ಪವರ್ ಸ್ಟಾರ್ ದಿವಂಗತ ಪುನೀತ್ ರಾಜ್ ಕುಮಾರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕು ಎಂದು ಮಂಗಳೂರು ಪೊಲೀಸ್ ಕಮಿಷನರ್ ಆಗ್ರಹಿಸಿ ಟ್ವೀಟರ್ ನಲ್ಲಿ #PadmasriForAppu ಹ್ಯಾಸ್ ಟ್ಯಾಗ್ ಮೂಲಕ ಅಭಿಯಾನ ಶುರು ಮಾಡಿದ್ದಾರೆ. ಇದಕ್ಕೆ ನಾಡಿನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕೈ ಜೋಡಿಸಿದ್ದು ಪುನೀತ್ ಅವರಿಗೆ ಪದ್ಮಶ್ರೀ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹೌದು, ಅಕ್ಟೋಬರ್ 30 ರಂದು ಮಂಗಳೂರು ಕಮೀಷನರ್ ಶಶಿಕುಮಾರ್ ತಮ್ಮ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿ, ಕರ್ಣಾಟಕದ ಆಸ್ತು ಕಕನ್ನಡಿಗರ ಮನೆಮಗ ಅಪ್ಪುವಿಗೆ ಪದ್ಮಶ್ರೀ ಸಿಗಬೇಕು. ಅಪ್ಪು ಸ್ಪೂರ್ತಿಯ ಚಿಲುನೆ. ದೊಡ್ಮನೆ ಅಷ್ಟೇ ಅಲ್ಲ ಇಡೀ ಕರ್ನಾಟಕ ಆಪ್ತಬಂಧುವನ್ನಯ ಕಳೆದುಕೊಂಡಿದೆ ಎಂಬ ಚಿತ್ರವನ್ನು ಪೋಸ್ಟ್ ಮಾಡಿ #PadmasriForAppu ಎಂದು ಟ್ವೀಟ್ ಮಾಡಿದ್ದಾರೆ.
ಈ ಒಂದು ಟ್ವೀಟ್ಗೆ ನಾಡಿನ ಹಲವಾರು ಜನರು ಬೆಂಬಸಿದ್ದು ತಮ್ಮ ಅಭಿಪ್ರಾಯವನ್ನು ರಿ ಟ್ವೀಟ್ ಮಾಡು ಮೂಲಕ ಹಂಚಿಕೊಂಡಿದ್ದಾರೆ.
ಇವತ್ತು ಕರ್ನಾಟಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಪುನೀತ್ ರಾಜ್ ಕುಮಾರ್ ಅವರಿಗೆ ಪದ್ಮಶ್ರೀ ನೀಡುಬೇಕು ಎಂದು ಒತ್ತಾಯಿದ್ದು, ಯಾವ ಪ್ರಶಸ್ತಿ ಗೌರವಗಳಿಗಿಂತಲೂ ಪುನೀತ್ ರಾಜಕುಮಾರ್ ಜನತೆಯಿಂದ ಗಳಿಸಿರುವ ಪ್ರೀತಿ-ಅಭಿಮಾನ ದೊಡ್ಡದು. ಹೀಗಿದ್ದರೂ, ಪುನೀತ್ ಬದುಕಿದ್ದರೆ ತನ್ನ ನಟನೆ ಮತ್ತು ಸಾಮಾಜಿಕ ಕಾಳಜಿಯಿಂದಾಗಿ ಖಂಡಿತ ಪಡೆಯುತ್ತಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ಅವರಿಗೆ ಮರಣೋತ್ತರವಾಗಿ ನೀಡಬೇಕೆಂದು ಮನವಿ ಮಾಡುತ್ತೇನೆ ಎಂದು ಟ್ವೀಟಿಸಿ ಪ್ರಧಾನಿ ಮೋದಿ ಕಛೇರಿಯನ್ನು ಟ್ಯಾಗ್ ಮಾಡಿದ್ದಾರೆ.






