PSI ನೇಮಕಾತಿಯಲ್ಲಿ ಅಕ್ರಮವಾಗಿದೆ ಎಂದು ದಾಖಲೆ ಸಮೇತ ಒಂದಷ್ಟು ಮಾಹಿತಿ ನೀಡಿ ಸರ್ಕಾರದ ವಿರುದ್ಧ ಆರೋಪ ಮಾಡಿರುವ ಶಾಸಕ ಪ್ರಿಯಾಂಕಾ ಖರ್ಗೆ ಅವರೆಗೆ ಸಿಐಡಿ ಪೊಲೀಸರು ನೋಟಿಸ್ ನೀಡಿದ್ದಾರೆ. ಈ ಕುರಿತು ಇಂದು ಪತ್ರಿಕ್ರಿಯಿಸದ ಪ್ರಿಯಾಂಕ್ ಅವರು ತನಿಖಾ ಸಂಸ್ಥೆಗಳು ಅವರ ಕೈಲಿದೆ ಎಂದು ಏನುಬೇಕಾದರು ಮಾಡೊಕ್ ಆಗಲ್ಲ. ನಾನು ಆರೋಪಿಯಲ್ಲ ಏನು ಅಲ್ಲ ನನಗೆ ಏಕೆ ನೋಟಿಸ್ ನೀಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಕೆಪಿಸಿಸಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಭ್ರಷ್ಟಾಚಾರ ಮಸಿ ಬಳಿದುಕೊಂಡಿದೆ. ಅವರ ಹಗರಣವನ್ನು ಬಹಿರಂಗ ಮಾಡಿದಕ್ಕೆ ನನಗೆ ನೋಟಿಸ್ ನೀಡಿದ್ದಾರೆ. ಈ ಪ್ರಕರಣಕ್ಕು ನನಗೂ ಏನು ಸಂಬಂಧ. ಈ ಅಕ್ರಮದ ಹಿಂದೆ ಬೇರೆ ಕೈಗಳೇ ಇವೆ ಅವರನ್ನು ಬಿಟ್ಟು ನನಗೆ ನೋಟಿಸ್ ನೀಡಿದ್ದಾರೆ. ಈತರ ನೇಮಕಾತಿ ಮಾಡಿದ ಎಷ್ಟು ಜನರಿಗೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಮುಂದುವರೆದು, ನಾನು ನೀಡಿರುವ ಮಾಹಿತಿ ಇಲ್ಲಿ ಲಭ್ಯವಿಲ್ಲ ಎಂದು ಅಧಿಕಾರಿಗಳು ಹೇಳ್ತಿದ್ದೀರೆ ಅದಕ್ಕೆ ನನಗೆ ಆಶ್ಚರ್ಯವಾಗುತ್ತಿದೆ. ನಾನು ಸಾರ್ವಜನಿಕವಾಗಿ ಇರುವ ಮಾಹಿತಿಯನ್ನೇ ನೀಡಿದ್ದೇನೆ. ನಾನು ಎಲ್ಲಿಯಾದರೂ ಸ್ಟಿಂಗ್ ಮಾಡಿದ್ದೇನೆ, ತನಿಖಾ ವರದಿ ಮಾಡಿದ್ದೇನೆ, ಸಾರ್ವಜನಿಕ ವಲಯದಲ್ಲಿ ಬಿಟ್ಟು ಬೇರೆ ಮಾಹಿತಿ ನೀಡುತಿದ್ದೇನೆ ಎಂದು ಎಲ್ಲಿಯಾದರೂ ಹೇಳಿದ್ದೇನೆಯೇ ಇಲ್ಲ ಆದರೆ ಇವರು ನನಗೆ ನೋಟಿಸ್ ನೀಡ್ತಾರಲ್ಲ ಎಷ್ಟು ಸರಿ. ಆರೋಪಿ ದಿವ್ಯ ಮನೆಗೆ ಹೋದ ಗೃಹ ಸಚಿವರಿಗೆ ನೋಟಿಸ್ ನೀಡಿ, ಎಂದು ಹೇಳಿದ್ದಾರೆ.

ನೋಟಿಸ್ ನಲ್ಲಿ ಏನಿದೆ ?
ಪ್ರಿಯಾಂಕ ಖರ್ಗೆ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಿಐಡಿ ಪೊಲೀಸರು, ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಆರ್‌ಪಿಸಿ ಕಲಂ 90/160 ಅಡಿ ಪೊಲೀಸ್ ನೋಟಿಸ್ ನೀಡಿದ್ದಾರೆ. ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ಸಾಕ್ಷ್ಯಾಧಾರಗಳು ಇರುವುದಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುತ್ತೀರಿ. ಈ ಪ್ರಕರಣ ಸೂಕ್ಷ್ಮ ವಾಗಿರುವುದರಿಂದ ತಮ್ಮ ಬಳಿಯಿರುವ ಸಾಕ್ಷ್ಯಾಧಾರಗಳು ಹಾಗೂ ದಾಖಲೆಗಳನ್ನು ಪರಿಶೀಲಿಸಿ ತನಿಖೆ ಕೈಗೊಳ್ಳುವುದು ಅನಿವಾರ್ಯವಾಗಿದೆ.
ಹೀಗಾಗಿ ಸದರಿ ದಾಖಲೆಗಳನ್ನು ಸಂಗ್ರಹಿಸಲು ತನಿಖಾಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಬಳಿಯಿರುವ ಸಾಕ್ಷ್ಯಾಧಾರಗಳನ್ನು ಹಾಗೂ ದಾಖಲೆಗಳನ್ನು ಏ. 25 ರಂದು ಸಿಐಡಿ ಕಚೇರಿಯಲ್ಲಿರುವ ಸಹಾಯಕ ತನಿಖಾಧಿಕಾರಿಗಳ ಸಮಕ್ಷಮ ಸಲ್ಲಿಸುವಂತೆ ಸೂಚಿಸಿದೆ ಎಂದು ಸಹಾಯಕ ತನಿಖಾಧಿಕಾರಿ ಪಿ.ನರಸಿಂಹಮೂರ್ತಿ ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ.





