬ್ಯಾಟಿಂಗ್ ಗೆ ಇಳಿದ ಪಂಜಾಬ್ 15.3 ಓವರ್‌ಗಳಲ್ಲಿ ಕೇವಲ 111 ರನ್‌ಗಳಿಗೆ ಆಲೌಟ್ ಆಯ್ತು. ಪಂಜಾಬ್ ಪರ ಪ್ರಭಾಸಿಮ್ರಾನ್ 30, ಪ್ರಿಯಾಂಶ್ 22, ಶಶಾಂಕ್ 18, ವಧೇರಾ 10 ರನ್‌ಗಳಿಸಿದರು. ಕೆಕೆಆರ್ ಪರ ಹರ್ಷಿತ್ 3, ವರುಣ್ ಮತ್ತು ನರೈನ್ ತಲಾ 2 ವಿಕೆಟ್ ಪಡೆದರೆ, ಅನ್ರಿಚ್ ಮತ್ತು ಅರೋರಾ ತಲಾ ಒಂದು ವಿಕೆಟ್ ಪಡೆದ್ರು.

ಆ ಬಳಿಕ 112 ರನ್‌ಗಳ ಗುರಿ ಬೆನ್ನಹತ್ತಿದ ಕೆಕೆಆರ್ ಪಂಜಾಬ್ ಮಾರಕ ಬೌಕಿಂಗ್ ದಾಳಿಗೆ ತತ್ತರಿಸಿ ಹೋಯ್ತು.ಕೇವಲ 15.1 ಓವರ್ ಗಳಲ್ಲಿ 95 ರನ್ ಗಳಿಗೆ ಕೆಕೆಆರ್ ಸರ್ವಪತನ ಕಾಣುವ ಮೂಲಕ ಪಂದ್ಯ ಸೋತಿದೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅತೀ ಕಡಿಮೆ ಸ್ಕೋರ್ ಡಿಫೆಂಡ್ ಮಾಡಿದ ಕೀರ್ತಿ ಪಂಜಾಬ್ ಪಾಲಾಗಿದೆ.