ಶಿವಮೊಗ್ಗ ನಗರದಲ್ಲಿ ದಿನದಿಂದ ದಿನಕ್ಕೆ ಪುಡಿ ರೌಡಿಗಳ ಹಾವಳಿ ಹೆಚ್ಚಾಗುತ್ತಿದ್ದು ಪೊಲೀಸರು ಆರೋಪಿ ಯೋರ್ವನ ಕಾಲಿಗೆ ಗುಂಡೇಟು ಕೊಟ್ಟು ಸೆರೆಹಿಡಿದಿದ್ದಾರೆ.
ಮಹಿಳೆಯೊಬ್ಬರನ್ನು ಥಳಿಸಿ ಮೂರು ತಿಂಗಳ ಕಾಲ ಸೆರೆವಾಸ ಅನುಭವಿಸಿ ಜೈಲ್ಲಿನಿಂದ ವಾಪಸ್ ಆದ ಮೇಲೆ ಮಹಿಳೆಯ ಕಾರನ್ನು ಸುಟ್ಟು ಅಟ್ಟಹಾಸ ಮೆರೆದಿರುವ ರೌಡಿ ಪ್ರವೀಣ್ ಅಲಿಯಾಸ್ ಮೋಟು ಕಾಲಿಗೆ ಪೊಲೀಸರು ಗುಂಡೇಟು ನೀಡಿ ಬಂಧಿಸಿದ್ದಾರೆ. ಸ್ಥಳ ಮಹಜರು ವೇಳೆ ಆರೋಪಿ ಪ್ರವೀಣನ ಸಹಚರ ಸಚಿನ್ ಅಲಿಯಾಸ್ ಶ್ಯಾಡೋ ಮಹಿಳೆಗೆ ಅವಾಜ್ ಹಾಕಿ ದರ್ಪ ಮೆರೆದಿದ್ದಾನೆ.

ಜೈಲ್ ರಸ್ತೆಯಲ್ಲಿ ಟೀ ಸ್ಟಾಲ್ ಇಟ್ಟುಕೊಂಡಿರುವ ವನಜಾಕ್ಷಿ ಎಂಬ ಮಹಿಳೆ ಈ ಪುಡಿ ರೌಡಿ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಿದ್ದರು. ಗಣೇಶ ಉತ್ಸವ ಸಂದರ್ಭ ಈ ಗ್ಯಾಂಗ್ ಟೀ ಅಂಗಡಿಯಲ್ಲಿ ದಾಂಧಲೆ ನಡೆಸಿತ್ತು. ಪ್ರಕರಣ ಸಂಬಂಧ ಪ್ರವೀಣ್ ಮೂರು ತಿಂಗಳು ಜೈಲಿಗೆ ಹೋಗಿ ಬೇಲ್ ಮೇಲೆ ಹೊರಬಂದಿದ್ದ. ದೂರು ಕೊಟ್ಟ ಮಹಿಳೆಗೆ ಆವಾಜ್ ಹಾಕಿ ಪ್ರಕರಣ ಹಿಂಪಡೆಯಲು ಹೇಳಿದ್ದ. ಇದಕ್ಕೆ ತಲೆಕೆಡಿಸಿಕೊಳ್ಳದ ಮಹಿಳೆ ಅಂಗಡಿ ಸುಡೋದಾಗಿ ಬೆದರಿಕೆ ಹಾಕಿದ್ದ. ಭಾನುವಾರ ಮುಂಜಾನೆ ಮೂರು ಗಂಟೆಗೆ ವನಜಾಕ್ಷಿ ಮಗಳ ಕಾರ್ ಗೆ ಬೆಂಕಿ ಹಾಕಿ ಸುಟ್ಟು ತಲೆಮರೆಸಿಕೊಂಡಿದ್ದ.
ಸೋಮವಾರ ಬೆಳಗ್ಗೆ ಪ್ರವೀಣ ಅಲಿಯಾಸ್ ಮೋಟುವಿನ ಕಾಲಿಗೆ ಪೊಲೀಸರು ಗುಂಡೇಟು ಕೊಟ್ಟು ಬಂಧಿಸಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಪಿಎಸ್ ಐ ರಮೇಶ್ ಅವರು ಶಿವಮೊಗ್ಗ ತಾಲೂಕಿನ ಹೊಳೆ ಬೆನವಳ್ಳಿ ಗ್ರಾಮದ ಬಳಿ ರೌಡಿ ಪ್ರವೀಣನನ್ನು ಬಂಧಿಸಲು ಹೋದ ಸಮಯದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಕ್ರೈಂ ಪೊಲೀಸ್ ಕಾನ್ಸಟೇಬಲ್ ಶಿವರಾಜ್ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ನೋಡಿದ್ದಾನೆ. ಈ ವೇಳೆ ರೌಡಿ ಬಂಧನಕ್ಕೆ ವಿಶೇಷ ತಂಡದಲ್ಲಿದ್ದ ಗ್ರಾಮಾಂತರ ಪಿಎಸ್ ಐ ರಮೇಶ್ ಸ್ವಯಂ ರಕ್ಷಣೆಗಾಗಿ ರೌಡಿ ಪ್ರವೀಣ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಬಳಿಕ ಆತನನ್ನು ಬಂಧಿಸಿ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ಕರೆತಂದಿದ್ದಾರೆ. ಮೊನ್ನೆ ರೌಡಿ ಪ್ರವೀನ್ ಗೆ ಸಾಥ್ ಕೊಟ್ಟಿದ್ದ ರೌಡಿಗಳಾದ ಸಚಿನ್ ಅಲಿಯಾಸ್ ಸ್ಯಾಡು, ವಿಶಾಲ್ ಅಲಿಯಾಸ್ ದಾಳು, ನಿತೇಶ್, ಕಾರ್ತಿಕ್ ಅಲಿಯಾಸ್ ಚಿಕ್ಕಲ್ ಕಾರ್ತಿಕ್ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.