ಯಾರ ಮೇಲೆ ಯಾರಿಗೆ ಅಭಿಮಾನ ಬೆಳೆಯುತ್ತದೆ ಹೇಳಲು ಸಾಧ್ಯವಿಲ್ಲಾ. ಹಲವರು ಹಲವರ ಮೇಲೆ ಹಲವು ರೀತಿಯಲ್ಲಿ ತಮ್ಮ ಅಭಿಮಾನವನ್ನು ತೋರಿಸುತ್ತಾರೆ.ಕೆಲವರು ತಮ್ಮ ದೇಹದ ಮೇಲೆ ಟ್ಯಾಟೂ ಹಾಕಿಸಿಕೊಂಡರೆ, ಕೆಲವರು ದೇವಾಲಯ ಕಟ್ಟುತ್ತಾರೆ, ಕೆಲವರು ಹರಕೆ ಹೋರುತ್ತಾರೆ.ಇಲ್ಲೊಬ್ಬರು ಪುನೀತ್ ರಾಜಕುಮಾರ್ ಅಭಿಮಾನಿ ದಂಪತಿಗಳು ತಮ್ಮ ಮಗನಿಗೆ ಪುನೀತ್ ರಾಜಕುಮಾರ ಎಂದು ಹೆಸರು ನಾಮಕರಣ ಮಾಡುವ ಮೂಲಕ ತಮ್ಮ ಅಪ್ಪಟ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.
ಹೌದು ಸಿದ್ದಾಪುರ ತಾಲೂಕಿನ ಮುಗದೂರಿನಲ್ಲಿರುವ ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮದ ಹೆಸರಿನಲ್ಲಿ ಅನಾಥರ, ದಿಕ್ಕಿಲ್ಲದವರ, ಅಸಹಾಯಕರ, ವ್ರದ್ದರ ಸೇವೆ ಮಾಡುತ್ತಿರುವ ನಾಗರಾಜ ನಾಯ್ಕ ಹಾಗೂ ಮಮತಾ ನಾಯ್ಕ ದಂಪತಿಗಳು ತಮ್ಮ ಎರಡನೆ ಮಗನಿಗೆ ಪುನೀತ್ ರಾಜಕುಮಾರ ಎಂದು ಹೆಸರು ನಾಮಕರಣ ಮಾಡಿದ್ದಾರೆ.
ಮುಗದೂರಿನ ತಮ್ಮ ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮದಲ್ಲಿ ನಡೆದ ಪುನೀತ್ ರಾಜಕುಮಾರರವರ 3 ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ನಾಗರಾಜ ನಾಯ್ಕ ಹಾಗೂ ಮಮತಾ ನಾಯ್ಕ ದಂಪತಿಗಳು ತಮ್ಮ ಎರಡನೆ ಮಗನಿಗೆ ಪುನೀತ್ ರಾಜಕುಮಾರ ಎಂದು ಹೆಸರು ನಾಮಕರಣ ಮಾಡಿದ್ದಾರೆ.
ಅವರು ಪುನೀತ್ ರಾಜಕುಮಾರರವರ ಅಪ್ಪಟ ಅಭಿಮಾನಿಗಳಾಗಿದ್ದು ಈ ಹಿಂದೆ ಪುನೀತ್ ರಾಜಕುಮಾರ ರವರು ನಿಧನರಾದ ಸಂದರ್ಭದಲ್ಲಿ ತಾವು ನಡೆಸುತ್ತಿದ್ದ ಪ್ರಚಲಿತ ಆಶ್ರಯಧಾಮ ಅನಾಥಾಶ್ರಮಕ್ಕೆ ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮ ಎಂದು ಹೆಸರು ಬದಲಿಸಿ ಪುನೀತ್ ರಾಜಕುಮಾರ ರವರ ಮೇಲಿನ ಅಭಿಮಾನ ತೋರಿಸಿದ್ದರು.
ನಂತರ ತಮ್ಮ ಮೊದಲನೆ ಮಗನಿಗೆ ಕೂಡ ಯುವರಾಜ ಎಂದು ಹೆಸರಿಡುವ ಮೂಲಕ ತಾವು ಪುನೀತ್ ರಾಜಕುಮಾರ ಅಭಿಮಾನಿಗಳು ಎಂದು ಇನ್ನೊಮ್ಮೆ ಸಾಭೀತು ಮಾಡಿದ್ದರು. ಇದೀಗ ತಮ್ಮ ಎರಡನೆ ಮಗುನಿಗು ಕೂಡ ಪುನೀತ್ ರಾಜಕುಮಾರ ಎಂದು ಹೆಸರು ನಾಮಕರಣ ಮಾಡುವುದರ ಮೂಲಕ ನಾಗರಾಜ ನಾಯ್ಕ ಹಾಗೂ ಮಮತಾ ನಾಯ್ಕ ದಂಪತಿಗಳು ಪುನೀತ್ ರಾಜಕುಮಾರ ರವರ ಅಪ್ಪಟ ಅಭಿಮಾನವನ್ನು ತೋರಿಸಿದ್ದಾರೆ.
ಸಿದ್ದಾಪುರ ತಾಲೂಕಿನ ಮುಗದೂರಿನಲ್ಲಿ ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮದಲ್ಲಿ ನೂರಾರು ಅನಾಥರ ಸೇವೆ ನಡೆಸುತ್ತಿರುವ ನಾಗರಾಜ ನಾಯ್ಕ ದಂಪತಿಗಳು. ಅನಾಥರ ಬಾಳಿಗೆ ಬೆಳಕಾಗುವುದರ ಜೊತೆಗೆ ಆಶ್ರಯದಾತರಾಗಿದ್ದಾರೆ. ನೂರಾರು ಅನಾಥ ಶವಗಳಿಗೆ ಅಂತ್ಯಕ್ರೀಯೆ ನಡೆಸಿರುವ ಇವರು ನೂರಾರು ಜನರನ್ನು ಅವರ ಕುಟುಂಬಗಳಿಗೆ ತಲುಪಿಸುವ ಕೆಲಸ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಅಲ್ಲದೆ ಶಿವಮೊಗ್ಗ, ಹಾವೇರಿ ಜಿಲ್ಲೆಗಳಿಂದಲೂ ರಸ್ತೆಯ ಮೇಲೆ, ಬಸ್ ನಿಲ್ದಾಣಗಳಲ್ಲಿ ಅನಾಥ ಸ್ಥಿತಿಯಲ್ಲಿ ಇರುವವರನ್ನೂ, ಪೋಲಿಸರು, ಸಾರ್ವಜನಿಕರೂ, ಸಂಘ ಸಂಸ್ಥೆಗಳವರು ಕರೆತಂದು ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮಕ್ಕೆ ಸೇರಿಸುತ್ತಿದ್ದಾರೆ. ನಾಗರಾಜ ನಾಯ್ಕ ಹಾಗೂ ಮಮತಾ ನಾಯ್ಕ ದಂಪತಿಗಳು ಅನಾಥರ ಸೇವೆಗೆ ಹೆಸರುವಾಸಿ ಆಗಿದ್ದಾರೆ.
ನಾಗರಾಜ ನಾಯ್ಕ ಹಾಗೂ ಮಮತಾ ನಾಯ್ಕ ದಂಪತಿಗಳ ಈ ಕಾರ್ಯಕ್ಕೆ ವಿಶ್ವದ ಎಲ್ಲೆಡೆ ಇರುವ ಪುನೀತ್ ರಾಜಕುಮಾರ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದು ದಂಪತಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.