• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಡಾ.ಎಚ್.ಸಿ. ಸತ್ಯಂಗೆ ನಾಡೋಜ ನೀಡುವ ಮೊದಲು ಪರಿಶೀಲಿಸಿ: ಹಂಪಿ ಯೂನಿರ್ವರ್ಸಿಟಿಗೆ ಪತ್ರ..!

ಶೈಕ್ಷಣಿಕ ಸಮಗ್ರತೆ ಹಾಗೂ ಸಾರ್ವಜನಿಕ ವಿಶ್ವಾಸ ಉಳಿಸಿಕೊಳ್ಳಿ ಎಂದ ಸಮಿತಿ..

ಪ್ರತಿಧ್ವನಿ by ಪ್ರತಿಧ್ವನಿ
February 23, 2026
in Top Story, ಇದೀಗ, ಕರ್ನಾಟಕ, ಕ್ರೀಡೆ, ದೇಶ
0
ಡಾ.ಎಚ್.ಸಿ. ಸತ್ಯಂಗೆ ನಾಡೋಜ ನೀಡುವ ಮೊದಲು ಪರಿಶೀಲಿಸಿ: ಹಂಪಿ ಯೂನಿರ್ವರ್ಸಿಟಿಗೆ ಪತ್ರ..!
Share on WhatsAppShare on FacebookShare on Telegram

ಬೆಂಗಳೂರು : ಡಾ. ಎಚ್.ಸಿ.ಸತ್ಯಂ ಅವರಿಗೆ ಹಂಪಿ ವಿಶ್ವವಿದ್ಯಾಲಯವು ಪ್ರತಿಷ್ಠಿತ ನಾಡೋಜ ಪ್ರಶಸ್ತಿಯನ್ನು  (H.C.Sathyan Nadoja)ನೀಡುವ ತೀರ್ಮಾನ ಹಿಂಪಡೆಯಬೇಕೆಂದು ಸಾರ್ವಜನಿಕ ಹೊಣೆಗಾರಿಕೆ ಸಮಿತಿಯು ಒತ್ತಾಯಿಸಿದೆ. ಈ ಕುರಿತು ಹಂಪಿ ವಿಶ್ವವಿದ್ಯಾಲಯದ ಉಪಕುಲಪತಿಗಳಿಗೆ (Vice Chancellor) ಪತ್ರ ಬರೆದು ಆಗ್ರಹಿಸಿರುವ ಸಮಿತಿಯು, ಸತ್ಯಂ ಅವರಿಗೆ ಯಾವ ಮಾನದಂಡದ ಆಧಾರದ ಮೇಲೆ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಪ್ರಶ್ನಿಸಿದೆ? ನಾಡೋಜ ಪ್ರಶಸ್ತಿಯು ಅತ್ಯಂತ ಗೌರವಯುತವಾಗಿದ್ದು, ಅಲ್ಲದೆ ಸಜ್ಜನ ವ್ಯಕ್ತಿತ್ವದವನ್ನು ಪ್ರತಿಬಿಂಬಿಸುತ್ತದೆ.

ADVERTISEMENT
Siddaramaiah : ಬಿಜೆಪಿ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಟಾಂಗ್‌..! #byvijayendra #bsyediyurappa

ಹೀಗಾಗಿ ಇಂತಹ ಅತ್ತ್ಯುತ್ತಮವಾಗಿರುವ ಪ್ರಶಸ್ತಿಯನ್ನು ನೀಡುವ ವಿಚಾರದಲ್ಲಿ ನೀವು ಶೈಕ್ಷಣಿಕ ಸಮುದಾಯ ಹಾಗೂ ಸಾರ್ವಜನಿಕರ ವಿಶ್ವಾಸವನ್ನು ಉಳಿಸಿಕೊಳ್ಳುವುದು ಮುಖ್ಯವಾಗಿದೆ. ನೀವು ಪ್ರಶಸ್ತಿ ನೀಡಲು ಉದ್ದೇಶಿಸಿರುವ ವ್ಯಕ್ತಿಯ ವಿರುದ್ಧ ಕರ್ನಾಟಕ ಲೋಕಾಯುಕ್ತ (Karnataka Lokayukta) ಮತ್ತು ಇತರ ನ್ಯಾಯಾಂಗ ವೇದಿಕೆಗಳ ಮುಂದೆ ಡಾ. ಎಚ್. ಸಿ. ಸತ್ಯಂ (Dr. H C Sathyam)  ಅವರ ಪ್ರಕರಣಗಳ ವಿಚಾರಣೆ ಇನ್ನೂ ಬಾಕಿ ಇವೆ ಎಂದು ತಿಳಿದು ಬಂದಿದೆ. ಇಂತಹ ಕಾನೂನಿನ ವಿಚಾರಣೆಗಳು ನಿಜವಾಗಿಯೂ ಬಾಕಿ ಇದ್ದರೆ, ಈ ಸ್ಥಾನಮಾನದ ಗೌರವವನ್ನು ನೀಡುವ ಮೊದಲು ಎಚ್ಚರಿಕೆಯಿಂದ ನಿರ್ಧಾರ ಮಾಡಬೇಕಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ಸಿದ್ದರಾಮಯ್ಯನವರದ್ದು ಕುರ್ಚಿ ಬಿಟ್ಟುಕೊಡುವ ಜಾಯಮಾನವೇ ಅಲ್ಲ: ಕುಮಾರಸ್ವಾಮಿ

ಗುರುತರ ಆರೋಪವಿರುವ ಹಾಗೂ ಗಂಭೀರ ಪ್ರಕರಣಗಳಲ್ಲಿ ಆರೋಪಿತರಾಗಿರುವವರಿಗೆ ವಿಶೇಷ ಮನ್ನಣೆಯನ್ನು ನೀಡುವುದು ಸೂಕ್ತವಲ್ಲ. ನಿಮ್ಮ ಅಜಾಗರೂಕತೆಯಿಂದ ಪ್ರಶಸ್ತಿಯ ಘನತೆ, ವಿಶ್ವವಿದ್ಯಾಲಯದ ಖ್ಯಾತಿ ಮತ್ತು ಕರ್ನಾಟಕದ ಶೈಕ್ಷಣಿಕ ಮತ್ತು ಸಾರ್ವಜನಿಕ ಸಂಸ್ಥೆಗಳ ಗೌರವಕ್ಕೆ ಅಪಖ್ಯಾತಿ ತರಬಹುದು ಎಂದು ಸಾರ್ವಜನಿಕ ಹೊಣೆಗಾರಿಕೆ (committee for public accountability ) ಸಮಿತಿಯು ಎಚ್ಚರಿಸುವ ಮೂಲಕ ಸತ್ಯಂ ಅವರಿಗೆ ನಾಡೋಜ ಪ್ರಶಸ್ತಿಯನ್ನು ನೀಡುವ ನಿರ್ಧಾರದಿಂದ ಹಿಂದೆ ಸರಿಯುವಂತೆ ಒತ್ತಾಯಿಸಿದೆ.

Siddaramaiah : ಕಾರವಾರದಲ್ಲಿ ಸಿಎಂ ಸಿದ್ದರಾಮಯ್ಯ ಅಬ್ಬರಿಸಿದ ಮಾತು..! #sharanprakashpatil

ಅಲ್ಲದೆ ಈ ವರ್ಷದ ನಾಡೋಜ (Nadoja Award hampi kannada university) ಪ್ರಶಸ್ತಿಯ ಆಯ್ಕೆ ವಿಚಾರದಲ್ಲಿ ನೀವು ಅನುಸರಿಸಿರುವ ಮಾನದಂಡ ಮತ್ತು ಮೌಲ್ಯಮಾಪನ ಪ್ರಕ್ರಿಯೆಯನ್ನು ಸಾರ್ವಜನಿಕಗೊಳಿಸಬೇಕು. ನಾಮನಿರ್ದೇಶಿತರಿಗೆ ಸಂಬಂಧಿಸಿದಂತೆ ನಡೆಸಲಾದ ಶ್ರದ್ಧೆ, ವಿಜಿಲೆನ್ಸ್ ಕ್ಲಿಯರೆನ್ಸ್ ಮತ್ತು ಅವರ ಹಿನ್ನೆಲೆ ಪರಿಶೀಲನೆಯನ್ನು ಪಾರದರ್ಶಕವಾಗಿ ಬಹಿರಂಗಪಡಿಸಬೇಕು.

ಯಾವುದೇ ಕಾನೂನು ವಿಚಾರಣೆ ಅಥವಾ ಇನ್ನಿತರ ಪ್ರಕರಣಗಳು ನ್ಯಾಯಾಲಯದ ವ್ಯಾಪ್ತಿಯಲ್ಲಿ ಉಳಿದಿದ್ದರೆ, ಅವುಗಳ ಕೂಲಂಕುಷ ಪರಿಶೀಲನೆ ಮಾಡುವ ಮೂಲಕ ಸತ್ಯಾಸತ್ಯತೆ ಹೊರ ಬರುವವರೆಗೆ ಪ್ರಶಸ್ತಿ ಪ್ರದಾನವನ್ನು ಮುಂದೂಡಬೇಕು ಎಂದು ಆಗ್ರಹಿಸಿದೆ.

Siddaramaiah : ಕಾರವಾರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಸಿದ ಸಿಎಂ ಸಿದ್ದರಾಮಯ್ಯ..! #karwar

ಇನ್ನೂ ನಾಡೋಜ ಪ್ರಶಸ್ತಿಯು ವಿಶ್ವವಿದ್ಯಾನಿಲಯವು ನೀಡುವ ಅತ್ಯುನ್ನತ ಗೌರವಗಳಲ್ಲಿ ಒಂದಾಗಿದ್ದು, ಇದು ವ್ಯಕ್ತಿಯ ಶೈಕ್ಷಣಿಕವಾಗಿರುವ ಉತ್ತಮ ಸಾಧನೆಯನ್ನು ಪ್ರತಿಬಿಂಬಿಸುತ್ತದೆ. ಅಲ್ಲದೆ ಸಾರ್ವಜನಿಕ ಸಮಗ್ರತೆ ಮತ್ತು ನೈತಿಕತೆಯ ದೃಷ್ಟಿಕೋನವನ್ನು ಹೊಂದಿದೆ. ಸಾರ್ವಜನಿಕವಾಗಿ ಲಭ್ಯವಿರುವ ದಾಖಲೆಗಳಿಂದ ತಿಳಿದುಬರುವಂತೆ, ಡಾ. ಎಚ್. ಸಿ. ಸತ್ಯನ್ (hc sathyan) ವಿರುದ್ಧ ಕರ್ನಾಟಕ ಲೋಕಾಯುಕ್ತ ಮತ್ತು ಇತರ ನ್ಯಾಯಾಂಗ ವೇದಿಕೆಗಳ ಮುಂದಿರುವ ವಿಷಯಗಳು ಸೇರಿದಂತೆ ಕೆಲವು ಕಾನೂನು ಕ್ರಮಗಳು (Law Process) ಬಾಕಿ ಉಳಿದಿವೆ ಎಂದು ವರದಿಯಾಗಿದೆ. ಈ ಬಗ್ಗೆ ಪರಿಶೀಲಿಸಿ ಹೆಜ್ಜೆ ಇಡಬೇಕೆಂದು ಸಮಿತಿಯು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ರಾಜ್ಯಪಾಲರಿಗೂ (Governor Of Karnataka) ಪತ್ರ ಬರೆದು ಪ್ರಶಸ್ತಿಯು ದುರುಪಯೋಗವಾಗುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

Siddaramaiah : ಮುಖ್ಯಮಂತ್ರಿ ಚಂದ್ರು ಬಗ್ಗೆ ಸಿಎಂ ಸಿದ್ದರಾಮಯ್ಯ ಏನಂದ್ರು.! #mukhyamantrichandru #pratidhvani

26-03-2008 ರಂದು, ಕರ್ನಾಟಕ ಲೋಕಾಯುಕ್ತ ಪೊಲೀಸರು (ಮೈಸೂರು ವಿಭಾಗ) ಡಾ. ಎಚ್. ಸಿ. ಸತ್ಯನ್ ಅವರನ್ನು ಒಳಗೊಂಡ ಪ್ರಕರಣವನ್ನು ದಾಖಲಿಸಿದ್ದಾರೆ. CNR ಸಂಖ್ಯೆ: KAMSO I -00 457 8-20 12′ ವಿಶೇಷ ಪ್ರಕರಣ ಸಂಖ್ಯೆ 74/2012 ಎಂದು ಉಲ್ಲೇಖಿಸಲಾದ ಈ ವಿಷಯವು ಮೈಸೂರು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಮುಂದೆ ವಿಚಾರಣೆಗೆ ಬಾಕಿ ಇದೆ ಎಂದು ವರದಿಯಾಗಿದೆ. ಈ ಬಗ್ಗೆ ಎಲ್ಲವೂ ಸಂಪೂರ್ಣವಾಗಿ ಪರಿಶೀಲನೆ ಯಾಗಬೇಕೆಂದು ಸಮಿತಿಯು ಸರಣಿ ಪತ್ರಗಳ ಮೂಲಕ ಆಗ್ರಹಿಸಿದೆ.

Tags: Hampihampi kannada universityHAmpi universityKannadaKarnataka
Previous Post

ರೋಹಿಣಿ ಸಿಂಧೂರಿಗೆ ಬಿಗ್ ಶಾಕ್‌ ನೀಡಿದ ಹೈಕೋರ್ಟ್: ಪ್ರಕರಣದ ವಿವರ ಇಲ್ಲಿದೆ..!

Next Post

ಎಐ ಶೃಂಗಸಭೆಯಲ್ಲಿ ಶರ್ಟ್‌ ಬಿಚ್ಚಿ ಪ್ರತಿಭಟನೆ: ಸ್ವಪಕ್ಷೀಯರಿಗೆ ಮಾರ್ಗರೇಟ್ ಆಳ್ವಾ ಶಿಸ್ತಿನ ಪಾಠ

Related Posts

ಬೆಂಗಳೂರಿಗರೇ ಗಮನಿಸಿ: ಕೆಲ ಮಾರ್ಗಗಳಲ್ಲಿ ಸಂಚಾರ ವ್ಯತ್ಯಯ
ಕರ್ನಾಟಕ

ಬೆಂಗಳೂರಿಗರೇ ಗಮನಿಸಿ: ಕೆಲ ಮಾರ್ಗಗಳಲ್ಲಿ ಸಂಚಾರ ವ್ಯತ್ಯಯ

by ಪ್ರತಿಧ್ವನಿ
March 4, 2026
0

ಬಹುಕಾಲದ ನಿರೀಕ್ಷೆಯಾಗಿರುವ ಎಂ.ಜಿ. ರಸ್ತೆಯ ಮರು ಡಾಂಬರೀಕರಣ ಕಾಮಗಾರಿಯನ್ನು ಗುರುವಾರದಿಂದ ಆರಂಭಿಸಲು ಬೆಂಗಳೂರು ಸೆಂಟ್ರಲ್​​ ಸಿಟಿ ಕಾರ್ಪೊರೇಷನ್​​ ಸಜ್ಜಾಗಿದೆ. ಮೊದಲ ಹಂತದಲ್ಲಿ ಟ್ರಿನಿಟಿ ಸರ್ಕಲ್‌ನಿಂದ ಕಬ್ಬನ್ ಪಾರ್ಕ್ ಪೊಲೀಸ್...

Read moreDetails
ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

March 4, 2026
ಬಜೆಟ್‌ ಸಿದ್ಧತೆ : ಸರಣಿ ಸಭೆ ನಡೆಸಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌…

ಬಜೆಟ್‌ ಸಿದ್ಧತೆ : ಸರಣಿ ಸಭೆ ನಡೆಸಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌…

March 4, 2026
ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!

ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!

March 4, 2026
ಹಣದ ಬದಲಿಗೆ ಪತ್ರಿಕೋದ್ಯಕ್ಕೆ ಸತ್ಯದ ಬಡತನ ಕಾಡುತ್ತಿದೆ : ಕೆ.ವಿ. ಪ್ರಭಾಕರ್‌ ಬೇಸರ..!

ಹಣದ ಬದಲಿಗೆ ಪತ್ರಿಕೋದ್ಯಕ್ಕೆ ಸತ್ಯದ ಬಡತನ ಕಾಡುತ್ತಿದೆ : ಕೆ.ವಿ. ಪ್ರಭಾಕರ್‌ ಬೇಸರ..!

March 4, 2026
Next Post
ಎಐ ಶೃಂಗಸಭೆಯಲ್ಲಿ ಶರ್ಟ್‌ ಬಿಚ್ಚಿ ಪ್ರತಿಭಟನೆ: ಸ್ವಪಕ್ಷೀಯರಿಗೆ ಮಾರ್ಗರೇಟ್ ಆಳ್ವಾ ಶಿಸ್ತಿನ ಪಾಠ

ಎಐ ಶೃಂಗಸಭೆಯಲ್ಲಿ ಶರ್ಟ್‌ ಬಿಚ್ಚಿ ಪ್ರತಿಭಟನೆ: ಸ್ವಪಕ್ಷೀಯರಿಗೆ ಮಾರ್ಗರೇಟ್ ಆಳ್ವಾ ಶಿಸ್ತಿನ ಪಾಠ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada