ಸಾಮಾನ್ಯವಾಗಿ, ಸೆಲೆಬ್ರಿಟಿಗಳು ಅಭಿಮಾನಿಗಳಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವುದಕ್ಕೆ ಬೌನ್ಸರ್ ಬಳಸುವುದೂ ಸಹಜ, ಆದರೆ ಶಾಲೆಯೊಂದು ಬೌನ್ಸರ್ ನೇಮಿಸಿಕೊಂಡಿದ್ದು, ಆ ಬೌನ್ಸರ್ ಪೋಷಕರಿಗೆ ಥಳಿಸಿದ ಘಟನೆ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ.
ಹೌದು, ಪುಣೆ ನಗರದ ಬಿಬ್ವೆವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕ್ಲೈನ್ ಮೆಮೋರಿಯಲ್ ಹೈಸ್ಕೂಲ್ಗೆ ಶುಲ್ಕದ ಬಗ್ಗೆ ಶಾಲಾ ಅಧಿಕಾರಿಗಳನ್ನು ಪ್ರಶ್ನಿಸಲು ತೆರಳಿದ್ದ ವಿದ್ಯಾರ್ಥಿಯ ಪೋಷಕರ ಮೇಲೆ ಮಹಿಳಾ ಬೌನ್ಸರ್ನಿಂದ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ.
ಮಂಗೇಶ್ ಗಾಯಕ್ವಾಡ್ ಅವರು ಬಿಬ್ವೆವಾಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದಾರೆ. ಪಾಲಕರು ಮತ್ತು ಶಾಲೆಯ ನಡುವೆ ಶುಲ್ಕದ ವಿಷಯದಲ್ಲಿ ಜಗಳ ನಡೆದಿದ್ದು, ನಂತರ ಹಲ್ಲೆ ಘಟನೆ ನಡೆದಿದೆ ಎಂದು ಹಿರಿಯ ಇನ್ಸ್ಪೆಕ್ಟರ್ ಹೇಳಿದ್ದಾರೆ.
ಮಹಿಳಾ ಬೌನ್ಸರ್ನಿಂದ ಮಂಗೇಶ್ ಗಾಯಕ್ವಾಡ್ ಹಲ್ಲೆಗೊಳಗಾದ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ. ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಶಾಲೆಗಳ ಆವರಣದಲ್ಲಿ ಬೌನ್ಸರ್ಗಳನ್ನು ಇಡಬಾರದು : ಮಹಾರಾಷ್ಟ್ರ ಕೌನ್ಸಿಲ್ನ ಉಪ ಸ್ಪೀಕರ್ ನೀಲಂ ಗೊರ್ಹೆ
ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶುಲ್ಕ ಪಾವತಿಸಲು ವಿಫಲವಾದಲ್ಲಿ ಆನ್ಲೈನ್ ತರಗತಿಗಳಿಗೆ ಹಾಜರಾಗುವುದನ್ನು ಶಾಲೆಗಳು ನಿಷೇಧಿಸಬಾರದು ಮತ್ತು ಶೈಕ್ಷಣಿಕ ವರ್ಷದ ಬಗ್ಗೆ ತಿಳಿದುಕೊಳ್ಳಲು ಬರುವ ಯಾವುದೇ ಪೋಷಕರನ್ನು ತಡೆಯಲು ಮತ್ತು ಶಾಲಾ ಆವರಣದಲ್ಲಿ ಬೌನ್ಸರ್ಗಳನ್ನು ಬಳಸಬಾರದು ಮತ್ತು ಇಡಬಾರದು ಎಂದು ಮಹಾರಾಷ್ಟ್ರ ಕೌನ್ಸಿಲ್ನ ಉಪ ಸ್ಪೀಕರ್ ನೀಲಂ ಗೋರ್ಹೆ ಶನಿವಾರ ಹೇಳಿದ್ದಾರೆ.
ಪುಣೆಯಲ್ಲಿ ನಡೆದ ಘಟನೆಯ ಕುರಿತು ಅವರು ಮಾತನಾಡುತ್ತಾ, ತಮ್ಮ ವಾರ್ಡ್ಗೆ ವಿಧಿಸಲಾದ ಹೆಚ್ಚುವರಿ ಶುಲ್ಕವನ್ನು ಪ್ರತಿಭಟಿಸಿದ ಪೋಷಕರ ಮೇಲೆ ಬೌನ್ಸರ್ಗಳು ಹಲ್ಲೆ ನಡೆಸಿದ್ದಾರೆ.
ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ ಶಿವಸೇನೆಯ ಹಿರಿಯ ನಾಯಕಿ, ಏನಾದರು ಸಮಸ್ಯೆ ಇದ್ದರೆ ಮಾತ್ರ ಪೋಷಕರು ಸಾಮಾನ್ಯವಾಗಿ ಶಾಲೆಯನ್ನು ಸಂಪರ್ಕಿಸುತತಾರೆ ಇಲ್ಲವೇ ಅವರು ಹೋಗುವುದಿಲ್ಲ ಆದರೆ “ಶಾಲೆಗಳು ಆನ್ಲೈನ್ ತರಗತಿಗಳಿಗೆ ಹಾಜರಾಗಲು ಅನುಮತಿಸದಿದ್ದರೆ ಅವರು ಪ್ರತಿಭಟನೆ ಮಾಡುವುದು ಸಹಜ. ಆದಾಗ್ಯೂ, ಪೋಷಕರು ನಿಗದಿತ ಶುಲ್ಕವನ್ನು ಶಾಲೆಗಳಿಗೆ ಪಾವತಿಸಬೇಕು. ಈ ಸಮಸ್ಯೆಗಳ ಪರಿಹಾರಕ್ಕೆ ಪಾಲಕರು-ಶಿಕ್ಷಕರ ಸಂಘ ಮುಂದಾಗಬೇಕು. ಎರಡೂ ಕಡೆಯ ಕುಂದುಕೊರತೆಗಳನ್ನು ಪರಿಹರಿಸಲು ಸಭೆ ಕರೆಯುವಂತೆ ಶಾಲಾ ಶಿಕ್ಷಣ ಸಚಿವೆ ವರ್ಷಾ ಗಾಯಕ್ವಾಡ್ ಮತ್ತು ಉನ್ನತ ಶಿಕ್ಷಣ ಸಚಿವ ಉದಯ್ ಸಾಮಂತ್ ಅವರಿಗೆ ಮನವಿ ಮಾಡಿದ್ದೇನೆ ಎಂದು ಅವರು ಹೇಳಿದರು.






