ಪರೀಕ್ಷಾ ಅಕ್ರಮಗಳ ಕಿಂಗ್‌ಪಿನ್ ಆರ್.ಡಿ.ಪಾಟೀಲ್ (R D patil) ಮನೆಗೆ ಕಲಬುರಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ (Bjp candidate) 5 (umesh Jadhav) ಭೇಟಿ ನೀಡಿ ಮತ ಯಾಚನೆ ಮಾಡಿದ್ದಾರೆ. ಈ ರೀತಿ ಅಭ್ಯರ್ಥಿಯೋರ್ವ ರಾಜ್ಯದ ಯುವಕರ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದ್ದವನ ಮನೆಗೆ ಭೇಟಿ ನೀಡಿ ಸಹಕಾರ ಕೇಳಿರುವುದು ಕ್ಷೇತ್ರದ ಜನರು ಮತ್ತು ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿದೆ.

ಆರ್.ಡಿ.ಪಾಟೀಲ್ ಈತನ ಹೆಸರನ್ನು ನೀವು ಕೇಳಿರಲೇಬೇಕು. ಪಿಎಸ್‌ಐ (PSI scam) ಸೇರಿ ಹಲವು ಪರೀಕ್ಷಾ ಅಕ್ರಮಗಳ ರೂವಾರಿ.ಪಿಎಸ್‌ಐ ಪರೀಕ್ಷಾ ಅಕ್ರಮದ ಕಿಂಗ್‌ಪಿನ್ (King pin) ಎಂದು ಕುಖ್ಯಾತಿ ಪಡೆದಿರುವ ಆರ್.ಡಿ.ಪಾಟೀಲ್ ಮನೆಗೆ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಭೇಟಿ ನೀಡಿರೋದು ಸಂಚಲನ ಸೃಷ್ಟಿಸಿದೆ.

ಕಳೆದ ಬಿಜೆಪಿ ಸರ್ಕಾರದ (BJP Government) ಅವಧಿಯಲ್ಲಿ ನಡೆದಿದ್ದ ಪಿಎಸ್‌ಐ ಹಗರಣ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಹಗರಣದ ಪ್ರಮುಖ ಆರೋಪಿ ಆರ್.ಡಿ ಪಾಟೀಲ್, ಬಿಜೆಪಿಯವನಾ ಅಥವಾ ಕಾಂಗ್ರೆಸ್ (congress ಪಕ್ಷಕ್ಕೆ ಸೇರಿದವನಾ ಎನ್ನುವ ಬಗ್ಗೆ ಭಾರೀ ಪರ-ವಿರೋಧಗಳು ವ್ಯಕ್ತವಾಗಿದ್ದವು. ಇಂತಹ ಹೊತ್ತಲ್ಲೇ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಕಲಬುರಗಿಯ ಅಕ್ಕಮಹಾದೇವಿ ಕಾಲೋನಿಯಲ್ಲಿರುವ ಆರ್.ಡಿ ಪಾಟೀಲ್ ನಿವಾಸಕ್ಕೆ ಭೇಟಿ ನೀಡಿ ಊಟೋಪಚಾರ ಮಾಡುವ ಮೂಲಕ ಬೆಂಬಲ ಕೋರಿದ್ದಾರೆ.
ಮೊದಲೇ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಉಮೇಶ್ ಜಾಧವ್ ಮತ್ತೊಂದು ವಿವಾದವನ್ನ ಮೈಮೇಲೆ ಎಳೆದುಕೊಂಡಂತಾಗಿದೆ.. ಕಾಂಗ್ರೆಸ್ ಕೈಗೆ ಬಿಜೆಪಿಯೇ ಕೋಲು ಕೊಟ್ಟು ಹೊಡೆಸಿಕೊಂಡಂತಾಗಿದೆ..