• Home
  • About Us
  • ಕರ್ನಾಟಕ
Friday, October 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಪಂಜಾಬ್ ರಾಜಕೀಯ ಅಂಗಣದಲ್ಲಿ ಸಿಕ್ಸರ್ ಬಾರಿಸುವರೇ ಸಿಧು?

Shivakumar A by Shivakumar A
July 1, 2021
in ದೇಶ, ರಾಜಕೀಯ
0
ಪಂಜಾಬ್ ರಾಜಕೀಯ ಅಂಗಣದಲ್ಲಿ ಸಿಕ್ಸರ್ ಬಾರಿಸುವರೇ ಸಿಧು?
Share on WhatsAppShare on FacebookShare on Telegram

ಪಂಜಾಬ್ ನಲ್ಲಿ ಚುನಾವಣೆಗೆ ಇನ್ನು ಎರಡು ವರ್ಷಗಳು ಬಾಕಿ ಇವೆ. ಈಗಲೇ ಪಂಜಾಬ್ ಕಾಂಗ್ರೆಸ್ ಘಟಕದಲ್ಲಿ ಒಡಕು ಮೂಡಿದ್ದು, ಸಿಎಂ ಅಮರಿಂದರ್ ಸಿಂಗ್ ಮತ್ತು ನವಜ್ಯೋತ್ ಸಿಂಗ್ ಸಿಧು ನಡುವಿನ ಸಮರ ಈಗ ತಾರಕಕ್ಕೆ ಏರಿದೆ. ಪಕ್ಷದ ಹೈಕಮಾಂಡ್ ಅನ್ನು ಭೇಟಿಯಾಗಿ ನಾಯಕರ ಒಲವನ್ನು ಗಳಿಸುವ ಪ್ರಯತ್ನ ನಡೆಯುತ್ತಿದೆ. 

ADVERTISEMENT

ಬುಧವಾರ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಸಿಧು, ಪಂಜಾಬ್ ಕಾಂಗ್ರೆಸ್ ನಲ್ಲಿ ಮೂಡಿರುವ ಒಡಕು ನಿವಾರಿಸಲು ರಾಷ್ಟ್ರ ನಾಯಕರು ಮುಂದೆ ಬಂದಿದ್ದಾರೆ. ಅವರ ನಿರ್ಧಾರಕ್ಕಾಗಿ ಕಾಯುತ್ತೇನೆ ಎಂದು ಹೇಳಿದ್ದಾರೆ. 

ರಾಹುಲ್ ಗಾಂಧಿಯವರನ್ನು ಭೇಟಿಯಾಗುವ ಮುನ್ನ ಸಿಧು ಅವರು, ಪ್ರಿಯಾಂಕ ಗಾಂಧಿ ಅವರನ್ನು ಭೇಟಿಯಾಗಿದ್ದರು. ಸತತ ನಾಲ್ಕು ಗಂಟೆಗಳ ಕಾಲ ಪ್ರಿಯಾಂಕ ಗಾಂಧಿಯೊಂದಿಗೆ ಚರ್ಚೆ ನಡೆಸಿದರು. ಈ ಚರ್ಚೆಯ ವಿಷಯಗಳು ಇನ್ನೂ ಬಹಿರಂಗವಾಗಿಲ್ಲ. ಇಷ್ಟು ಮಾತ್ರವಲ್ಲದೇ, ರಾಹುಲ್ ಗಾಂಧಿಯವರೊಂದಿಗಿನ ಸಭೆಯಲ್ಲಿ ಕೂಡಾ ಪ್ರಿಯಾಂಕ ಗಾಂಧಿ ಹಾಜರಿದ್ದಿದ್ದು, ಪಂಜಾಬ್ ಕಾಂಗ್ರೆಸ್ ನಲ್ಲಿ ಎದ್ದಿರುವ ಭಿನ್ನಮತದ ತೀವ್ರತೆಯನ್ನು ಸೂಚಿಸುತ್ತದೆ. 

ಈ ಎರಡೂ ಸಭೆಗಳು ಸಿಧು ಅವರನ್ನು ಸಮಾಧಾನಗೊಳಿಸಿವೆಯೇ ಇಲ್ಲವೇ ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ. ಸಿಧು ಅವರು ಹೈಕಮಾಂಡ್ ಮುಂದಿಟ್ಟಿರುವ ಬೇಡಿಕೆಗಳ ಮೇಲೆ ಈ ವಿಚಾರ ನಿರ್ಧರಿತವಾಗಿದೆ. 

ಸಿಎಂ ಖುರ್ಚಿ ಮೇಲೆ ಕಣ್ಣು?

೨೦೧೭ರ ಚುನಾವಣೆಗಿಂತಲೂ ಹಿಂದೆ ಬಿಜೆಪಿ ಪಕ್ಷದಲ್ಲಿದ್ದ ಸಿಧು, ನಂತರ ಕಾಂಗ್ರೆಸ್ ಪಾಳೆಯಕ್ಕೆ ಸೇರಿದ್ದರು. ಚುನಾವಣೆಯಲ್ಲಿ ಭರ್ಜರಿ ಪ್ರಚಾರ ನಡೆಸುವ ಮೂಲಕ ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನೂ ವಹಿಸಿಕೊಂಡಿದ್ದರು. ಈಗ ಮತ್ತೆ ಬಿಜೆಪಿ ಕಡೆಗೆ ಸಿಧು ಮುಖ ಮಾಡಲಿದ್ದಾರೆ ಎಂಬ ಕುರಿತು ಕಳೆದ ಮೇ ತಿಂಗಳಲ್ಲಿ ಗಾಳಿ ಸುದ್ದಿ ಹಬ್ಬಿತ್ತು. ಈ ಸಂದರ್ಭದಲ್ಲ ಇಎಚ್ಚೆತ್ತ ಹೈಕಮಾಂಡ್ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದೆ. 

ಕೃಷಿ ಕಾಯ್ದೆಗಳ ವಿರುದ್ದ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿ ಪಂಜಾಬ್ ರೈತರ ಪಾಲು ಹೆಚ್ಚಿದೆ. ರಾಜ್ಯದ ಮೂಲೆ ಮೂಲೆಯಲ್ಲಿಯೂ ಬಿಜೆಪಿ ವಿರುದ್ದ ಜನರು ಸಿಡಿದೆದ್ದಿದ್ದಾರೆ. ಇಂತಹ ಸಂದರ್ಭದಲ್ಲಿ ೨೦೨೨ರ ಚುನಾವಣೆಯಲ್ಲಿ ಗೆಲ್ಲಲು, ಕಾಂಗ್ರೆಸ್ ಮುಂದೆ ವಿಫುಲವಾದ ಅವಕಾಶಗಳಿವೆ. ಈ ಅವಕಾಶವನ್ನು ಬಳಸಿಕೊಂಡು ಸಿಎಂ ಸ್ಥಾನವನ್ನು ಪಡೆಯುವ ಆಲೋಚನೆ ಮಾಡಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. 

ಸಿಧು ಅವರ ಈ ಪ್ರಯತ್ನಕ್ಕೆ ಈಗಾಗಲೇ ತಣ್ಣೀರೆರಚಿರುವ ಹೈಕಮಾಂಡ್, ಹಾಲಿ ಸಿಎಂ ಅಮರೀಂದರ್ ಸಿಂಗ್ ಅವರಿಗೆ ನೀಡಿರುವ ಬೆಂಬಲ ಮುಂದುವರೆಸುವುದಾಗಿ ಹೇಳಿದ್ದಾರೆ. ಮಾತ್ರವಲ್ಲದೇ, ಮುಂಬರುವ ಚುನಾವಣೆಯನ್ನು ಕೂಡಾ ಅವರ ನೇತೃತ್ವದಲ್ಲಿಯೇ ಎದುರಿಸುವುದಾಗಿ ಹೇಳಿದೆ. ಆದರೆ, ರಾಜಕೀಯದಲ್ಲಿ ಯಾವಾಗ ಯಾರ ಸ್ಥಾನ ಪಲ್ಲಟವಾಗುತ್ತದೆ ಎಂಬುದು ಯಾರು ಬಲ್ಲರು? ಈ ಕಾರಣಕ್ಕಾಗಿ, ಸಿಎಂ ಸ್ಥಾನಕ್ಕೆ ಸಿಧು ತಮ್ಮ ಲಾಬಿ ಮುಂದವರೆಸಿರುವ ಸಾಧ್ಯತೆಗಳು ಕೂಡಾ ಇವೆ. 

ಭಿನ್ನಮತ ಶಮನಕ್ಕೆ ಮುಂದಾದ ಪ್ರಿಯಾಂಕ ಗಾಂಧಿ?

ಕೆಲ ದಿನಗಳ ಹಿಂದೆ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಅವರು ಸ್ಥಳೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಿಧು ವಿರುದ್ದ ವಾಗ್ದಾಳಿ ನಡೆಸಿದ್ದರು. ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರೀವಾಲ್ ಜತೆ ಸಿಧು ಮಾತುಕತೆಯಲ್ಲಿ ತೊಡಗಿದ್ದಾರೆ. ಅವರು ಯಾವ ಕ್ಷಣದಲ್ಲಿ ಬೇಕಾದರೂ ಪಕ್ಷ ಬದಲಾಯಿಸಬಹುದು ಎಂದಿದ್ದರು. 

ಈ ಹೇಳಿಕೆಯಿಂದ ಸಿಟ್ಟಿಗೆದ್ದಿದ್ದ ಸಿಧು, ಅಮರಿಂದರ್ ಸಿಂಗ್ ಅವರ ಹೇಳಿಕೆಗೆ ಸ್ಪಷ್ಟನೆ ಕೇಳಿದ್ದರು. 

ಇದೇ ರೀತಿಯ ಒಳಜಗಳ ಒಮ್ಮೆ ರಾಜಸ್ಥಾನ ಕಾಂಗ್ರೆಸ್ ನಲ್ಲಿಯೂ ನಡೆದಿತ್ತು. ಆ ಸಂದರ್ಭಧಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಯುವ ನಾಯಕ ಸಚಿನ್ ಪೈಲಟ್ ನಡುವೆ ತಕಾರಾರು ಎದ್ದಿತ್ತು. ಇನ್ನೇನು ಕಾಂಗ್ರೆಸ್ ಇಬ್ಬಾಗವಾಗುತ್ತದೆ ಎನ್ನುವಷ್ಟರಲ್ಲಿ ಪ್ರಿಯಾಂಕ ಗಾಂಧಿ ಮಧ್ಯ ಪ್ರವೇಶಿಸಿ ಭಿನ್ನಮತ ಶಮನಗೊಳಿಸಿದ್ದರು. ಈಗ ಪಂಜಾಬ್ ಕಾಂಗ್ರೆಸ್ ನಲ್ಲಿ ಉಂಟಾಗಿರುವ ಒಡಕು ಸರಿಪಡಿಸಲು ಮತ್ತೆ ಪ್ರಿಯಾಂಕ ಗಾಂಧಿಯವರು ಮುಂದಾಗಿದ್ದಾರೆ. 

ಸಚಿವ ಸ್ಥಾನ ನಿರಾಕರಿಸಿದ ಸಿಧು: 

ರಾಜ್ಯ ಕಾಂಗ್ರೆಸ್ ನಲ್ಲಿದ್ದ ಭಿನ್ನಮತ ಶಮನಕ್ಕಾಗಿ ಸೋನಿಯಾ ಗಾಂಧಿ ಅವರು ಎಐಸಿಸಿಯ ತ್ರಿಸದಸ್ಯ ಸಮಿತಿಯನ್ನು ರಚಿಸಿ ವರದಿ ಕೇಳಿದ್ದರು. ಈ ವರದಿಯ ಪ್ರಕಾರ ಸಿಧು ಅವರಿಗೆ ಪಕ್ಷದಲ್ಲಿ ಹಾಗು ಸರ್ಕಾರದಲ್ಲಿ ಸ್ಥಾನ ನೀಡಬೇಕೆಂದು ಹೇಳಲಾಗಿತ್ತು. ಆದರೆ, ಈ ಸಿಧು ಅವರು ಈ ಆಫರ್ ಅನ್ನು ನೇರವಾಗಿ ತಿರಸ್ಕರಿಸಿದ್ದರು. 

“ಲೋಕಸಭೆ, ರಾಜ್ಯಸಭೆ, ಶಾಸಕ, ಮಂತ್ರಿ… ಹೀಗೆ ಹದಿನೇಳು ವರ್ಷ ರಾಜಕೀಯದಲ್ಲಿದ್ದೇನೆ. ಒಂದೇ ಉದ್ದೇಶ ಏನೆಂದರೆ, ಪಂಜಾಬ್ ನ ಆಡಳಿತ ವ್ಯವಸ್ಥೆಯನ್ನು ಬದಲಾಯಿಸಿ ಇಲ್ಲಿನ ಜನರಿಗೆ ಅಧಿಕಾರ ನೀಡುವುದು. ನನಗೆ ಹಲವು ಬಾರಿಯೂ ಕ್ಯಾಬಿನೆಟ್ ಸ್ಥಾನ ನೀಡದರೂ, ವ್ಯವಸ್ಥೆಯನ್ನು ಬದಲಾಯಿಸುವ ನನ್ನ ಪ್ರತೀ ಪ್ರಯತ್ನವನ್ನು ‘ವ್ಯವಸ್ಥೆ’ ನಿರಾಕರಿಸಿದಾಗ ನಾನು ‘ವ್ಯವಸ್ಥೆ’ಯನ್ನೇ ನಿರಾಕರಿಸುತ್ತೇನೆ,” ಎಂದು ಹೇಳಿದ್ದರು. 

ಕಳೆದೆರಡು ವರ್ಷಗಳಿಂದ ಮುಸುಕಿನ ಗುದ್ದಾಟದಂತಿದ್ದ ಸಿಧು-ಅಮರಿಂದರ್ ಜಗಳ ಈಗ ಬೀದಿಗೆ ಬಂದು ನಿಂತಿದೆ. ಎರಡೇ ವರ್ಷಗಳಲ್ಲಿ ಚುನಾವಣೆಯೂ ಬರಲಿದ್ದು, ಕಾಂಗ್ರೆಸ್ ಹೈಕಮಾಂಡ್ ಈ ಭಿನ್ನಮತಕ್ಕೆ ಯಾವ ಮದ್ದು ಅರೆಯಲಿದೆ ಎಂಬುದು ನಿಜಕ್ಕು ಕುತೂಹಲ ಮೂಡಿಸಿದೆ. 

Previous Post

ತರಗತಿಗೆ ಹಾಜರಾಗಲು ಲಸಿಕೆ ಕಡ್ಡಾಯವಿಲ್ಲ; DCM ಅಶ್ವಥ್ ನಾರಾಯಣ್ ಸ್ಪಷ್ಟನೆ

Next Post

ನಮ್ಮ ಜನರ ನೋವು ಸರ್ಕಾರಕ್ಕೆ ಕಾಣುತ್ತಿಲ್ಲ, ನಮಗೆ ಹಾಗೂ ನ್ಯಾಯಾಲಯಗಳಿಗೆ ಮಾತ್ರ ಕಾಣುತ್ತಿವೆ: ಡಿ.ಕೆ. ಶಿವಕುಮಾರ್ ಕಿಡಿ

Related Posts

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್
Top Story

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

by ಪ್ರತಿಧ್ವನಿ
October 23, 2025
0

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್ ರದ್ಧತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಕಾಯ್ದಿರಿಸಿದೆ....

Read moreDetails
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

October 23, 2025
ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ

ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ

October 23, 2025
ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ

ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ

October 23, 2025
Home Minister G. Parameshwar: ಸತೀಶ್ ಜಾರಕಿಹೊಳಿ ನಾಯಕತ್ವ ಮಾತು : ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ

Home Minister G. Parameshwar: ಸತೀಶ್ ಜಾರಕಿಹೊಳಿ ನಾಯಕತ್ವ ಮಾತು : ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ

October 23, 2025
Next Post
ರಾಜ್ಯದಿಂದ ಆಯ್ಕೆಯಾಗಿರುವ 25 ಸಂಸದರಲ್ಲಿ ಯಾರಾದರೂ ಒಬ್ಬರು ರಾಜ್ಯದ ಪರವಾಗಿ ಧ್ವನಿ ಎತ್ತಿದ್ದಾರಾ? – ಡಿ.ಕೆ. ಶಿವಕುಮಾರ್

ನಮ್ಮ ಜನರ ನೋವು ಸರ್ಕಾರಕ್ಕೆ ಕಾಣುತ್ತಿಲ್ಲ, ನಮಗೆ ಹಾಗೂ ನ್ಯಾಯಾಲಯಗಳಿಗೆ ಮಾತ್ರ ಕಾಣುತ್ತಿವೆ: ಡಿ.ಕೆ. ಶಿವಕುಮಾರ್ ಕಿಡಿ

Please login to join discussion

Recent News

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ
Top Story

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

by ಪ್ರತಿಧ್ವನಿ
October 23, 2025
BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್
Top Story

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

by ಪ್ರತಿಧ್ವನಿ
October 23, 2025
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ
Top Story

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

by ಪ್ರತಿಧ್ವನಿ
October 23, 2025
ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ
Top Story

ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ

by ಪ್ರತಿಧ್ವನಿ
October 23, 2025
ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ
Top Story

ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ

by ಪ್ರತಿಧ್ವನಿ
October 23, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

October 23, 2025
BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

October 23, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!