• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Pulwama Attack: ಪುಲ್ವಾಮಾ ದಾಳಿಗೆ 7 ವರ್ಷ: ಇಂದು ದೇಶ ಮರೆಯದ ಕರಾಳ ದಿನ

ಪ್ರತಿಧ್ವನಿ by ಪ್ರತಿಧ್ವನಿ
February 14, 2026
in Top Story, ದೇಶ, ರಾಜಕೀಯ, ವಿಶೇಷ
0
Pulwama Attack: ಪುಲ್ವಾಮಾ ದಾಳಿಗೆ 7 ವರ್ಷ: ಇಂದು ದೇಶ ಮರೆಯದ ಕರಾಳ ದಿನ
Share on WhatsAppShare on FacebookShare on Telegram
ADVERTISEMENT

ನವದೆಹಲಿ: ಪ್ರತಿ ವರ್ಷ ಫೆಬ್ರವರಿ 14ರಂದು ಪ್ರೇಮಿಗಳ ದಿನ ಆಚರಿಸಲಾಗುತ್ತದೆ. ಆದರೆ ಇದೇ ದಿನ ಭಾರತಕ್ಕೆ ಮರೆಯಲಾಗದ ದುಃಖದ ದಿನವೂ ಆಗಿದೆ. 7 ವರ್ಷಗಳ ಹಿಂದೆ ಭಾರತೀಯ ಸೈನ್ಯದ(Indian Army) ಮೇಲೆ ಭೀಕರ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಭದ್ರತಾ ಪಡೆಯ (CRPF) 40 ಯೋಧರು ಹುತಾತ್ಮರಾಗಿದ್ದರು.

DK Shivakumar & CM Siddaramaiah : ಸರ್‌ ನೀವೇ ನನ್ನ ಪಾಲಿನ ದೇವರು...! #siddaramaiah

2019ರ ಫೆಬ್ರವರಿ 14ರಂದು ಜಮ್ಮುವಿನಿಂದ ಶ್ರೀನಗರಕ್ಕೆ 78 ವಾಹನಗಳಲ್ಲಿ 2547 ಸಿಆರ್‌ಪಿಎಫ್ ಯೋಧರು ಪ್ರಯಾಣಿಸುತ್ತಿದ್ದರು. ಪುಲ್ವಾಮಾ ಜಿಲ್ಲೆಯ ಅವಂತಿಪೋರಾ ಬಳಿ ಈ ಭೀಕರ ದಾಳಿ ನಡೆಯಿತು.ಆತ್ಮಾಹುತಿ ದಾಳಿಕೋರನೊಬ್ಬ 100 ಕೆ.ಜಿ. ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ಯೋಧರ ಬಸ್‌ಗೆ ಡಿಕ್ಕಿ ಹೊಡೆಸಿದ್ದ. ಸ್ಫೋಟದ ತೀವ್ರತೆಗೆ ಬಸ್ ಸಂಪೂರ್ಣ ನಾಶವಾಯಿತು. 40 ಯೋಧರು ಸ್ಥಳದಲ್ಲೇ ಹುತಾತ್ಮರಾದರು.

ಘಟನೆ ನಡೆದ ಆರು ದಿನಗಳ ನಂತರ, ಕಾಶ್ಮೀರ ಪೊಲೀಸರಿಂದ ರಾಷ್ಟ್ರೀಯ ತನಿಖಾ ದಳ (NIA) ತನಿಖೆಯನ್ನು ವಹಿಸಿಕೊಂಡಿತು. ಈ ಉಗ್ರ ದಾಳಿ ಸಂಚು ರೂಪಿಸಿದ್ದು 23 ವರ್ಷದ ಜೈಶ್-ಎ-ಮೊಹಮ್ಮದ್(Jaish-e-Mohammed) ಉಗ್ರ ಮುದಾಸಿರ್ ಅಹ್ಮದ್ ಖಾನ್ ಎಂಬುದು ತನಿಖೆಯಿಂದ ಬಯಲಾಯಿತು. ನಂತರ ನಡೆದ ಎನ್‌ಕೌಂಟರ್‌ನಲ್ಲಿ ಸೇನೆ ಆತನನ್ನು ಹತ್ಯೆ ಮಾಡಿತ್ತು.

ಭಾರತದ ಪ್ರತಿಕ್ರಿಯೆ ಹೇಗಿತ್ತು..?

ಈ ದಾಳಿ ದೇಶಾದ್ಯಂತ ಖಂಡನೆಗೆ ಕಾರಣವಾಯಿತು. ಪ್ರಧಾನಿ ನರೇಂದ್ರ ಮೋದಿ ( Narendra Modi) ಅವರು ಯೋಧರನ್ನು ಕಳೆದುಕೊಂಡ ದುಃಖದ ಕಣ್ಣೀರಿಗೆ ಪ್ರತೀಕಾರ ಖಂಡಿತಾ ತೀರಿಸುತ್ತೇವೆ. ಶತ್ರುಗಳ ಜೊತೆ ಪ್ರತೀಕಾರ ತೀರಿಸಲು ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಘೋಷಿಸಿದ್ದರು. ಅದರಂತೆ ಪುಲ್ವಾಮಾ ದಾಳಿಯ 12 ದಿನಗಳ ಬಳಿಕ, ಭಾರತೀಯ ವಾಯುಸೇನೆ ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಉಗ್ರರ ತರಬೇತಿ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿತು. ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿ ಸುಮಾರು 300 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿತ್ತು. ಆದರೆ ಈ ಪುಲ್ವಾಮಾ ದಾಳಿ ಭಾರತ ಇತಿಹಾಸದಲ್ಲೇ ಅತ್ಯಂತ ಕರಾಳ ಘಟನೆಗಳಲ್ಲಿ ಒಂದಾಗಿ ಉಳಿದಿದೆ. ದೇಶದ ಜನರು ಹುತಾತ್ಮ ಯೋಧರನ್ನು ಇಂದು ಕೂಡ ಗೌರವದಿಂದ ಸ್ಮರಿಸುತ್ತಿದ್ದಾರೆ.

Abhishek Banerjee :  GST ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್‌ಗೆ ಟಾಂಗ್ ಕೊಟ್ಟ TMC ಸಂಸದ..!
Tags: IndiaIndian Armyindian army accidentpulwama attackPulwama Attack 2019Terrorterror attack
Previous Post

ಈಜಿಪ್ಟ್ ಸಮಾಧಿಯೊಳಗೆ ಭಾರತೀಯರ ಹೊಸ ವಿಷಯ ಬಹಿರಂಗ!

Next Post

ಶಾಲಾ ಮಕ್ಕಳಿಂದ ಗಾರೆ ಕೆಲಸ: ಮಂಡ್ಯದಲ್ಲಿ ಶಿಕ್ಷಕರ ವಿರುದ್ಧ ಆಕ್ರೋಶ

Related Posts

BREAKING NEWS : ಭಾರತಕ್ಕೆ ಬಹುದೊಡ್ಡ ರಾಜತಾಂತ್ರಿಕ ಗೆಲುವು ; ತೈಲ ಸಮಸ್ಯೆಗೆ ಪರಿಹಾರ ನೀಡಿದ ಕೇಂದ್ರ ಸರ್ಕಾರ..
Top Story

BREAKING NEWS : ಭಾರತಕ್ಕೆ ಬಹುದೊಡ್ಡ ರಾಜತಾಂತ್ರಿಕ ಗೆಲುವು ; ತೈಲ ಸಮಸ್ಯೆಗೆ ಪರಿಹಾರ ನೀಡಿದ ಕೇಂದ್ರ ಸರ್ಕಾರ..

by ಪ್ರತಿಧ್ವನಿ
March 12, 2026
0

ಬೆಂಗಳೂರು : ಅಂತರಾಷ್ಟ್ರೀಯ ಮಟ್ದಲ್ಲಿ ಭಾರತಕ್ಕೆ ರಾಜತಾಂತ್ರಿಕ ಬಹುದೊಡ್ಡ ಗೆಲುವಾಗಿದೆ. ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಎದುರಾಗಿರುವ ತೈಲ ಹಾಗೂ ಗ್ಯಾಸ್‌ ಸಿಲಿಂಡರ್‌ಗಳ ಅಭಾವದ ಹಿನ್ನೆಲೆಯಲ್ಲಿ ನಡೆದಿರುವ...

Read moreDetails
ಜನಾಶೀರ್ವಾದ, ಶಾಸಕರ ಬೆಂಬಲವೇ 17 ನೇ ಬಜೆಟ್‌ ಮಂಡನೆಗೆ ಕಾರಣ : ಸಿದ್ದರಾಮಯ್ಯ ಸಂತಸ..!

ಜನಾಶೀರ್ವಾದ, ಶಾಸಕರ ಬೆಂಬಲವೇ 17 ನೇ ಬಜೆಟ್‌ ಮಂಡನೆಗೆ ಕಾರಣ : ಸಿದ್ದರಾಮಯ್ಯ ಸಂತಸ..!

March 12, 2026

ವಿಧಾನಸಭೆ ಬಜೆಟ್ ಅಧಿವೇಶನ ನೇರಪ್ರಸಾರ..!

March 12, 2026
ಸಾಮಾಜಿಕ ಆರೈಕೆಯೂ ದುಡಿಮೆಯ ಪ್ರತಿಫಲವೂ

ಸಾಮಾಜಿಕ ಆರೈಕೆಯೂ ದುಡಿಮೆಯ ಪ್ರತಿಫಲವೂ

March 12, 2026
ಸರ್ವನಾಶದ ಹಾದಿಯೂ ಆಧಿಪತ್ಯದ ಹಂಬಲವೂ

ಸರ್ವನಾಶದ ಹಾದಿಯೂ ಆಧಿಪತ್ಯದ ಹಂಬಲವೂ

March 12, 2026
Next Post
ಶಾಲಾ ಮಕ್ಕಳಿಂದ ಗಾರೆ ಕೆಲಸ: ಮಂಡ್ಯದಲ್ಲಿ ಶಿಕ್ಷಕರ ವಿರುದ್ಧ ಆಕ್ರೋಶ

ಶಾಲಾ ಮಕ್ಕಳಿಂದ ಗಾರೆ ಕೆಲಸ: ಮಂಡ್ಯದಲ್ಲಿ ಶಿಕ್ಷಕರ ವಿರುದ್ಧ ಆಕ್ರೋಶ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada