ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಬುಧವಾರ ಸುದ್ದಿಘೋಷ್ಠಿ ನಡೆಸಿದ ಮಾರನೇ ದಿವಸದಿಂದ ಸಚಿವ ಅಶ್ವತ್ಥನಾರಾಯಣ ಸಂಬಂಧಿ ಪಿಎಸ್ಐ ಹಗರಣದ ಮತ್ತೊಬ್ಬ ಆರೋಪಿ ಎನ್ನಲಾದ ನಾಗೇಶ್ ಗೌಡ ತಲೆಮಾರಿಸಿಕೊಂಡಿದ್ದು ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ನಿನ್ನೆ ನಡೆದ ಸುದ್ದಿಘೋಷ್ಠಿಯಲ್ಲಿ, ಮಾಗಡಿಯ ದರ್ಶನ್ ಹಾಗೂ ಕುಣಿಗಲ್ ಮೂಲದ ನಾಗೇಶ್ ಗೌಡನನ್ನು ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

ದರ್ಶನ್ 50 ಅಂಕಗಳ ಲಿಖಿತ ಪರೀಕ್ಷೆಯಲ್ಲಿ 19 ಅಂಕಗಳನ್ನು ಗಳಿಸಿದ್ದರು ಮಲ್ಟಿಪಲ್ ಚಾಯ್ಸ್ ಪರೀಕ್ಷೆಯಲ್ಲಿ 150 ಅಂಕಗಳಿಗೆ 141 ಅಂಕಗಳನ್ನು ಗಳಿಸಿದ್ದಾರೆ. ಕ್ರಮವಾಗಿ ನಾಗೇಶ್ ಗೌಡ 29.5 ಹಾಗೂ 127.895 ಅಂಕಗಳನ್ನು ಗಳಿಸಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದರು.
ಇದೀಗ ನಾಗೇಶ್ ಗೌಡ ತಲೆಮಾರಿಸಿಕೊಂಡಿದ್ದು ಪೊಲೀಸರು ಶೋಧ ಕಾರ್ಯವನ್ನು ಮುಂದುವರೆಸಿದ್ದಾರೆ.